ಹೆಬ್ರಿ: ಪೆರ್ಡೂರು ಬಂಟರ ಸಮುದಾಯ ಭವನಕ್ಕೆ ಶಿಲಾನ್ಯಾಸ

ಗ್ರಾಮೀಣ ಪ್ರದೇಶದ ಮತ್ತು ಸಮಾಜದ ಅಶಕ್ತರನ್ನು ಮುಖ್ಯವಾಹಿನಿಗೆ ತರುವ ಕೆಲಸ ಬಂಟ ಸಮಾಜದ ಮುಖಂಡರಿಂದ ಆಗಬೇಕು. ನಮ್ಮ ಸಮಾಜದವರಿಗೆ ಸಹಾಯ ಮಾಡಬೇಕು ಉದ್ದೇಶದಿಂದ ಸಂಘದ ಅಧ್ಯಕ್ಷ ಶಾಂತರಾಮ ಸೂಡೂರು ಪೆರ್ಡೂರಿನಲ್ಲಿ ಬಂಟರ ಸಂಘದ ಆಶ್ರಯದಲ್ಲಿ ಸಹಕಾರಿ ಸಂಘವನ್ನು ಸ್ಥಾಪಿಸಿದ್ದಾರೆ. ಇಂದು ಅವರ ಕನಸಿನಂತೆ ಸುಸಜ್ಜಿತ ಸಮುದಾಯ ಭವನಕ್ಕೆ ಶಿಲಾನ್ಯಾಸವಾಗಿದ್ದು, ಶೀಘ್ರವೇ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿ ಎಂದು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ|| ಎಚ್.ಎಸ್. ಬಲ್ಲಾಳ್ ಆಶಿಸಿದರು.

perdur bantara bhavana

ಅವರುಪೆರ್ಡೂರು ಜೋಗಿಬೆಟ್ಟಿನಲ್ಲಿ ಪೆರ್ಡೂರು ಬಂಟರ ಸಂಘದ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಪೆರ್ಡೂರ್ ಸಂಘದ ಕನಸು ನನಸಾಗಲು ಎಲ್ಲರ ಸಹಕಾರ ಅಗತ್ಯ. ಮಾತೃ ಸಂಘ ಮತ್ತು ವೈಯಕ್ತಿಕವಾಗಿ ಸಹಕಾರ ನೀಡುವುದಾಗಿ ಸಮಾರಂಭವನ್ನು ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.

ಶಾಂತರಾಮ ಸೂಡೂರು ಸಮಾಜದ ಅಭಿವೃದ್ಧಿಗೆ ವಿನೂತನ ಯೋಜನೆಗಳನ್ನು ಹಾಕಿಕೊಂಡು ಸಮಾಜ ಬಾಂಧವರ ಸಹಕಾರದೊಂದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಹಿಂ. ವ. ಶಾ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮನವಿ ಪತ್ರ ಬಿಡುಗಡೆಗೊಳಿಸಿದರು.

perdur bantara bhavana

ಪೆರ್ಡೂರ್ ಬಂಟರ ಸಂಘದ ಅಧ್ಯಕ್ಷ ಶಾಂತರಾಮ ಸೂಡ ಮಾತನಾಡಿ ಒಮ್ಮತನ ಸಭಾಭವನ ನಿರ್ಮಾಣಕ್ಕೆ ಮುಂದಾಗಿದ್ದು, ಪಳ್ಳಿ ಶ್ರೀನಿವಾಸ ಹೆಗ್ಡೆ ಅವರ ಕುಟುಂಬಿಕರ ಸಹಕಾರವನ್ನು ಮರೆಯುವಂತಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಡುಪಿ ಸಂಚಾಲಕ ಜಯರಾಜ್ ಹೆಗ್ಡೆ ಪಳ್ಳಿ ಪೆಜಕೊಡಂಗೆ ಲೀಲಾವತಿ ಹೆಗ್ಡೆ ಉದ್ಯಮಿ ಎನ್.ಬಿ. ಶೆಟ್ಟಿ ನಿವೃತ್ತ ವೈದ್ಯಾಧಿಕಾರಿ ಡಾ. ಮನೋರಂಜನ್ ದಾಸ್ ಹೆಗ್ಡೆ ಇಂಟರ್‍ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿ ಸುಧಾಕರ್ ಶೆಟ್ಟಿ, ತುಳುಕೂಟ ಬೆಂಗಳೂರಿನ ಗೌರವಾಧ್ಯಕ್ಷ ದಿನೇಶ್ ಹೆಗ್ಡೆ ಬಂಟರ ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಉದ್ಯಮು ರಾಜಾರಾಮ್ ಹೆಗ್ಡೆ ಸಂಘದ ಕೋಶಾಧಿಕಾರಿ ಪ್ರಮೋದ್ ರೈ ಪಳಜೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು,


ವರದಿ: ಜಯಂತ್ ಯತಾಳ್ ಉಡುಪಿ 9743780016

Related Posts

Leave a Reply

Your email address will not be published.

How Can We Help You?