ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ : “HOG – 2K22”ಆಹಾರ ಉತ್ಸವ

ಶ್ರೀನಿವಾಸ ವಿಶ್ವವಿದ್ಯಾಲಯ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ, ಪಾಂಡೇಶ್ವರ, ಮಂಗಳೂರು ಇದರ 30 ನೇ ವರ್ಷದ ವಾರ್ಷಿಕ ಆಹಾರ ಉತ್ಸವ “HOG – 2K22”ಏಪ್ರಿಲ್ 30, 2022 ರಂದುಆಚರಿಸಲಾಯಿತು.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ, ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸಿಎ. ಎ. ರಾಘವೇಂದ್ರ ರಾವ್ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿಮಂಗಳೂರಿನ ತಾಜ್ ಗೇಟ್ವೇ ಹೋಟೆಲ್ ನ ಜನರಲ್ ಮ್ಯಾನೇಜರ್ ಶ್ರೀ ಪೀಟರ್ ನಿರ್ಮಲ್ ಅವರು ಉತ್ಸವವನ್ನು ಉದ್ಘಾಟಿಸಿದರು.
ಗೌರವ ಅತಿಥಿಗಳಾಗಿ ಗೌರವಾನ್ವಿತ ಸಹ ಕುಲಾಧಿಪತಿ ಹಾಗೂ ಎ. ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷರಾದ ಡಾ.ಎ. ಶ್ರೀನಿವಾಸ್ ರಾವ್, ಶ್ರೀನಿವಾಸ ವಿವಿಯ ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮೀ ಆರ್. ರಾವ್ ಹಾಗೂ ಪ್ರೊ. ಎ. ಮಿತ್ರ ಎಸ್. ರಾವ್,ಅವರುಉಪಸ್ಥಿತರಿದ್ದರು.

ರಿಜಿಸ್ಟ್ರಾರ್ಡಾ.ಅನಿಲ್ ಕುಮಾರ್, ಅಭಿವೃದ್ಧಿರಿಜಿಸ್ಟ್ರಾರ್ಡಾ. ಅಜಯ್ ಕುಮಾರ್,ಶ್ರೀನಿವಾಸ್ ವರ್ದಾ ಸೇಫಾರಾನ್ನಜನರಲ್ ಮ್ಯಾನೇಜರ್ಶ್ರೀ. ಉಪೇಂದ್ರ ಸಿಂಗ್ ರಾವತ್, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಟೂರಿಸಂನ ಡೀನ್ಪ್ರೊ. ಸ್ವಾಮಿನಾಥನ್ಎಸ್., ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಡೀನ್ ಪ್ರೊ.ರಾಜಶೇಖರ್ ಮತ್ತು ಸಂಸ್ಥೆಯ ಸಿಬ್ಬಂದಿವರ್ಗದವರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಲ್ಲಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಈವೆಂಟ್ ಮ್ಯಾನೇಜ್ಮೆಂಟ್ನ ಜಟಿಲತೆಗಳು ಮತ್ತು ಸೂಕ್ಷ್ಮತೆಗಳ ಅರಿವು ಮೂಡಿಸಲು 1992 ರಿಂದ ವಾರ್ಷಿಕ ಆಹಾರ ಉತ್ಸವವನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಮಾರಾಟ ಮತ್ತು ಮಾರ್ಕೆಟಿಂಗ್, ಆಹಾರ ಉತ್ಪಾದನೆ, ಎಫ್ & ಬಿ ಸೇವೆ, ಖರೀದಿ ಮತ್ತು ಇತರ ನಿರ್ವಹಣಾ ಕೌಶಲ್ಯಗಳಂತಹ ವಿವಿಧ ಅಂಶಗಳ ಅನುಭವ ಪಡೆದುಕೊಂಡರು. ಈ ಕಾರ್ಯಕ್ರಮವನ್ನು Iಗಿ ಸೆಮಿಸ್ಟರ್ ವಿದ್ಯಾರ್ಥಿಯಾದ ಶ್ರೀ ಕ್ಲಾರನ್ ಫ್ರಾಂಕ್ ಅಬ್ರೆಯೋ ನಿರ್ವಹಿಸಿದರು.
ಜ್ವಾಲೆ ಮತ್ತು ಜಗ್ಲಿಂಗ್, ಸಾಂಸ್ಕೃತಿಕ ಕಾರ್ಯಕ್ರಮ, ಬಾಯಲ್ಲಿ ನೀರೂರಿಸುವ ಖಾದ್ಯಗಳು ಸಂಜೆಯ ರಂಗನ್ನುಹೆಚ್ಚಿಸಿತು.