ಲವ್ ಜಿಹಾದ್ ಹೆಸರಿನಲ್ಲಿ ತಿರುಗಾಡಿದರೆ ತಕ್ಕ ಪಾಠ : ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ

ಅನ್ಯಮತೀಯರೊಂದಿಗೆ ಇನ್ನು ಮುಂದೆ ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಹೆಸರಿನಲ್ಲಿ ತಿರುಗಾಡಿದಲ್ಲಿ ರಸ್ತೆ ರಸ್ತೆಯಲ್ಲಿ ಹಿಂದೂ ಸಮಾಜ ಮತ್ತು ಹಿಂದೂ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದೆ ಎಂದು ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ.
ಪುತ್ತೂರುನಲ್ಲಿ ನಡೆದ ಕನ್ಯಾನದ ಕಣಿಯೂರಿನ ದಲಿತ ಬಾಲಕಿ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಹಾಗು ಮತಾಂತರ ಕಾಯ್ದೆ ಜಾರಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕಣಿಯೂರಿನ ದಲಿತ ಬಾಲಕಿಯನ್ನು ಆರೋಪಿ ಶಾಹುಲ್ ಹಮೀದ್ ಹಲವು ಅಮಿಷಗಳನ್ನು ಒಡ್ಡಿ ಬಲೆಗೆ ಬೀಳಿಸಲು ಯತ್ನಿಸಿದ್ದಾರೆ. ಅದ್ಯಾವುದೂ ನಡೆಯದಾಗ ಆಕೆಯ ಕೂದಲು ಕತ್ತರಿಸಿ ವಾಮಾಚಾರ ನಡೆಸಿದ್ದಾನೆ. ಈತನಿಗೆ ಆತನ ಮನೆಯವರೂ ಸಹಕಾರ ನೀಡಿದ್ದಾರೆ. ಬಾಲಕಿಯ ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದ ಅವರು ಪ್ರಕರಣದ ಸೂಕ್ತ ತನಿಖೆಯನ್ನು ಪೋಲೀಸರು ನಡೆಸಬೇಕೆಂದು ಒತ್ತಾಯಿಸಿದರು. ಹಿಂದೂ ಧರ್ಮ ವಿರೋಧಿಗಳು ಹಾಗೂ ರಾಷ್ಟ್ರದ್ರೋಹಿಗಳ ಜೊತೆ ಹೋಗುವ ಹಿಂದೂ ಹೆಣ್ಣುಮಕ್ಕಳು ಇನ್ನು ಮುಂದೆ ಎಚ್ಚರಿಕೆಯಿಂದ ಇರಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಕಂಡು ಬಂದಲ್ಲಿ ರಸ್ತೆ ರಸ್ತೆಯಲ್ಲಿ ಹಿಂದೂ ಸಮಾಜ ಮತ್ತು ಹಿಂದೂ ಕಾರ್ಯಕರ್ತರು ಹೆಣ್ಣು ಮಕ್ಕಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.