ಹಣಿಯೂರುಗುತ್ತು ತರವಾಡು ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ : ಮಂಗಳೂರು ವಲಯದ ಹೊರೆಕಾಣಿಕೆ ಕೇಂದ್ರ ಉದ್ಘಾಟನೆ

ಹಣಿಯೂರು ಗುತ್ತಿನ ತರವಾಡು ದೈವಸ್ಥಾನದ ಪುನರ್ ಪ್ರತಿಷ್ಠೆ, ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗ್ರಹಪ್ರವೇಶ ಹಾಗೂ ಶ್ರೀ ದೈವಗಳ ಧರ್ಮನೇಮೋತ್ಸವ ಮೇ 14 ರಿಂದ 18 ರವರೆಗೆ ಕೊಡಿಪ್ಪಾಡಿ ಬಳಿಯ ಹಣಿಯೂರಿನಲ್ಲಿ ನಡೆಯಲಿದೆ. ಮೇ 14 ರಂದು ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಮಂಗಳೂರು ವಲಯದ ಹೊರೆಕಾಣಿಕೆ ಕೇಂದ್ರ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು,
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ದೀಪ ಬೆಳಗಿಸಿ ಶುಭಹಾರೈಸಿದರು. ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮೊಕ್ತೇಸರರೂ ಹಿರಿಯ ಧಾರ್ಮಿಕ ಮುಖಂಡರಾದ ಶ್ರೀ ಉಮೇಶ್ ರೈ ಮೇಗಿನಮನೆ ಭಾಗವಿಹಿಸಿ ಶುಭನುಡುಗಳನ್ನಾಡುದರು. ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್ (ರಿ) ಪುತ್ತೂರು ಇದರ ಅಧ್ಯಕ್ಷರು ಹಾಗೂ ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ ನಾೈಕ್ ಉಪಸ್ಥಿತರಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯರಾದ ಶ್ರೀಮತಿ ವನಿತಾ ಪ್ರಸಾದ್ ಮತ್ತು ಶ್ರೀಮತಿ ಶಕೀಲಾ ಕಾವ, ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಆದೀಶ್, ಸಮಿತಿಯ ಸದಸ್ಯರಾದ ಶ್ರೀ ವಿನಾಯಾನಂದ ಕಾನಡ್ಕ ಹಾಗೂ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.