ಗುರುಪುರ ಕೈಕಂಬ ಪೊಳಲಿ-ಅಡ್ಡೂರು ಸೇತುವೆ ಅಭಿವೃದ್ಧಿ : ಶಾಸಕ ಡಾ. ವೈ ಭರತ್ ಶೆಟ್ಟಿ ಅವರಿಂದ ಗುದ್ದಲಿ ಪೂಜೆ

ಸುರತ್ಕಲ್-ಕಬಕ ರಾಜ್ಯ ಹೆದ್ದಾರಿಯ ಗುರುಪುರ ಕೈಕಂಬ ಪೆÇಳಲಿ ದ್ವಾರದಿಂದ ಅಡ್ಡೂರು ಸೇತುವೆವರೆಗೆ ನಡೆಯಲಿರುವ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿಯವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಶಾಸಕರಾದ ಡಾ. ಭರತ್ ಶೆಟ್ಟಿಯವರು ಮಾತನಾಡಿ, ಐದೂವರೆ ಮೀಟರ್ ಅಗಲವಿರುವ ರಾಜ್ಯ ಹೆದ್ದಾರಿಯು 7 ಮೀಟರ್‍ಗೆ ಅಗಲೀಕರಣಗೊಳ್ಳಲಿದೆ. ಒಟ್ಟು ಕಾಮಗಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಕಿಮೀ ರಸ್ತೆ ಹೊರತುಪಡಿಸಿ ಉಳಿದ ಎರಡೂವರೆ ಕಿಮೀ ರಾಜ್ಯ ಹೆದ್ದಾರಿಯಲ್ಲಿ (ಅಡ್ಡೂರು ಪೊಳಲಿ ಸೇತುವೆವರೆಗೆ) ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಅಭಿವೃದ್ಧಿ ಕಾಮಗಾರಿಗೆ ತಡೆಯಾಗಿರುವ ಎಲ್ಲ ಅನಧಿಕೃತ ಕಟ್ಟಡಗಳ ತೆರವಿಗೆ ಪಿಡಬ್ಲ್ಯೂಡಿ ಕ್ರಮ ಕೈಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಗುರುಪುರ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಜಿ. ಎಂ ಉದಯ ಭಟ್, ಸುನಿಲ್ ಜಲ್ಲಿಗುಡ್ಡೆ, ಸಚಿನ್ ಅಡಪ, ಹರೀಶ್ ಬಳ್ಳಿ, ಶಶಿಕಲಾ, ಛಾಯಾ, ಮುಖಂಡರಾದ ಸೋಹನ್ ಅತಿಕಾರಿ, ಚಂದ್ರಹಾಸ ಶೆಟ್ಟಿ ನಾರಳ, ಶ್ರೀಕರ ಶೆಟ್ಟಿ, ಸಂದೀಪ್, ಜಿ. ಕೆ ಸಂದೇಶ್, ಸೇಸಮ್ಮ, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಕಂದಾವರ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ ಪಕ್ಷ ಪ್ರಮುಖರು, ಕಾರ್ಯಕರ್ತರು ಹಾಗೂ ಸ್ಥಳೀಯರು ಇದ್ದರು.

Related Posts

Leave a Reply

Your email address will not be published.

How Can We Help You?