ವಿಟ್ಲ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಚರ್ಚ್ ಸಭಾಭವನದ ಫಿನಿಶಿಂಗ್ ಕಾಮಗಾರಿ ಮಾಡುತ್ತಿದ್ದ ವೇಳೆ ಲಕ್ನೋ ಮೂಲದ ಕಾರ್ಮಿಕ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ವಿಟ್ಲ ಶೋಕಮಾತೆ ಇಗರ್ಜಿಯ ಅಧೀನಕ್ಕೊಳಪಟ್ಟ ಸಭಾಭವನದ ಫಿನಿಶಿಂಗ್ ಕೆಲಸ ಮಾಡುತ್ತಿದ್ದ ಲಕ್ನೋ ಪಿಪ್ರಾ ಗೂಮ್ ಮೂಲದ ಮೂಲದ ಕಾರ್ಮಿಕ ಜಯ ಪ್ರಕಾಶ್(25) ಮೃತಪಟ್ಟ ಕಾರ್ಮಿಕ ಎನ್ನಲಾಗಿದೆ.

ಏ. 26 ರ ಸಂಜೆ ದುರ್ಘಟನೆ ಸಂಭವಿಸಿತ್ತು. ಚಿಕಿತ್ಸೆಗೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲಕ್ನೋ ಮೂಲದ ಕಾರ್ಮಿಕ ಜಯ ಪ್ರಕಾಶ್ ಅಸುನೀಗಿದ್ದಾರೆ.

ಅಂತ್ಯಸಂಸ್ಕಾರಕ್ಕಾಗಿ ಶವವನ್ನು ಸ್ವಗ್ರಾಮಕ್ಕೆ ಕಳುಹಿಸಲು ಪ್ರಯತ್ನ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

Related Posts

Leave a Reply

Your email address will not be published.

How Can We Help You?