ಏಕಾಂಗಿಯಾಗಿ ವಾಸಿಸುತ್ತಿದ್ದ ಪಾಣಾಜೆಯ ಗಿರೀಶ್ ಭಟ್ ಮೃತದೇಹ ಮನೆಯೊಳಗಡೆ ಪತ್ತೆ.

ನಿಡ್ಪಳ್ಳಿ; ಪಾಣಾಜೆ ಗ್ರಾಮದ ನಡುಕಟ್ಟ ನಿವಾಸಿ ದಿ. ವೆಂಕಟರಮಣ ಭಟ್ ಅವರ ಪುತ್ರ ಗಿರೀಶ್ ಭಟ್ (45ವ.) ಎಂಬವರು ಮೃತಪಟ್ಟಿದ್ದಾರೆ.
ಅವಿವಾಹಿತರಾಗಿದ್ದ ಗಿರೀಶ್ರವರು ಕೃಷಿಕರಾಗಿದ್ದು ತಂದೆ ತಾಯಿ ಈ ಹಿಂದೆಯೇ ಮೃತಪಟ್ಟಿದ್ದು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಎರಡು ದಿನಗಳ ಹಿಂದೆ ಅರ್ಲಪದವಿನ ಹೊಟೇಲ್ ಒಂದಕ್ಕೆ ಆಗಮಿಸಿದ ಅವರು ದೋಸೆ ಪಾರ್ಸಲ್ ಹಿಡ್ಕೊಂಡು ಹೋಗಿದ್ದರು . ಆ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಿರೀಶ್ ಅವರಿಗೆ ಸಂಬಂಧಿಕರು ಫೋನ್ ಕಾಲ್ ಮಾಡಿದಾಗ ಅವರು ಪೋನ್ ರಿಸೀವ್ ಮಾಡದಿದ್ದರಿಂದ ಅವರ ಮನೆಗೆ ಬಂದು ನೋಡಿದಾಗ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಇದ್ದದ್ದು ಕಂಡು ಬಂತು. ಅವರು ಮೇ.11 ರಂದು ರಾತ್ರಿ ಮಲಗಿದವರಿಗೆ ಹೃದಯಾಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಸಂಪ್ಯ ಎಸ್.ಐ ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ ನಂತರ ಬಾಗಿಲು ತೆಗೆಯಲಾಯಿತು. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಪೋಸ್ಟ್ ಮಾರ್ಟಮ್ ಗೆ ಕೊಂಡೊಯ್ಯಲಾಗಿದೆ.
ಕೆಲ ವರ್ಷಗಳ ಹಿಂದೆ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಇತ್ತೀಚೆಗೆ ರಾಜಕೀಯ ಚಟುವಟಿಕೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ.
ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.