ರಾಮನಗರ: ಕೆ ಎಸ್ ಆರ್ ಟಿ ಸಿ ಬಸ್ -ಕಾರಿನ ನಡುವೆ ಭೀಕರ ಅಪಘಾತ: ಕರಾವಳಿ ಮೂಲದ ಮೂವರು ಸಾವು

ರಾಮನಗರ: ಕೆಎಸ್ ಆರ್ ಟಿಸಿ ಬಸ್ ಮತ್ತು ಇನ್ನೋವಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಕರಾವಳಿ ಜಿಲ್ಲೆ ಉಡುಪಿ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಕೆಮ್ಮಲ್ಲಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಅಕ್ಷತಾ, ಡ್ರೈವರ್ ಉಮೇಶ್ ಹಾಗೂ ೬ ತಿಂಗಳು ಮಗು ಸುಮಂತ್ ಮೃತರು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ತೀವ್ರತೆಗೆ ರಸ್ತೆಯಲ್ಲೇ ಅಕ್ಷತಾ ಮತ್ತು ಮಗುವಿನ ಶವ ಚೆಲ್ಲಾಪಿಲ್ಲಿಯಾಗಿದೆ. ಡ್ರೈವರ್ ಕಾರಿನಲ್ಲೇ ಮೃತಪಟ್ಟಿದ್ದಾರೆ.

Related Posts

Leave a Reply

Your email address will not be published.

How Can We Help You?