ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗು ದಿನ ಆಚರಣೆ; ಆಜಾ ದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜೂನ್ 21 ರ ವರೆಗೆ ನಗೆ ಯೋಗ ಅಭಿಯಾನ – ರಂಗ ಲಕ್ಷ್ಮಿ ಶ್ರೀನಿವಾಸ್

ಬೆಂಗಳೂರು, ಏ, 27; ಮೇ ತಿಂಗಳ ಮೊದಲ ಭಾನುವಾರದ ವಿಶ್ವ ನಗು ದಿನಾಚರಣೆಯಿಂದ ಜೂನ್ 21 ರ ವಿಶ್ವ ಯೋಗದ ದಿನದವರೆಗೆ ನಗೆ ಯೋಗ ಅಭಿಯಾನ ನಡೆಸಲಾಗುವುದು ಎಂದು ಅಂತರರಾಷ್ಟ್ರೀಯ ನಗೆಯೋಗ ತರಬೇತಿದಾರರು, ಗಿನ್ನೀಸ್ ವಿಶ್ವ ದಾಖಲೆ ಸ್ಥಾಪಿಸಿರುವ ನಗೆಯೋಗ ತಜ್ಞೆ ರಂಗಲಕ್ಷ್ಮಿ ಶ್ರೀನಿವಾಸ್ ಹೇಳಿದ್ದಾರೆ.

ಸ್ವಾತಂತ್ರ್ಯ ದೊರೆತ 75 ನೇ ವರ್ಷಾಚರಣೆಯ ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆಯನ್ನು ಯೋಗದ ಮತ್ತೊಂದು ಆಯಾಮವಾಗಿರುವ ನಗೆಯೋಗದ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗು ದಿನವನ್ನು ವಿಶ್ವದ 110 ಕ್ಕಿಂತ ಅಧಿಕ ದೇಶಗಳು ಆರೋಗ್ಯ, ಸಂತೋಷ ಹಾಗೂ ವಿಶ್ವ ಶಾಂತಿಗಾಗಿ ನಗೆ ದಿನ ಆಚರಿಸುತ್ತವೆ. ಮೇ ಒಂದು ಭಾನುವಾರದಂದು ಬೆಳಿಗ್ಗೆ 8 ರಿಂದ 9.30ಗಂಟೆಯ ತನಕ ಬಸವನಗುಡಿಯಲ್ಲಿ ನಗೆಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.

ನಗು ಸರ್ವರೋಗಗಳ ನಿವಾರಣೆಗೆ ಅತ್ಯುತ್ತಮ ದಿವೌಷಧ. ಈಗಿನ ಪರಿಸ್ಥಿತಿಯಲ್ಲಿ ನಗುವಿನ ಪ್ರಯೋಜನ ಪಡೆಯಲು ಪ್ರತಿದಿನ 10 ರಿಂದ – 15 ನಿಮಿಷ ನಗಲೇ ಬೇಕಾದ ಅವಶ್ಯಕತೆ ಇದೆ. ಈ ಆಧುನಿಕ ಯುಗದಲ್ಲಿ ನಗೆಯೋಗ ವ್ಯಾಯಾಮ ನಗಲು ಅತ್ಯಂತ ಸಮರ್ಥ ಸಾಧನವಾಗಿದೆ. ನಗೆಯೋಗದ ಮೂಲಕ ನಗುವಾಗ ಎಲ್ಲಾ ರೀತಿಯ ಒತ್ತಡಗಳು ದೂರಸರಿದು, ರೋಗ ನಿರೋಧಕ ಶಕ್ತಿ ಅಧಿಕವಾಗಿ ಮತ್ತು ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆಯಾಗುತ್ತದೆ. ಸೋಂಕು ನಿವಾರಣೆ ಸಹ ಆಗುತ್ತದೆ. ಇದು ಉಚಿತ ಕಾರ್ಯಕ್ರಮವಾಗಿದ್ದು, ಭಾಗವಹಿಸಲು ಇಚ್ಛೆ ಪಡುವ ಆಸಕ್ತರು ನೋಂದಣಿ ಮಾಡಿಕೊಳ್ಳಲು – 8197661655 / 9448679023 ಈ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಅವರು ಕೋರಿದ್ದಾರೆ.

Related Posts

Leave a Reply

Your email address will not be published.

How Can We Help You?