ಎ.ಜೆ. ಇನ್ಸ್ಟಿಟ್ಯೂಟ್‌ಆಫ್ ಮ್ಯಾನೇಜ್‌ಮೆಂಟಿನಲ್ಲಿ ವಿದ್ಯಾರ್ಥಿಗಳು ರಚಿಸಿದ ಕಿರುಚಿತ್ರಗಳ ಬಿಡುಗಡೆ ಮತ್ತು ಜ್ಯೂನಿಯರ್ ಜೆ.ಸಿ.ಐ. ಘಟಕದ ಉದ್ಘಾಟನೆ

ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ (ಎಲ್.ಎಂ.ಇ.ಟಿ) ಅಂಗ ಸಂಸ್ಥೆಯಾದ ಎ. ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಧೆಯಲ್ಲಿ ಎಂ.ಬಿ.ಎ. ವಿದ್ಯಾರ್ಥಿಗಳು ಸಾಮಾಜಿಕ ವಿಷಯಗಳ ಮೇಲೆ ರಚಿಸಿದ ಕಿರುಚಿತ್ರಗಳ ಬಿಡುಗಡೆ, ಪ್ರದರ್ಶನ ಮತ್ತು ಸಂಸ್ಧೆಯಲ್ಲಿ ಜ್ಯೂನಿಯರ್ ಜೆ.ಸಿ.ಐ. ಘಟಕದ ಉದ್ಘಾಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮೊದಲಿಗೆ ಮಂಗಳೂರು ವಿಶ್ವವಿದ್ಯಾಲಯದ ಎಮ್.ಕಾಂ.ನಲ್ಲಿ ಪ್ರಥಮ ರ್‍ಯಾಂಕ್ ಪಡೆದ ಹಾಗೂ ನಮ್ಮ ಸಂಸ್ಥೆಯಲ್ಲಿ ಸಹಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಕು| ಶೀತಲ್ ನಾಯಕ್ ಇವರನ್ನು ಶ್ರೀಮತಿ ಅನೀಶಾ ಗಂಗೂಲಿ, ಅಧ್ಯಕ್ಷರು, ಜೆ.ಸಿ.ಐ., ಇಂಪಾಕ್ಟ್, ಮಂಗಳೂರು ಇವರು ಸನ್ಮಾನಿಸಿದರು. ಕಿರುಚಿತ್ರಗಳ ಬಿಡುಗಡೆ ಹಾಗೂ ಪ್ರದರ್ಶನದ ನಂತರ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ತದನಂತರ, ಸಂಸ್ಥೆಯಲ್ಲಿ ಜ್ಯೂನಿಯರ್ ಜೆ.ಸಿ.ಐ. ಘಟಕದ ಉದ್ಘಾಟನೆ ನಡೆಸಿ, ಶ್ರೀಮತಿ ಅನೀಶಾ ಗಂಗೂಲಿ, ಅಧ್ಯಕ್ಷರು, ಜೆ.ಸಿ.ಐ., ಇಂಪಾಕ್ಟ್, ಮಂಗಳೂರು ಮತ್ತು ಸಂಸ್ಥೆಯ ನಿರ್ದೇಶಕರಾದ ಡಾ| ಟಿ. ಜಯಪ್ರಕಾಶ್ ರಾವ್ ಸಂಸ್ಥೆಗಳ ನಡುವಿನ ಒಡಂಬಡಿಕೆಗೆ ಸಹಿ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ದೀಪಕ್ ಗಂಗೂಲಿ, ವಲಯ ಉಪಾಧ್ಯಕ್ಷರು, ಜೆ.ಸಿ.ಐ., ಮಂಗಳೂರು ಇವರು ವಿದ್ಯಾರ್ಥಿಗಳ ಪ್ರತಿಭೆಗಳಿಗನುಗುಣವಾಗಿ ತರಬೇತಿಯನ್ನು ನೀಡುವ ಸಂಪನ್ಮೂಲ ವ್ಯಕ್ತಿಗಳನ್ನು ಜೆ.ಸಿ.ಐ. ಮುಖಾಂತರ ಒದಗಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ| ಟಿ. ಜಯಪ್ರಕಾಶ್ ರಾವ್ ಇವರು ಸುಮಾರು 100 ವಿದ್ಯಾರ್ಥಿಗಳು ಜ್ಯೂನಿಯರ್ ಜೆ.ಸಿ.ಐ. ಸದಸ್ಯತ್ವವನ್ನು ಪಡೆದುಕೊಂಡಿದ್ದು, ಜೆ.ಸಿ.ಐ.ನ ತತ್ವಗಳೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ವೇದಿಕೆಯನ್ನು ಒದಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಸುಭಾಷ್ ಬಂಗೇರ, ರಾಷ್ಟ್ರೀಯ ತರಬೇತುದಾರ, ಜೆ.ಸಿ.ಐ., ಇವರು ವಿದ್ಯಾರ್ಥಿಗಳಿಗೆ ಜೆ.ಸಿ.ಐ. ಕಾರ್ಯಕ್ರಮಗಳ ಮಹತ್ವದ ಕುರಿತು ತರಬೇತಿ ನಡೆಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ, ನಿರ್ದೇಶಕಿಯಾದ ಶ್ರೀಮತಿ ಆಶ್ರಿತಾ ಪಿ.ಶೆಟ್ಟಿ, ಶ್ರೀ ರವಿರಾಜ್, ಪೂರ್ವ ಅಧ್ಯಕ್ಷರು, ಜೆ.ಸಿ.ಐ, ಮಂಗಳೂರು, ಸಂಸ್ಥೆಯ ಡೀನ್ ಡಾ| ವಿಜಯ ಕುಮಾರ್, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶ್ರೀ ಚೇತನ್ ಕುಮಾರ್, ಪ್ರಾಧ್ಯಾಪಕರುಗಳಾದ ಶ್ರೀ ಮಹೇಶ್ ಪಿ.ಜಿ., ಕು| ಶೀತಲ್ ನಾಯಕ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಧ್ಯಾಪಕರುಗಳಾದ ಶ್ರೀಮತಿ ರೋಶೆಲ್ಲಾ ಡಿಕೋಸ್ಟಾ ಅತಿಥಿಗಳನ್ನು ಸಭೆಗೆ ಪರಿಚಯಿಸಿ, ಸ್ವಾಗತಿಸಿದರು. ಕು| ದೀಕ್ಷಾ ರಾವ್ ಇವರು ವಂದನಾರ್ಪಣೆಗೈದರು.
ಕಾಲೇಜಿನ ವಿದ್ಯಾರ್ಥಿನಿಯಾದ ಕು| ಐಶ್ವರ್ಯ ರೋಝ್ ಮ್ಯಾಥೀವ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.

Related Posts

Leave a Reply

Your email address will not be published.

How Can We Help You?