ಎರ್ಮಾಳು ಬ್ರಹ್ಮ ಶ್ರೀ ನಾರಾಯಣಗು ಸೇವಾ ಮಂದಿರದ 45ನೇ ವಾರ್ಷಿಕೋತ್ಸವ

ಎರ್ಮಾಳು ತೆಂಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ 45ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸಹಿತ 24 ಗಂಟೆಗಳ ನಿರಂತರ ಭಜನಾ ಸಂಕೀರ್ತನ ವಿವಿಧ ಭಜನಾ ಮಂದಿರಗಳ ಕೂಡುವಿಕೆಯಿಂದ ಆರಂಭಗೊಂಡಿದೆ.

ಸಂಸ್ಥೆಯ ಅಧ್ಯಕ್ಷ ರತ್ನಾಕರ್ ಕೋಟ್ಯಾನ್ ಮಾತನಾಡಿ, ಶುಕ್ರವಾರ ಗಣಹೋಮಾದಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಿ, ಇದೀಗ ಶನಿವಾರ ಮುಂಜಾನೆ ಕಲಶವೇರಿ ಆರಂಭಗೊಂಡ ಏಕಾಹ ಭಜನಾ ನಿರಂರವಾಗಿ ವಿವಿಧ ಭಜನಾ ಮಂಡಳಿಗಳ ಕೂಡುವಿಕೆಯಿಂದ ೨೪ ಗಂಟೆಗಳು ನಡೆದು ಭಾನುವಾರ ಮುಂಜಾನೆ ಮಹಾ ಮಂಗಳಾರತಿಯೊಂದಿಗೆ ಅಂತ್ಯ ಕಾಣಲಿದೆ. ಈ ಮಧ್ಯೆ ಶನಿವಾರ ಸಾರ್ವಜನಿಕ ಅನ್ನಸಂತರ್ಪಣೆಯೂ ಜರಗಿದ್ದು ಈ ಅನ್ನ ಪ್ರಸಾದಕ್ಕಾಗಿ ಊರ ಪರವೂರ ಭಕ್ತಾಧಿಗಳು ಆಗಮಿಸಲಿದ್ದಾರೆ.

ಈ ಎಲ್ಲಾ ದೈವೀ ಕಾರ್ಯಗಳಿಗೆ ಸಂಸ್ಥೆಯ ಕಾರ್ಯಕರ್ತರು, ಊರ ಪರವೂರ ಭಕ್ತಾಧಿಗಳ ಸಂಪೂರ್ಣ ಸಹಕಾರವೇ ಕಾರಣವೆಂದರು.ಈ ಸಂಸ್ಥೆಯ ಕಾರ್ಯದರ್ಶಿ ನಾಗೇಶ್ ಪ್ರಸನ್ನ, ಉಪಾಧ್ಯಕ್ಷ ಜಯಕರ್, ರವಿಪ್ರಕಾಶ್, ವಿಶ್ವನಾಥ್ ಕೋಟ್ಯಾನ್, ಶಶಿದರ್, ಲಕ್ಷ್ಮಣ್, ಶ್ರೇಯಸ್, ಪ್ರದೀಪ್, ರಾಜೇಶ್, ಸುಜೀತ್ ಪೂಜಾರಿ, ಸತೀಶ್, ಸುಕುಮಾರ್, ಕಾರ್ತಿಕ್ ಮುತಾದವರಿದ್ದರು.