ದೇಶದಲ್ಲೇ ಮೊದಲ ಬಿಜೆಪಿ ಸಮಾವೇಶ ‘ಕಮಲೋತ್ಸವ’ : ನಳಿನ್ ಕುಮಾರ್ ಕಟೀಲ್

ಅವರು ಇಂದು ಗಂಜಿಮಠ ದ ಒಡ್ಡೂರು ಫಾರ್ಮ್ ನಲ್ಲಿ ಬಿಜೆಪಿಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಯ ಕಮಲೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ರಾಜೇಶ್ ನಾಯ್ಕ್ ಬಂಟ್ವಾಳ ಶಾಸಕ ರಾದ ಬಳಿಕ ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಗಲಭೆಗೆ, ನಿಷೇದಾ ಜ್ಞೆಗೆ ಅವಕಾಶ ನೀಡದೆ ಜನತೆ ನೆಮ್ಮದಿ ಗೆ ಕಾರಣ ಕರ್ತರಾಗಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 1500 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡಿದ ಹೆಗ್ಗಳಿಕೆಗೆ ಬಂಟ್ವಾಳ ದ ಶಾಸಕ ರಾಜೇಶ್ ನಾಯ್ಕ್ ಪಾತ್ರರಾಗಿದ್ದಾರೆ ಎಂದು ನಳಿನ್ ಕುಮಾರ್ ಶುಭ ಹಾರೈಸಿದರು.

ರಾಜ್ಯ ಬಂದರು, ಮೀನುಗಾರಿಕಾ ಸಚಿವ ಎಸ್.ಅಂಗಾರ ಮಾತನಾಡುತ್ತಾ,ಕಾರ್ಯ ಕರ್ತರ ಸಂಘಟನೆಯ ದೃಷ್ಟಿಯಿಂದ ಮಹತ್ವದ ಕಾರ್ಯಕ್ರಮ ವಾಗಿದೆ ಎಂದು ಶುಭ ಹಾರೈಸಿದರು. ಶಾಸಕ ಡಾ.ಭರತ್ ಶೆಟ್ಟಿ ಮಾತನಾಡುತ್ತಾ ಕಮಲೋತ್ಸವ ಬಿಜೆಪಿ ಕಾರ್ಯ ಕರ್ತರ ಕುಟುಂಬದ ಸದಸ್ಯರ ಸಮಾವೇಶ, ಅಭಿವೃದ್ಧಿ ಯ ಸಾಧನೆಯ ಸಮಾವೇಶ ಇದಾಗಿದೆ ಎಂದು ತಿಳಿಸಿದ್ದಾರೆ

.ಕಮಲೋತ್ಸವದಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳು ತಿಂಡಿಪ್ರಿಯರಿಗಾಗಿ ಸಿದ್ದಗೊಂಡಿತ್ತು. ಬೆಳಗ್ಗಿನ ಉಪಹಾರಕ್ಕೆ ದೋಸೆ, ಇಡ್ಲಿ, ಸೇಮಿಗೆ, ಪತ್ರೋಡೆ, ಬಸಳೆ ಪುಂಡಿ, ಜೈನ್ ಕೇಕ್, ಅವಲಕ್ಕಿ ಇತ್ತು. ಕಬ್ಬಿನ ಹಾಲು, ಸೋಡಾ ಶರ್‍ಬತ್, ಗೋಲಿ ಸೋಡಾ, ಕಲ್ಲಂಗಡಿ, ಐಸ್‍ಕ್ಯಾಂಡಿ ಬಿಸಿಲಿನಿಂದ ದಾಹ ತಣಿಸಿತು. ಟೈಂಪಾಸ್‍ಗಾಗಿ ಚುರುಮುರಿ ಸವಿಯಬಹುದಾಗಿತ್ತು. ಭರ್ಜರಿ ಭೋಜನದ ವ್ಯವಸ್ಥೆಯೂ ಇತ್ತು. ಮಕ್ಕಳಿಗಾಗಿ ಜಾಂಯಿಟ್‍ವೀಲ್, ತಿರುಗುವ ಕುದುರೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ವೇದಿಕೆಯಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮ ಮನೋರಂಜನೆ ನೀಡಿತು. ವಿವಿಧ ಆಟೋಟ ಸ್ಫರ್ಧೆಗಳು ನಡೆದವು. ಒಡ್ಡೂರು ಫಾರ್ಮ್‍ನ ವಿಶೇಷತೆಗಳಾದ ವಿಶಾಲವಾದ ಕೆರೆ, ಗೋವುಗಳು, ತೋಟವನ್ನು ವೀಕ್ಷಿಸಿ ಪುಳಕಗೊಂಡರು.

ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಧ್ಯಕ್ಷ ಸುದರ್ಶನ್ ಮೂಡಬಿದ್ರೆ,ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಿಯೋನಿಸ್ಕ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಸದಸ್ಯೆ ಸುಲೋಚನಾ ಭಟ್ ,ಬಿಜೆಪಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ದೇವಣ್ಣ ಪ್ರೂಜಾರಿ, ಮೊದಲಾದವರು ಉಪಸ್ಥಿತರಿದ್ದರು. ಶಾಸಕ ರಾ ಜೇಶ್ ನಾಯ್ಕ್ ಅಧ್ಯಕ್ಷ ತೆ ವಹಿಸಿದ್ದರು. ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.

How Can We Help You?