ಕಾಪು ಉಳಿಯಾರಮ್ಮನ ಸನ್ನಿಧಿಯಲ್ಲಿ ಶತ ಚಂಡಿಕಾಯಾಗ ಸಂಪನ್ನ

ಉಳಿಯಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶತ ಚಂಡಿಕಾಯಾಗ ಸಂಪನ್ನ ಗೊಂಡಿತು. ಭಕ್ತಾದಿಗಳ ಸಹಕಾರದಿಂದ ಪ್ರಥಮ ಬಾರಿಗೆ ಉಳಿಯಾರ ಅಮ್ಮನ ಸನ್ನಿಧಿಯಲ್ಲಿ ಪ್ರತಿಷ್ಟ ವರ್ಧಂತಿಯ ಪರ್ವಕಾಲದಲ್ಲಿ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನೆರವೇರಿತು.
ಕ್ಷೇತ್ರದ ತಂತ್ರಿಗಳಾದ ಪಾದೂರು ಲಕ್ಷ್ಮೀ ನಾರಾಯಣ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ಲಕ್ಷ್ಮೀಶ ಭಟ್ ಇವರ ಸಹಕಾರದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ರಂಗ ಪೂಜೆ , ಬಲಿ ಸೇವೆ ನೆರವೇರಿತು. ಸಾವಿರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಕುಲಾಲ್, ಶತಚಂಡಿಕಾಯಾಗ ಸಮಿತಿ ಅಧ್ಯಕ್ಷ ತ್ರಿವಿಕ್ರಂ ಭಟ್, ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.