ಹೆಜಮಾಡಿ ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ

ಹೆಜಮಾಡಿ ಗ್ರಾ.ಪಂ.ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ಪ್ರಾಣೇಶ್ ಹೆಜಮಾಡಿ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಅಂಗೀಕಾರಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿ ನಿರ್ಗಮನ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ನಾನು ಬಡವರ ಸೇವೆ ನಡೆಸಲೆಂದು ಗ್ರಾ.ಪಂ. ಅಧ್ಯಕ್ಷನಾಗಲು ಬಯಸಿದ್ದೇ.. ಆದರೆ ನನ್ನ ಅನಿಸಿಕೆ ಸುಳ್ಳಾಗಿದೆ. ಗ್ರಾ.ಪಂ. ಅಧಿಕಾರಿಯ ಸಹಕಾರ ದೊರಕದ ಕಾರಣ ನನಗೆ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಲು ಅಸಾಧ್ಯವಾಗಿದ್ದು, ಈ ಬಗ್ಗೆ ನಾನು ಸಹಿತ ಗ್ರಾ.ಪಂ. ಬಹುತೇಕ ಸದಸ್ಯರು ನಮ್ಮ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಗ್ರಾ.ಪಂ. ಅಧಿಕಾರಿಯ ಬದಲಾವಣೆಗೆ ಮನವಿ ಮಾಡಿದ್ದರೂ ಯಾವುದೇ ಫಲ ಕಂಡಿಲ್ಲ. ಆ ನಿಟ್ಟಿನಲ್ಲಿ ಅಧ್ಯಕ್ಚ ಸ್ಥಾನಕ್ಕೆ ನ್ಯಾಯ ಕೊಡಲು ಅಸಾಧ್ಯವಾದ ಈ ಕಾಲಘಟ್ಟದಲ್ಲಿ ಅದರಲ್ಲಿ ಮುಂದುವರಿಯುವುದು ಸರಿಯಲ್ಲ ಎಂಬ ನೆಲೆಯಲ್ಲಿ ಹಾಗೂ ನನ್ನ ಮಯಕ್ತಿಕ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದರು.

Related Posts

Leave a Reply

Your email address will not be published.

How Can We Help You?