Home 2024 (Page 65)

ಬಹರೈನ್ ಕನ್ನಡ ಸಂಘದಲ್ಲಿ ಶನಿ ಪೂಜೆ ಸತ್ಯನಾರಾಯಣ ಪೂಜೆ ಹಾಗು ಶ್ರೀ ಶನೀಶ್ವರ ಮಹಾತ್ಮೆ

ಬಹರೈನ್‌ನ ಕನ್ನಡ ಸಂಘವು ಕನ್ನಡ ಭವನದ ಸಭಾಂಗಣದಲ್ಲಿ ಜೂನ್ 14ರಂದು ಶನಿ ಪೂಜೆ ಸತ್ಯನಾರಾಯಣ ಪೂಜೆ ಹಾಗು ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಸಂಜೆ ಮೂರು ಗಂಟೆಗೆ ಸರಿಯಾಗಿ ಮಂಗಳೂರಿನ ಪ್ರಸಿದ್ಧ ಕದ್ರಿ ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ಶನಿ ಪೂಜೆ ಹಾಗು ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮವು ಆರಂಭವಾಗಲಿದೆ. ಸಂಜೆ

ಸುಳ್ಯ : ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ- ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಂಸದರು

ಮಂಗಳೂರು : ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಮಸ್ಯೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಪರಿಹಾರದ ಕುರಿತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ಮಾಡಿ ಚರ್ಚಿಸಿದರು. ಸುಳ್ಯ ತಾಲೂಕಿನ

ಪುತ್ತೂರು: ಶಾಂತಿಗೋಡಿನ ಪಂಜಿಗ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿಗೆ ಹಾನಿ

ಪುತ್ತೂರು: ಕಳೆದ ಎರಡು ದಿನಗಳಿಂದ ಬೆಳ್ಳಿಪ್ಪಾಡಿ ಗ್ರಾಮ ಮತ್ತು ಶಾಂತಿಗೋಡು ಗ್ರಾಮದ ನಡುವೆ ಸುತ್ತಾಡುತ್ತಿರುವ ಕಾಡಾನೆಗಳೆರಡು ಇದೀಗ ಶಾಂತಿಗೋಡು / ಚಿಕ್ಕಮುಡ್ನೂರು ಗ್ರಾಮದ ನಡುವೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಂತಿಗೋಡು ಗ್ರಾಮದ ಪಂಜಿಗದಲ್ಲಿ ಆನೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಬೆಳ್ಳಿಪ್ಪಾಡಿ ಕೊಡಿಮರದಿಂದ ಹೊಳೆ ದಾಟಿದ ಆನೆ ಅಲ್ಲಿಂದ ಬೆದ್ರಾಳ

ಅರುಣಾಚಲ ಪ್ರದೇಶ ಸಿಎಂ ಆಗಿ ಬಿಜೆಪಿ ನಾಯಕ ಪೇಮಾ ಖಂಡು ಪ್ರಮಾಣವಚನ ಸ್ವೀಕಾರ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಪೇಮಾ ಖಂಡು ಅವರು ಪ್ರಮಾಣವಚನ ಸ್ವೀಕಾರ ಮಾಡಿದರು. ಪೇಮಾ ಖಂಡು ಅವರು ಅರುಣಾಚಲಕ್ಕೆ ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದರು.ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಕೆ.ಟಿ.ಪರ್ನಾಯಕ್ ಅವರು ಪ್ರಮಾಣವಚನ ಬೋದಿಸಿದರು. ಇವರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಿಜೆಪಿ ಸತತ ಮೂರನೇ

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 49 ಭಾರತೀಯರು ಮೃತಪಟ್ಟಿದ್ದು, ಮೃತರಲ್ಲಿ ಹೆಚ್ಚಿನವರು ಕೇರಳದಿಂದ ಹೋದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಿಂದ ಹೋದ 14 ಜನರು ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ಹೇಳಿವೆ. ಮೃತದೇಹಗಳನ್ನು ಆದಷ್ಟು ಬೇಗ ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು

ಇನ್ನಾದಲ್ಲಿ ವಿದ್ಯುತ್ ಟವರ್ ವಿರುದ್ಧ ಬೃಹತ್ ಪ್ರತಿಭಟನೆ

ನಂದಿಕೂರಿನಿಂದ ಇನ್ನ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶದ ಕೃಷಿ ಭೂಮಿಯ ಮೇಲಿಂದ ಕೇರಳದ ಕಾಸರಗೋಡಿಗೆ ಹಾದು ಹೋಗಲಿರುವ 400 ಕೆ ವಿ ಸಾಮರ್ಥ್ಯದ ವಿದ್ಯುತ್ ಸ್ಪೀಡರ್ ಟವರ್ ಅಳವಡಿಕೆಯ ಯೋಜನೆಯ ಬಗ್ಗೆ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಇನ್ನ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ಕಾರ್ಕಳ ಶಾಸಕ

ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್:ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ

ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ ಕಳೆದ ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಪರಿಣಾಮ ಉಳ್ಳಾಲ, ತೊಕ್ಕೋಟ್ಟು, ಬಜಾಲ್, ಜಪ್ಪಿನಮೊಗರು ಸೇರಿದಂತೆ ಆಸುಪಾಸಿನ ಸಾವಿರಾರು ಜನತೆ ತೀರಾ ಸಂಕಷ್ಟಕ್ಕೊಳಗಾಗಿ ದಿನನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ರೈಲ್ವೆ ಇಲಾಖೆ ಕೆಳಸೇತುವೆ ನಿರ್ಮಾಣ ಕಾರ್ಯವನ್ನು ಆದಷ್ಟು

ಲಿಂಗ ಸಮಾನತೆಯಲ್ಲಿ ಎರಡು ಸ್ಥಾನ ಕೆಳಕ್ಕೆ ಜಾರಿದ ಭಾರತ

ವಿಶ್ವ ಸಂಸ್ಥೆಯ ಡಬ್ಲ್ಯೂ ಈ ಫ್- ಲೋಕ ಆರೋಗ್ಯ ವೇದಿಕೆ ಹೊರಗಿಟ್ಟಿರುವ ಹೊಸ ಸೂಚ್ಯಂಕದಂತೆ ಭಾರತವು ಲಿಂಗ ಸಮಾನತೆಯಲ್ಲಿ ಕಳೆದ ವರುಷ ಇದ್ದ 127ರಿಂದ 129ನೇ ಸ್ಥಾನಕ್ಕೆ ಕುಸಿದಿದೆ.ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿ ಐಸ್‌ಲ್ಯಾಂಡ್, ಫಿನ್ಲ್ಯಾಂಡ್, ನಾರ್ವೆ, ನ್ಯೂಜಿಲ್ಯಾಂಡ್ ಮತ್ತು ಸ್ವೀಡನ್‌ಗಳು ಇವೆ. ಬ್ರಿಟನ್ 14ನೇ ಸ್ಥಾನದಲ್ಲಿದ್ದರೆ ಅಮೆರಿಕ ಸಂಯುಕ್ತ

ಬೆಳ್ತಂಗಡಿ ದಂಪತಿಗೆ ಬಂದ ಅನಾಮಧೇಯ ಕರೆ

ಪಾಕಿಸ್ತಾನದ ಪೋನ್ ಕರೆಯಿಂದ ಕಂಗಾಲಾದ ಬೆಳ್ತಂಗಡಿಯ ದಂಪತಿ ಇದೀಗ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಟ್ರಮೇ ಗ್ರಾಮದ ದಂಪತಿಗಳಿಗೆ ಪೋನ್ ಮಾಡಿ ನಿಮ್ಮ ಮಗ ರೇಪ್ ಕೇಸಿನಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾನೆ ನೀವು ಏನಾದರೂ ಮಾತು ಕಥೆ ಮಾಡಿ ಮುಗಿಸಿ ಎಂದು ಹೇಳಿದಾಗ ತಾಯಿಯು ಗಾಬರಿಗೊಂಡು ತನ್ನ ಗಂಡನಿಗೆ ಮೊಬೈಲ್ ಕೊಟ್ಟು ಮಾತನಾಡಿದಾಗ

ಮಂಗಳೂರು : ಜೂನ್ 16 ರಂದು ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾರ್ಡ್-2024

ಮಂಗಳೂರು : ಸತತ ಮೂರನೇ ಬಾರಿಗೆ ಸ್ಯಾಂಡಿಸ್ ಕಂಪನಿ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾರ್ಡ್ 2024 ಕಾರ್ಯಕ್ರಮವು ಜೂನ್ 16 ರಂದು ಮುಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನ್ಷನಲ್ ಸೆಂಟರ್ ಕೊಲ್ನಾಡಿನಲ್ಲಿ ನಡೆಯಲಿದೆ ಎಂದು ಸ್ಯಾಂಡೀಸ್ ಕಂಪನಿಯ ಮಾಲಕರಾದ ಸಂದೇಶ್ ರಾಜ್ ಬಂಗೇರ ತಿಳಿಸಿದರು. ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ