ಸರ್ಕಾರಿ ಭೂಮಿಯ ಮಣ್ಣು ಮಾರಾಟ : ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ

ಕಡಬ ತಾಲೂಕಿನ ಗೊಳಿತೊಟ್ಟು ಅರಂತ ಬೈಲು ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸರಕಾರಿಭೂಮಿಯ ಮಣ್ಣನ್ನು ಬೇರೆಯವರಿಗೆ ಮಾರಿದ್ದು ಇದರ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆರಂತ ಬೈಲು ಮಹೇಶ್ ಪೂಜಾರಿ ಎಂಬ ವ್ಯಕ್ತಿ ಸರ್ವೇ ನಂ 93/5 3ರ ಸರಕಾರಿ ಭೂಮಿಯ 1ಎಕರೆ ಮಣ್ಣನ್ನು ಕಂದಾಯ ಇಲಾಖೆಯ ಯಾವುದೇ ಒಪ್ಪಿಗೆ ಇಲ್ಲದೆ ಮಾರಿದ್ದಾರೆ, ಅಲ್ಲದೆ ಆಲಂತಾಯ ಅರಂತ ಬೈಲು ಸಾರ್ವಜನಿಕ ರಸ್ತೆಯನ್ನು ಅಗೆದು ಹಾನಿ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.ಇದರ ಬಗ್ಗೆ ಸಾರ್ವನಿಕರು ನೀಡಿದ ಮಾಹಿತಿ ಮೇರೆಗೆ ಮಾಧ್ಯಮದವರು ಅಲ್ಲಿಗೆ ತೆರಳಿದರು ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಹೇಶ್ ಪೂಜಾರಿ ಹಾಗೂ ಇತರರು ಹಲ್ಲೆಗೆ ಯತ್ನಿಸಿದ್ದಾರೆ.
