ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮತ್ತು ಲಯನ್ಸ್ ಕ್ಲಬ್ ಫೆರ್ಮನೂರ ಫೋಕಸ್ ಕ್ಲಬ್ ಮಂಗಳೂರು : ಕೊಯಿಮುತ್ತೂರು ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ

ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮತ್ತು ಲಯನ್ಸ್ ಕ್ಲಬ್ ಫೆರ್ಮನೂರ ಫೋಕಸ್ ಕ್ಲಬ್ ಮಂಗಳೂರು ಜಂಟಿಯಾಗಿ ಕ್ಲಬ್ಬಿನ ವನವಿಹಾರ (ಪಿಕ್ನಿಕ್ ) ಊಟಿ ಪ್ರವಾಸದ ಸಂದರ್ಭದಲ್ಲಿ ಲಯನ್ಸ್ ಕ್ಲಬ್ 317D ಇದರ ಇತಿಹಾಸದಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಸಂಚಲನ ಮೂಡಿಸಿ ಚಾರಿತ್ರಿಕ ಮೈಲುಗಲ್ಲು ಎಂಬಂತೆ ಲಯನ್ಸ್ ಕ್ಲಬ್ 324C ಕೊಯಿಮುತ್ತೂರು ಸುಪೀರಿಯರ್ ಕಿಂಗ್ಸ್ ಕ್ಲಬ್ ನವರ ಜೊತೆಯಲ್ಲಿ ದಿನಾಂಕ 08.05.2022 ರಂದು
ಇಶಾ ಫೌಂಡೇಶನ್ ಕೊಯಿಮುತ್ತೂರು ಪ್ರಾಂಗಣದಲ್ಲಿ ತ್ರಿವಳಿ ಲಯನ್ಸ್ ಕ್ಲಬ್ಗಳ ಅಂತರರಾಜ್ಯ ಸಮ್ಮಿಲನ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ರೂಪಾಯಿ 20000 ಸೇವಾ ದೇಣಿಗೆಯನ್ನು ಕೊಯಿಮುತ್ತೂರು ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯಧನವಾಗಿ ನೀಡಲಾಯಿತು.