ಮೇ 14,15, 16ಕ್ಕೆ ಕಾಪುವಿನಲ್ಲಿ ಸ್ವದೇಶಿ ಮೇಳ

ಕಾಪುವಿನ ವಿಶ್ವಭಾರತಿ ಸಂಸ್ಥೆಯಡಿಯಲ್ಲಿ ಕಾಪು ಶ್ರೀ ಕಾಳಿಕಾಂಬಾ ದೇವಳದ ವಠಾರದಲ್ಲಿ ಅದ್ದೂರಿಯ ಸ್ವದೇಶಿ ಮೇಳ ನಡೆಯಲಿದೆ ಎಂಬುದಾಗಿ ಸಂಸ್ಥೆಯ ಸದಸ್ಯ ಬಾಸುಮ ಕೊಡಗು ಹೇಳಿದ್ದಾರೆ.ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕ್ರಮ ಮುಖ್ಯ ಉದ್ಧೇಶ ನಮ್ಮ ದೇಶದ ಜನ ಸ್ವದೇಶಿ ಉತ್ಪನ್ನ ಗಳನ್ನೇ ಉಪಯೋಗಿಸುವಂತ್ತಾಗ ಬೇಕು ಹಾಗೂ ಈ ಕಾರ್ಯಕ್ರಮದಲ್ಲಿ ಆರೋಗ್ಯ ವಂತ ಶಿಶು ಸ್ಪರ್ಧೆ, ಛದ್ಮವೇಷ ಸ್ಪರ್ದೇ, ಆದರ್ಶ ದಂಪತಿ ಸ್ಪರ್ಧೆ, ದೇಶಿ ನೃತ್ಯ ಸಹಿತ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಕ್ಷರ ಸಂತ ಅರೆಕಳ ಹಾಜಬ್ಬ ಸಹಿತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮಕ್ಕೆ ಮೂರು ಮಂದಿ ಸ್ವಾಮೀಜಿಗಳ ಅನೇಕ ರಾಜಕೀಯ ಧಾರ್ಮಿಕ ಮುಂಖಡರು ಪಾಲ್ಗೊಳಲಿದ್ದಾರೆ ಎಂದರು. ಸುದ್ಧಿ ಗೋಷ್ಠಿಯಲ್ಲಿ ಶ್ರೀ ಕಾಂತ್, ಆನಂದ ಕುಂದರ್ ಇದ್ದರು.

Related Posts

Leave a Reply

Your email address will not be published.

How Can We Help You?