ಎ. 30 ರಂದು ಮಂಡ್ಯದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿಂದ ಹಿರಿಯ ಕಲಾವಿದರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಪ್ರಸ್ ಕ್ಲಬ್ ಕೌನ್ಸಿಲ್ ನಿಂದ ಹಿರಿಯ ಕಲಾವಿದರಾದ ಭಾನು ಪ್ರಕಾಶ್, ಕೃಷ್ಣ ಪ್ರಸಾದ್, ಅನಿಕ ಪವಿತ್ರ ರೆಡ್ಡಿ, ಚಿತ್ರಾ ಹೊನ್ನಾವರ ಸೇರಿ 60 ಮಂದಿ ಕಲಾವಿದರಿಗೆ ಇದೇ 30 ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಕಲಾಮಂದಿರದಲ್ಲಿ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷ ಡಾ.ಟಿ ಶಿವಕುಮಾರ್ ನಾಗರನವಿಲೆ ತಿಳಿಸಿದ್ದಾರೆ.ಕೆ.ಪಿ.ಸಿ.ಸಿ.ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ರವಿ ಸಂತು ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್, ಉಪಾಧ್ಯಕ್ಷ ಜಿ.ಎನ್ ರವಿಕುಮಾರ್, ಜೋ.ಸೈಮನ್, ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.ಕಲಾವಿದರಾದ ಜಯಸಿಂಹ, ನೀನಾ ಪಾಟೀಲ್, ರಾಜಲಕ್ಷ್ಮಿ ಗಂಗಾಧರ್, ರವಿರಾಜ್, ಭೋಜಣ್ಣ, ಓಂಕಾರ್ ಆನಂದ್, ರಘುನಾಥ, ಕೃಷ್ಣ ಬಲಭದ್ರಿ ಹಾಗೂ ಇನ್ನೂ ಹಲವಾರು ಹಿರಿಯ ಕಲಾವಿದರು ‘ರಾಜ್ಯ ಸೇವಾ ರತ್ನ’ಪ್ರಶಸ್ತಿ ನೀಡಲಾಗುತ್ತಿದೆ.ಅಂದು ನಮ್ಮ ಹೆಮ್ಮೆಯ ಮುತ್ತು-ರತ್ನಗಳಾದ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಗೀತ ನಮನ ಕಾರ್ಯಕ್ರಮವಿರುವುದು. ಕಲಾವಿದರು ಮುತ್ತು-ರತ್ನರ ಗೀತೆಯನ್ನು ಹಾಡಿ ವೇದಿಕೆಗೆ ಮೆರಗು ತರಲಿದ್ದಾರೆ.

Related Posts

Leave a Reply

Your email address will not be published.

How Can We Help You?