ರಾಜ್ಯಸಭೆಗೆ ಕಾಂಗ್ರೆಸ್ನಿಂದ ಮೊಯಿಲಿ ಹೆಸರು ಶಿಫಾರಸು ಮಾಡಲಿ : ಅಭಯಚಂದ್ರ ಜೈನ್

ಮೂಡುಬಿದಿರೆ:ಹಿರಿಯ ರಾಜಕೀಯ ಮುತ್ಸದ್ಧಿ ಮಾಜಿ ಸಂಸದ ಸದಸ್ಯ ಎಂ. ವೀರಪ್ಪ ಮೊಯಿಲಿ ಅವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಬೇಕೆಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ.
ಅವರು ಮೂಡುಬಿದರೆ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವೀರಪ್ಪ ಮೊಯಿಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಿಇಟಿ ವ್ಯವಸ್ಥೆಯನ್ನು ರಿಗೆ ತಂದು ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಅವಕಾಶ ಮಾಡಿಕೊಟ್ಟಿದ್ದರು. ಮಂಗಳೂರಿನಲ್ಲಿ ಎಂಆರ್ಪಿಎಲ್ ಸ್ಥಾಪನೆಗೆ ಕಾರಣರಾಗಿ ಸ್ಥಳಿಯರಿಗೆ ಉದ್ಯೋಗವಕಾಶ ಕಲ್ಪಿಸಿದ್ದರು. ತುಳುಸಾಹಿತ್ಯ ಅಕಾಡೆಮಿ ಸ್ಥಾಪಿಸಿ ತುಳು ಭಾಷೆಗೆ ಪ್ರಾತಿನಿದ್ಯ ನೀಡಿದ್ದರು. ಹಂಪಿ ವಿವಿ ಸ್ಥಾಪನೆ, ವಿಶ್ವೇಶರಯ್ಯ ತಾಂತ್ರಿಕ ವಿವಿ, ಶಿಲ್ಪ ಕಲಾ ಅಕಾಡೆಮಿ ಆರಂಭಕ್ಕು ಮೊಯಿಲಿಯವರು ಕಾರಣರಾಗಿದ್ದರು. ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗು ಇವರ ಕೊಡುಗೆ ದೊಡ್ಡದಿದೆ. ಎರಡು ಬಾರಿ ಸಂಸದರಾಗಿ, ಕೇಂದ್ರ ಮಂತ್ರಿಯಾಗಿಯು ಸೇವೆ ಸಲ್ಲಿಸಿದ್ದ ಮೊಯಿಲಿ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ದೂರದೃಷ್ಟಿಯುಳ್ಳ ಹಾಗೂ ಸಾಮಾಜಿಕ ನಾಯಕ್ಕಾಗಿ ಹೋರಾಡುತ್ತಿರುವ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಸಾಹಿತಿಯಾಗಿ ಅನೇಕ ಕೃತಿಗಳನ್ನು ಕೂಡ ರಚಿಸಿದ್ದಾರೆ. ಜೂನ್ ತಿಂಗಳಲ್ಲಿ ನಾಲ್ಕು ರಾಜ್ಯ ಸಭಾ ಹುದ್ದೆ ತೆರವಾಗಲಿದ್ದು ಒಂದು ಸ್ಥಾನಕ್ಕೆ ಕಾಂಗ್ರೆಸ್ನಿಂದ ವೀರಪ್ಪ ಮೊಯಿಲಿಯವರ ಹೆಸರನ್ನು ಆಯ್ಕೆ ಮಾಡುವಂತೆ ಕೋರಿ ಕೆಪಿಸಿಸಿ ಯು ಎಐಸಿಸಿಗೆ ಶಿಫಾರಸು ಮಾಡಬೇಕು ಎಂದು ಅಭಯಚಂದ್ರ ಆಗ್ರಹಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ವಕ್ತಾರ ರಾಜೇಶ್ ಕಡಲಕೆರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.