ಕ್ರೀಡಾ ಅಂಕಣಕಾರ ಎಸ್ .ಜಗದೀಶ್ಚಂದ್ರ ಅಂಚನ್ ಗೆ  ಟ್ಯಾಗೋರ್ ದತ್ತಿನಿಧಿ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ( ಕೆಯುಡಬ್ಲ್ಯುಜೆ )ದ ಕಾಸರಗೋಡು ಘಟಕ ನೀಡುವ ಕೆ.ಆರ್. ಟ್ಯಾಗೋರ್ ದತ್ತಿನಿಧಿ ಪ್ರಶಸ್ತಿಗೆ  ಕ್ರೀಡಾ ಅಂಕಣಕಾರ ಶ್ರೀ ಎಸ್. ಜಗದೀಶ್ಚಂದ್ರ ಅಂಚನ್  ಸೂಟರ್ ಪೇಟೆ ಆಯ್ಕೆಗೊಂಡಿದ್ದಾರೆ. ನಿವೃತ್ತ ಐಪಿಎಸ್ ಅಧಿಕಾರಿ ಕೆ.ಆರ್.ಟ್ಯಾಗೋರ್ ಸ್ಮರಣಾರ್ಥ ಅವರ ಮಿತ್ರರಾದ ಟಿ.ತಿಮ್ಮೇಗೌಡ ಹಾಗೂ ವೆಂಕಟೇಶ್ ತುಪ್ಪಿಲ್ ನೀಡುವ ಈ ದತ್ತಿನಿಧಿ ಪ್ರಶಸ್ತಿಯೂ ರೂ.25,000/- ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ . 
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕ ವಿವಿಧ ದತ್ತಿನಿಧಿ ಪ್ರಶಸ್ತಿಗೆ ಏಳು ಮಂದಿ ಪತ್ರಕರ್ತರನ್ನು ಆಯ್ಕೆ ಮಾಡಿದ್ದು , ಈ ಪೈಕಿ ಎಸ್.ಜಗದೀಶ್ಚಂದ್ರ ಅಂಚನ್ ಅವರನ್ನು ಹಿರಿಯ ಕ್ರೀಡಾ ಅಂಕಣ ಬರಹಗಾರ  ಎನ್ನುವ ನೆಲೆಯಲ್ಲಿ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.‌  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ-22ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ನಾರಾಯಣ ಮಂಗಲದಲ್ಲಿ ನಡೆಯಲಿದೆ.
ಸುಮಾರು 30 ವರ್ಷಗಳಿಂದ ಕ್ರೀಡಾ ಲೇಖನಗಳ ಮೂಲಕ  ರಾಜ್ಯ , ಅಂತರ್ ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಇವರು  ಗುರುತಿಸಿಕೊಂಡಿದ್ದಾರೆ .  ಇವರು ಬರೆದ ಸುಮಾರು 4500ಕ್ಕೂ ಮಿಕ್ಕಿದ ಕ್ರೀಡಾ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ  ಪ್ರಕಟಗೊಂಡಿದೆ . ಇವರು ‘ ವಿಶ್ವಕಪ್ ಕ್ರಿಕೆಟ್ ಸಮರ ‘ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.
ಕ್ರೀಡಾ ಬರವಣಿಗೆಗಾಗಿ ಇವರಿಗೆ 2013ರಲ್ಲಿ ‘ಮೀಡಿಯಾ ಅವಾರ್ಡ್’, 2014ರಲ್ಲಿ ‘ಸಮಾಜ ರತ್ನ ‘ ರಾಜ್ಯ ಪ್ರಶಸ್ತಿ , 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ,  2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ;  ಜಾನಪದ ಕ್ರೀಡೆಗಳ ಬಗ್ಗೆ ಇವರು ಬರೆದ ಕ್ರೀಡಾ ಲೇಖನಗಳಿಗಾಗಿ 2019ರ ಜಾನಪದ ಲೋಕ ರಾಜ್ಯ ಪ್ರಶಸ್ತಿ  ; 2020ರಲ್ಲಿ ಕೆ.ಎ.ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿ , 2021ರಲ್ಲಿ ಸಿದ್ಧಗಂಗಾ ಶ್ರೀ ರಾಜ್ಯ ಪ್ರಶಸ್ತಿ , ಅಲ್ಲದೆ ನಮ್ಮ ಕುಡ್ಲ ಸಾಧಕ ಪ್ರಶಸ್ತಿ , ಸೇರಿದಂತೆ ಹಲವು ಪ್ರಶಸ್ತಿಗಳು ಹಾಗೂ ಸನ್ಮಾನ ಪುರಸ್ಕಾರವನ್ನು ಇವರು ಪಡೆದಿದ್ದಾರೆ .

Related Posts

Leave a Reply

Your email address will not be published.

How Can We Help You?