ಅಮ್ ಆದ್ಮಿ ಪಾರ್ಟಿಯಿಂದ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ : ಆಲೂರಿನಲ್ಲಿ ಪೂರ್ವಭಾವಿ ಸಭೆ

ಆಲೂರು ತಾಲ್ಲೂಕಿನಲ್ಲಿ ರಾಷ್ಟ್ರೀಯ ಪಕ್ಷವಾದ ಅಮ್ ಆದ್ಮಿ ಪಾರ್ಟಿ ತಾಲ್ಲೂಕು ಘಟಕವನ್ನು ಉದ್ಘಾಟಿಸಲು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಜಿಲ್ಲಾಧ್ಯಕ್ಷರಾದ ಕೆ.ಪಿ ಶಿವಕುಮಾರ್ ಮಾತನಾಡಿ, ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯನ್ನು ಬಲಿಷ್ಠಪಡಿಸುತ್ತಿದ್ದೇವೆ. ಭ್ರಷ್ಟಾಚಾರ ಮುಕ್ತ ರಾಷ್ಟ್ರದಡೆಯತ್ತಾ ಸಾಗುತ್ತಿರುವ ಎಎಪಿ ಪಕ್ಷ ಪ್ರಸ್ತುತ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಡಳಿತವಿದ್ದು ಅದರ ಗಾಳಿ ದಕ್ಷಿಣ ಭಾರತದ ಕಡೆ ಬೀಸುತ್ತಿದೆ ಇದನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಲೂರು ತಾಲೂಕಿನ ಯುವ ಮುಖಂಡರಾದ ಹಾಗೂ ವಕೀಲರಾದ ಶಂಕರ್ ಅವರು ಅಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿದ್ದು ಭ್ರಷ್ಟಾಚಾರ ಮುಕ್ತ ರೈತರ ಪರ.ಸಮಾನತೆಯ ಪರ. ಹೋರಾಟ ಮಾಡಿಕೊಂಡು ಪ್ರಸ್ತುತ ಎರಡು ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಕರ್ನಾಟಕದಲ್ಲೂ ಕೂಡ ಈ ಬಾರಿ ಚುನಾವಣಾ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶ ಕಲ್ಪಿಸಿ ಕೊಡುತ್ತಿದ್ದಾರೆ ಎಲ್ಲ ಯುವಜನತೆಯ ಸಹಕಾರವಿದೆ ಎಂದು ತಿಳಿಸಿದರು.
ಈ ಸಂದರ್ಭ ಹೆಚ್.ಈ ದ್ಯಾವಪ್ಪ, ಎಎಪಿ ಜಿಲ್ಲಾಧ್ಯಕ್ಷರಾದ ಕೆ.ಪಿ ಶಿವಕುಮಾರ್.ಮಹಿಳಾ ಆಧ್ಯಕ್ಷರಾದ ಸವಿತಾ, ತಾಲ್ಲೂಕು ಉಸ್ತುವಾರಿ ಮುಖಂಡರು ಹಾಗೂ ವಕೀಲರಾದ ಶಂಕರ್.ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ರವಿ ಸಾಮ್ರಾಟ್ .ಮುಖಂಡರಾದ ಹೆಚ್.ಈ ದ್ಯಾವಪ್ಪ. ಟಿ. ಪರಮೇಶ್ .ಶಂಭುಗೌಡ.ಎಂ.ಕೆ ಸ್ವಾಮಿ ಮತ್ತು ನೂತನ ಪದಾಧಿಕಾರಿಗಳಾದ ಆನಂದ್.ರವಿ. ತೀರ್ಥಕುಮಾರ್ ಮುಂತಾದವತು ಹಾಜರಿದ್ದರು.