ಅಭಿವೃದ್ಧಿ ವಿಚಾರದಲ್ಲಿ ಚೌಕಾಸಿ ಮಾಡಬೇಡಿ ಬೇಜವಾಬ್ದಾರಿತನ ಬಿಟ್ಟು ಕೆಲಸ ಮಾಡಿ : ಅಧಿಕಾರಿಗಳಿಗೆ ಶಾಸಕ ನಿರಂಜನ್ ಕುಮಾರ್ ಎಚ್ಚರಿಕೆ

ಗುಂಡ್ಲುಪೇಟೆ: ಅಭಿವೃದ್ಧಿ ವಿಚಾರದಲ್ಲಿ ಚೌಕಾಸಿ ಮಾಡ್ಬೇಡಿ ಬೇಜವಾಬ್ದಾರಿತನ ಬಿಟ್ಟು ಕೆಲಸ ಮಾಡಿ ಎಂದು ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಎಪಿಎಂಸಿ ಚುನಾವಣೆ ನಿಮಿತ್ತ ಸ್ಥಗಿತವಾಗಿದ್ದ ಗ್ರಾಮಪಂಚಾಯತಿ ಮಟ್ಟದ ಜನಸಂಪರ್ಕ ಸಭೆಯು ಮತ್ತೇ ಆರಂಭವಾಗಿದ್ದು ಗುಂಡ್ಲುಪೇಟೆ ತಾಲೋಕು ಬೊಮ್ಮನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆ ಜನರ ಸಮಸ್ಯೆಯನ್ನ ಪರಿಹಾರ ಮಾಡಲು ನಾವೇ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಚೌಕಾಸಿ ಮಾಡ್ಬೇಡಿ ಬೇಜವಾಬ್ದಾರಿತನ ಬಿಟ್ಟು ಕೆಲಸ ಮಾಡಿ ಎಂದು ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಹೇಳಿದರು.
ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕ ನಿರಂಜನ್ ಕುಮಾರ್ ಕುಂದಕೆರೆ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಿ , ಅಲ್ಲಿಗೆ ಕಲಬೆರಕೆ ನೀರು ಸರಬರಾಜಾಗುತ್ತಿದೆ ಎಂಬ ಆರೋಪವಿದೆ ,ಎಲ್ಲಿ ಲೋಪವಾಗಿದೆ ಎಂಬುದನ್ನ ಪರಿಶೀಲಿಸಿ ಸಮಸ್ಯೆಯನ್ನ ಪರಿಹರಿಸಿ ಎಂದು ಸೂಚಿಸಿದ್ರು.