ಬಿ. ನಾಗೇಶ್ ಶಾನುಭೋಗ್ರಿಗೆ ಸನ್ಮಾನ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಕ್ಷೇತ್ರ ಶಿಕ್ಷಣ ವ್ಯಾಪ್ತಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಂಟ್ವಾಡಿಯಲ್ಲಿ ಸುಮಾರು 40 ವರ್ಷಗಳ ಕಾಲ ಹಲವಾರು ಮಕ್ಕಳಿಗೆ ಶಿಕ್ಷಣವನ್ನು ಕಲಿಸಿದ ಅತ್ಯಂತ ಅವಿರತ ಶ್ರಮವಹಿಸಿ ದುಡಿದ ಶ್ರೀ ಬಿ.ನಾಗೇಶ್ ಶಾನುಭೋಗ್, ಶಾಲೆಯ ಸರ್ವತೋಮುಖ ಏಳಿಗೆಗಾಗಿ ಹಗಲಿರುಳು ದುಡಿದು, ಕಿರಿಯ ಪ್ರಾಥಮಿಕ ಶಾಲೆಯನ್ನಾಗಿಸಿದ್ದಾರೆ ಅವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ “ಜನ ಮೆಚ್ಚಿದ ಶಿಕ್ಷಕ”, ಹಾಗೂ ಉಡುಪಿ ಜಿಲ್ಲಾ “ಆದರ್ಶ ಶಿಕ್ಷಕ” ಪ್ರಶಸ್ತಿ ಪಡೆದಿರುತ್ತಾರೆ. ಕಾಯಕವೇ ಕೈಲಾಸ ಎಂಬಂತೆ ನಿಸ್ವಾರ್ಥ ಮನೋಭಾವದ ಪ್ರತಿಭಾವಂತ ಶಿಕ್ಷಕರಾಗಿ ಊರ ಪರಊರ ಜನರ ಪ್ರೀತಿಗೆ ಪಾತ್ರರಾಗಿರುವ “ಶ್ರೀಯುತ ನಾಗೇಶ್ ಶ್ಯಾನುಭಾಗ್ ಮುಖ್ಯ ಉಪಾಧ್ಯಯರು ಅಪಾರ ಶಿಷ್ಯ ವೃಂದದ ನೆಚ್ಚಿನ ಗಣಿತ ಶಿಕ್ಷಕರಾಗಿ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಂಟ್ವಾಡಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ತಮ್ಮ ಶೈಕ್ಷಣಿಕ ವೃತ್ತಿಯಿಂದ ಸರ್ಕಾರಿ ನಿವೃತ್ತಿ ಹೊಂದಿರುವ ಜನ ಮನ್ನಣೆ ಗಳಿಸಿರುವ ಆದರ್ಶ ಶಿಕ್ಷಕ ಎನಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಬಿ. ಅರುಣ್ ಕುಮಾರ್ ಶೆಟ್ಟಿ ಗುಡ್ಡಮ್ಮಾಡಿ, ಶಿಕ್ಷಣ ಸಂಯೋಜಕರು ಶ್ರೀ ಪ್ರಕಾಶ್ ಹೆಬ್ಬಾರ್, ರಾಮಚಂದ್ರ ಕಾಮತ್, ಪ್ರಭಾರ ಮುಖ್ಯ ಉಪಾಧ್ಯಾಯರು ರಘುರಾಮ್ ನಾಯ್ಕ್ ಹಾಗೂ ಬಂಟ್ವಾಡಿ, ಸೇನಾಪುರ Àಕ್ಲಾಡಿಗುಡ್ಡೆ,ಕೆಳಾಕಳಿ, ಇನ್ನಿತರ ಭಾಗಗಳ ಅಪಾರ ಅಭಿಮಾನಿ ವರ್ಗದವರು ಉಪಸ್ಥಿತರಿದ್ದರು.