ಉಚ್ಚಿಲದಲ್ಲಿ ಕಂದಾಯ ಮೇಳ : ಬಂದರು ಮತ್ತು ಮೀನುಗಾರಿಕ ಸಚಿವ ಅಂಗಾರರಿಂದ ಉದ್ಘಾಟನೆ

ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷಿ ಖಾಸಗಿ ಸಭಾ ಭವನದಲ್ಲಿ ತಾಲೂಕಿನ ನೂರಾರು ಫಲಾನುಭವಿಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಕಂದಾಯ ಮೇಳ ಎಂಬ ಬೃಹತ್ ಜನಪರ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಂದರು ಮತ್ತು ಮೀನುಗಾರಿಕ ಸಚಿವ ಅಂಗಾರ ಮಾತನಾಡಿ, ಜನ ಸಾಮಾನ್ಯರು ಸರ್ಕಾರದ ಯೋಜನೆಗಳನ್ನು ಪಡೆಯಲು ಹತ್ತಾರು ಬಾರೀ ಸರ್ಕಾರಿ ಕಛೇರಿಗಳನ್ನು ಅಲೆದಾಟ ನಡೆಸುವ ಅನಿವಾರ್ಯ ಸ್ಥಿತಿ ಇದೆ, ಕಾರಣ ಅಧಿಕಾರಿಗಳ ಕೊರತೆಯೂ ಒಂದು ಕಾರಣ ಇರ ಬಹುದು, ಅದನ್ನೆಲ್ಲಾ ಮನಗಂಡ ಜನಪ್ರತಿ ಗಳಾದ ನಾವು ಒಂದೇ ಸೂರಿನಡಿಯಲ್ಲಿ ಸೇರಿಸಿ ಈ ಕಂದಾಯ ಮೇಳವನ್ನು ಆಯೋಜನೆ ಮಾಡುವ ಮೂಲಕ, ಜನರು ಇದರ ಪ್ರಯೋಜನವನ್ಬು ಬಹಳ ಸಂತೋಷವಾಗಿ ಪಡೆಯುವಂತ್ತಾಗಿದೆ ಎಂದರು.
ಈ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಕೂರ್ಮರಾವ್, ಉಪ ಕಮಿಷನರ್ ರಾಜು, ಅರಣ್ಯ ಅಧಿಕಾರಿ ಆಶಿಷ್ ರೆಡ್ಡಿ, ಕಾಪು ಪುರಸಭಾ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ನಾವಡ, ಮಟ್ಟಾರು ರತ್ನಾಕರ್ ಹೆಗ್ಡೆ, ಕಾಪು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಉಡುಪಿ ತಹಶಿಲ್ದಾರ್ ಅರ್ಚನಾ ಮುಂತಾದವರಿದ್ದರು.