ಗ್ರಾಹಕರ ಅಚ್ಚುಮೆಚ್ಚಿನ ಮಲಬಾರ್ ಗೋಲ್ಡ್ & ಡೈಮಂಡ್ಸ್ : ಒಂದು ಚಿನ್ನದ ಬೆಲೆ ಯೋಜನೆಯಡಿ ಕಡಿಮೆ ಬೆಲೆಯಲ್ಲಿ ಆಭರಣ ಮಾರಾಟ

ಬೆಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತದ ಅತಿದೊಡ್ಡ ಆಭರಣಗಳ ರೀಟೇಲ್ ವ್ಯಾಪಾರಿಗಳಲ್ಲಿ ಒಂದಾಗಿದ್ದು, ತನ್ನ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಯೋಜನೆಯ ಭಾಗವಾಗಿ ದೇಶದಲ್ಲಿ ಕಡಿಮೆ ಬೆಲೆಗೆ ಚಿನ್ನಾಭರಣಗಳನ್ನು ನೀಡುತ್ತಿರುವುದರಿಂದ ಗ್ರಾಹಕರು ಸಂತೋಷಪಡುತ್ತಿದ್ದಾರೆ. ಇದರಿಂದ ಗ್ರಾಹಕರು ಕೇವಲ ಚಿನ್ನದ ಕಡಿಮೆ ಬೆಲೆಯಿಂದ ಪ್ರಯೋಜನ ಪಡೆಯುತ್ತಿಲ್ಲ. ಇದರ ಜೊತೆಗೆ ಕಡಿಮೆ ಚಿನ್ನಾಭರಣ ಮೇಕಿಂಗ್ ದರದ ಮೂಲಕವೂ ಪ್ರಯೋಜನ ಪಡೆಯುತ್ತಿದ್ದಾರೆ.

ಉತ್ಪನ್ನಗಳ ಪಾರದರ್ಶಕ ಮತ್ತು ಸಮಂಜಸವಾದ ಬೆಲೆಯನ್ನು ಅನುಮತಿಸುವ ನ್ಯಾಯಯುತವಾದ ಬೆಲೆ ನೀತಿಗೆ ಚಂದಾದಾರರಾಗಿರುವುದರಿಂದ ಬ್ರ್ಯಾಂಡ್ ಈ ಬೆಲೆ ಪ್ರಯೋಜನವನ್ನು ನೀಡಲು ಸಾಧ್ಯವಾಗುತ್ತಿದೆ. ಕೇವಲ 4.9% ರಿಂದ ಆರಂಭವಾಗುವ ಮೇಕಿಂಗ್ ಚಾರ್ಜ್‍ಗಳ ಹೊರತಾಗಿ, ಮಲಬಾರ್ ಗೋಲ್ಡ್ & ಡೈಮಂಡ್ಸ್ ದೇಶಾದ್ಯಂತ ಚಿನ್ನಕ್ಕೆ ನಿಖರವಾದ ದರವನ್ನು ವಿಧಿಸುತ್ತಿದೆ. ಇದು ವಿವಿದs ರಾಜ್ಯಗಳಾದ್ಯಂತ 22 ಕ್ಯಾರೆಟ್ ಚಿನ್ನದ ಬೆಲೆ ವ್ಯತ್ಯಾಸದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ವಿವಿಧ ಮಾರುಕಟ್ಟೆಗಳ ಸಮೀಕ್ಷೆಗಳ ಪ್ರಕಾರ , ಅಕ್ಷಯ ತೃತೀಯ ಸಂದರ್ಭದಲ್ಲಿ ದೇಶದಲ್ಲಿ ಅತಿ ಹೆಚ್ಚು ಚಿನ್ನದ ದರಗಳು ಮತ್ತು ಕಡಿಮೆ ದರಗಳನ್ನು ಹೊಂದಿರುವ ರಾಜ್ಯಗಳ ನಡುವಿನ ಬೆಲೆ ವ್ಯತ್ಯಾಸವು ಪ್ರತಿ ಗ್ರಾಂಗೆ 350 ರೂಪಾಯಿ ಆಗಿತ್ತು.

ಈ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್ ನ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರು, ದೇಶದಲ್ಲಿ ಚಿನ್ನವು ಹೂಡಿಕೆ ಮತ್ತು ಸಂಪತ್ತಿಗೆ ಅತ್ಯಂತ ಸುರಕ್ಷಿತ ಟೂಲ್ ಆಗಿ ಮುಂದುವರಿದಿದೆ. ಪ್ರತಿಯೊಬ್ಬ ಗ್ರಾಹಕನಿಗೂ ನ್ಯಾಯಯುತ ಮತ್ತು ಅತ್ಯುತ್ತಮ ಬೆಲೆ ಸಿಗುವಂತಾಗಬೇಕೆಂಬ ದೃಷ್ಟಿಯಿಂದ ನಾವು ಈ ಯೋಜನೆಯನ್ನು ಪರಿಚಯಿಸಿದ್ದೇವೆ. ಚಿನ್ನದಿಂದ ರಚಿಸಲಾಗಿರುವ ಉಡುಗೊರೆಗಳು ನಾವು ಇತರರಿಗೆ ನೀಡುವ ಪ್ರೀತಿ ಮತ್ತು ಗೌರವವನ್ನು ಸೂಚಿಸುತ್ತದೆ. ಆದ್ದರಿಂದ ನಮ್ಮ ಗ್ರಾಹಕರು ಎಲ್ಲಾ ವಿಷಯಗಳಲ್ಲಿ ಪರಿಶುದ್ಧವಾಗಿರುವುದು ಮುಖ್ಯವಾಗಿದೆ. ಜವಾಬ್ದಾರಿಯುತ ಆಭರಣ ವ್ಯಾಪಾರ ಸಂಸ್ಥೆಯಾಗಿ ನಾವು ಮಾರಾಟ ಮಾಡುವ ಎಲ್ಲಾ ಆಭರಣಗಳು ಗ್ರಾಹಕರ ಕೈಗೆ ತಲುಪುವವರೆಗೆ ಗಣಿಗಳಿಂದಲೇ ಜವಾಬ್ದಾರಿಯುತವಾಗಿ ಖರೀದಿಸಿರುತ್ತೇವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ'' ಎಂದರು.

Related Posts

Leave a Reply

Your email address will not be published.

How Can We Help You?