ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾದಲ್ಲಿ ತುಳು ಲಿಪಿ ನಾಮಫಲಕ ಅನಾವರಣ

ಶ್ರೀ ಗೋಪಾಲಕೃಷ್ಣ ಆರ್ಟ್ಸ್ & ಸ್ಫೋರ್ಟ್ಸ್ ಕ್ಲಬ್ಬಿನ ಸಹಕಾರದಿಂದ ನಿರ್ಮಿಸಲಾದ ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ತುಳು ಲಿಪಿ ನಾಮಫಲಕ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ವಾಸುದೇವ ಕುಂಟಾರು ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜೈ ತುಳುನಾಡು(ರಿ.) ಕಾಸರಗೋಡು ಘಟಕದ ಅಧ್ಯಕ್ಷರಾದ ಶ್ರೀ ಹರಿಕಾಂತ್ ಸಾಲಿಯಾನ್ ಹಾಗೂ ಕಾರ್ಯದರ್ಶಿ ಕಾರ್ತಿಕ್ ಪೆರ್ಲ, ಸಂಚಾಲಕರಾದ ದೇವಿಪ್ರಸಾದ್ ನೆಕ್ರಾಜೆ ಭಾಗಿಯಾದರು. ಶ್ರೀ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ, ಪ್ರೊ. ಶ್ರೀನಾಥ್ ಕೊಲ್ಲಂಗಾನ, ಜಯದೇವ ಖಂಡಿಗೆ, ಶ್ರೀ ನಿತ್ಯಾನಂದ ಶೆಣೈ , ಶ್ರೀ ರಾಜನ್ ಮುಳಿಯಾರು, ಶ್ರೀ ಮನು ಪಣಿಕ್ಕರ್ , ಶ್ರೀ ಹರೀಶ್ ಗೋಸಾಡ, ಶ್ರೀ ಗೋಪಾಲಕೃಷ್ಣ ಆರ್ಟ್ಸ್ & ಸ್ಫೋರ್ಟ್ಸ್ ಕ್ಲಬ್ಬಿನ ಕಾರ್ಯದರ್ಶಿ ಕಿಶೋರ್ ಕುಮಾರ್ ಶಿವಾಜಿನಗರ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತುಳು ಲಿಪಿ ನಾಮಫಲಕದ ಉದ್ಘಾಟನೆಯನ್ನು ಮಾಡಿದಂತಹ ತಂತ್ರಿವರ್ಯರು ತುಳು ಭಾಷೆ, ತುಳು ಲಿಪಿ ಹಾಗೂ ಸಂಸ್ಕೃತಿಯ ಮಹತ್ವವನ್ನು ತಮ್ಮ ಆಶೀರ್ವಚನದಲ್ಲಿ ಪ್ರಸ್ತಾಪಿಸಿದರು.

Related Posts

Leave a Reply

Your email address will not be published.

How Can We Help You?