ಸುಳ್ಳು ಹೇಳಿ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಗೆ ಕ್ಲಾಸ್

ಸುಳ್ಳು ಹೇಳಿ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡ ಘಟನೆ ಕುಂದಾಪರದಲ್ಲಿ ನಡೆದಿದೆ. ಉತ್ತರಪ್ರದೇಶದ ಮೂಲದವನಾದ ಈತ ತನಗೆ ಕಾಲು ಸರಿ ಇಲ್ಲ ಹಾಗೂ ಮಾತು ಬರುವುದಿಲ್ಲ ಎನ್ನುವುದಾಗಿ ಒಂದು ಡಾಕ್ಟರ್ ಸರ್ಟಿಪಿಕೆಟ್ ಮಾಡಿಕೊಂಡು ಕುಂದಾಪುರದ ಆಸುಪಾಸಿನಲ್ಲಿ ತಿರುಗಾಡುತ್ತಿದ್ದು. ಮನೆ ಮನೆಗೆ, ಹಾಗೂ ಅಂಗಡಿ ಮುಂಗಟ್ಟುಗಳ ಬಳಿ ತೆರಳಿ ಈ ಸರ್ಟಿಫಿಕೇಟ್ ತೋರಿಸಿ, ದೊಡ್ದ ಡ್ರಾಮಾ ಮಾಡಿ ಹಣ ಪಡೆಯುತ್ತಿದ್ದ. ಈತ ಹಲವು ಊರುಗಳಲ್ಲಿ ಇದೆ ರೀತಿ ನಾಟಕ ಮಾಡಿದ್ದು ಈತನ ನಾಟಕ ಎಲ್ಲು ಕೂಡ ಬಯಲಾಗಿರಲಿಲ್ಲ. ನಾಟಕದ ಜೀವನ ಕೆಲವು ದಿನ ಎನ್ನುವಂತೆ ಕುಂದಾಪುರದ ಪರಿಸರದಲ್ಲಿ ಸಿಕ್ಕಿ ಬಿದ್ದಿದ್ದಾನೆ.

ದಾರಿ ಮೇಲೆ ಹೋಗುವಾಗ ಸೀದಾ ನಡೆದುಕೊಂಡು ಬಂದಿದ್ದು, ಮನೆ ಕಾಣಿಸಿದಾಗ ಮಾತ್ರ ಮೂಕ ಹಾಗೂ ಕುಂಟ ನಂತೆ ಡ್ರಾಮಾ ಮಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನ ಸುಮಾರು 1:30 ಗಂಟೆ ವಿಚಾರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಇಂದಿನ ಈ ಸಮಾಜದಲ್ಲಿ ಈ ರೀತಿಯ ಕಳ್ಳಾಟೀಕೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಇಂತಹ ಸಮಜಗಾತುಕ ಜನರಿಂದಲೇ ಇಂದಿನ ಜನಮಾನಸ ತಪ್ಪು ದಾರಿ ಹಿಡಿಯುವಂತಾಗಿದೆ. ಜೊತೆಗೆ ಸತ್ಯಾಂಶವನ್ನು ಹೊಂದಿರುವ ವ್ಯಕ್ತಿಯನ್ನು ಕೂಡ ಜನರು ನಂಬುವಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ಜನರು ನಮ್ಮೀ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿದ್ದಾರೆ.

Related Posts

Leave a Reply

Your email address will not be published.

How Can We Help You?