ತಿಬ್ಬಾಸ್ ಪ್ಯೂಚರ್ ಮೋಡೆಲ್ ಅಪ್ ಇಂಡಿಯಾ ಸೀಸನ್-2 : ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಋತ್ವ ಹೆಚ್.ಪಿ

ಮೈಸೂರಿನಲ್ಲಿ ನಡೆದ ತಿಬ್ಬಾಸ್ ಪ್ಯೂಚರ್ ಮೋಡೆಲ್ ಆಪ್ ಇಂಡಿಯಾ 2022ರ ಸೀಸನ್ 2ರಲ್ಲಿ ಮಂಗಳೂರಿನ ಬಾಲ ಪ್ರತಿಭೆ ಋತ್ವ ಹೆಚ್.ಪಿ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ವಾಯ್ಸ್: ಬಹುಮುಖ ಪ್ರತಿಭೆಯಾಗಿರುವ ಋತ್ವ ಹೆಚ್.ಪಿ ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ. ಮಕ್ಕಳ ಕನ್ನಡ ರಾಜ್ಯೋತ್ಸವ ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಮೈಸೂರಿನಲ್ಲಿ ನಡೆದ ತಿಬ್ಬಾಸ್ ಪ್ಯೂಚರ್ ಮೋಡೆಲ್ ಅಫ್ ಇಂಡಿಯಾ 2022ರ ಸೀಸನ್ 2 ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದು ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ. ಈಕೆ ಮಂಗಳೂರಿನ ಮೋರ್ಗನ್ಸ್ ಗೇಟ್ ನ ನಿವಾಸಿಯಾಗಿದ್ದು, ಹರಿಪ್ರಸಾದ್ ಮತ್ತು ಪ್ರತಿಮಾ ದಂಪತಿಗಳ ಪುತ್ರಿ.