ಸರ್ಕಾರಗಳು ಯುವ ಸಮುದಾಯದ ಆಶೋತ್ತರ ಈಡೇರಿಸುವಲ್ಲಿ ವಿಫಲ :ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ ಆರೋಪ

ಕೇಂದ್ರ, ರಾಜ್ಯ ಸರಕಾರಗಳು ಮುಖ್ಯವಾಗಿ ಯುವ ಸಮುದಾಯದ ಆಶೋತ್ತಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಈ ಕಾರಣದಿಂದ ನಿರುದ್ಯೋಗ ಹೆಚ್ಚಾಗಿ ಯುವ ಸಮುದಾಯ ಸಾವಿನತ್ತ ಮುಖ ಮಾಡುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹನಾ ಎನ್ನುವ ಕಡಬ ತಾಲೂಕಿನ ಯುವತಿ ಉಡುಪಿಯಲ್ಲಿ ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಆನೇಕ ಪ್ರಕರಣಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ. ಸರಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂದು ಪ್ರಶ್ನಿಸಿದರು.
ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಬಿಜೆಪಿಯವರು ಮೋದಿ ಅನಿವಾರ್ಯತೆ ಎಂಬಂತೆ ಬಿಂಬಿಸಿದ್ದರು. ಈಗ ಅದೇ ಮೋದಿ ನೇತೃತ್ವದ ಸರಕಾರ ಯುವ ಸಮುದಾಯದ ಕನಸುಗಳಿಗೆ ಕೊಳ್ಳಿ ಇಟ್ಟಿದ್ದಾರ ಎಂದು ಆರೋಪಿಸಿದ ಪ್ರಸಾದ್ ಪಾಣಾಜೆ, ಯುವತಿ ಸಹನಾಳ ಕುಟುಂಬಕ್ಕೆ ಸರಕಾರ ನೆರವು ಕೊಡಬೇಕು ಮತ್ತು ಘಟನೆಯ ಸೂಕ್ತ ತನಿಖೆಯಾಗಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಹುಸಿ ಭರವಸೆ ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಮಲೇಶ್ ಸರ್ವೆ ಹಾಗೂ ಆಭಿಷೇಕ್ ಆಚಾರ್ಯ, ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರು ಉಪಸ್ಥಿತರಿದ್ದರು