Home 2024 (Page 95)

ಮಹಾಪ್ರಭು ಮೋದಿಯವರ ಮುಖದಲ್ಲಿ ಆತಂಕ : ಪ್ರಕಾಶ್ ರಾಜ್

400 ಬಿಡಿ 200 ಕೂಡ ಕಷ್ಟ ಎಂಬ ಆತಂಕ ಮಹಾಪ್ರಭು ಮೋದಿಯವರ ಮುಖದಲ್ಲಿ ಕಾಣಿಸುತ್ತಿದೆ. ಆದರೂ ರಾಜ ಸೋಗಿನಲ್ಲಿ ಸುತ್ತುತ್ತಿದ್ದಾರೆ ಎಂದು ನಟ ರಾಜಕಾರಣಿ ಪ್ರಕಾಶ್ ರಾಜ್ ಹೇಳಿದರು. ಅವರು ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ 133ನೇ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಮಹಾಪ್ರಭುವಿಗೆ ಬೇಕಾದುದು ವಿದೂಷಕರ ತಂಡ. ಕರ್ನಾಟಕದಿಂದ ಲೋಕ

ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಅವರ ಸೋಮವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು. ಗೀತಾರ ಪತಿ ನಟ ಶಿವರಾಜಕುಮಾರ್, ಮಾಜೀ ಮಂತ್ರಿ ಕಿಮ್ಮನೆ ರತ್ನಾಕರ್, ಮಂಜುನಾಥ ಭಂಡಾರಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಅಭಿಮಾನಿಗಳು ಶಿವಣ್ಣ ಶಿವಣ್ಣ

ಮೂಡುಬಿದಿರೆ: ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಯಕ್ಷಗಾನ ಲೋಕದ ಮೇರು ಭಾಗವತ ದಿ. ಬಲಿಪ ನಾರಾಯಣ ಭಾಗವತ ಅವರ ಮೊದಲ ವರ್ಷದ ಸಂಸ್ಮರಣೆಯ ಅಂಗವಾಗಿ ಹಿರಿಯ ಕಲಾವಿದ ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾರೂರಿನ ನೂಯಿಯಲ್ಲಿರುವ ಬಲಿಪರ ನಿವಾಸದ ಆವರಣದಲ್ಲಿ ಜರಗಿದ ಕಟೀಲು ಮೇಳದ ಹರಿಕೆ ಬಯಲಾಟದ ರಂಗಸ್ಥಳದಲ್ಲಿ ಮಾನಪತ್ರ, ನಗದು ಗೌರವದೊಂದಿಗೆ ಈ ಪ್ರಶಸ್ತಿ ಪ್ರದಾನ

ಪ್ರಧಾನಿ ಮೋದಿಯವರ ಖಾತರಿಗಳು ಸುಳ್ಳುಗಳ ಖಾತರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ

ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ‘ಸುಳ್ಳಿನ ಪತ್ರ’ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಖಾತರಿಗಳು ‘ಸುಳ್ಳುಗಳ ಖಾತರಿಗಳಾಗಿವೆ’ ಎಂದು ಟೀಕಿಸಿದ್ದಾರೆ. ಮೋದಿ ಅವರು, ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವುದು, ಬೆಲೆ ಏರಿಕೆ ಹಾಗೂ

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೊ: ಪೊಲೀಸ್ ಇಲಾಖೆ ಹೈ ಅಲರ್ಟ್

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದು, ಮಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಏರ್​ಪೋರ್ಟ್​​​ನಿಂದ ರೋಡ್ ಶೋ ಮುಕ್ತಾಯವಾಗುವ ಪ್ರದೇಶದವರೆಗೂ ಬಿಗಿ ಭದ್ರತೆ ಇರಲಿದ್ದು, ಸುಮಾರು 2500 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕುರಿತಾಗಿ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್​ ಪ್ರತಿಕ್ರಿಯಿಸಿದ್ದು, ವಿಮಾನ

ಪುತ್ತೂರು: ಅಪಾಯಕಾರಿ ತಿರುವು ತೆರವಿಗೆ ಶಾಸಕರ ಸೂಚನೆ

ಮಾಣಿ – ಮೈಸೂರು ರಾ.ಹೆದ್ದಾರಿ 275 ರ ಆರ್ಯಾಪು ಗ್ರಾಪಂ ವ್ಯಾಪ್ತಿಯ ಕಲ್ಲರ್ಪೆಯಲ್ಲಿ ಅಪಾಯಕಾರಿ ತಿರುವು ಇದ್ದು ಅದನ್ನು ಶಾಸಕರಾದ ಅಶೋಕ್ ರೈ ವೀಕ್ಷಣೆ ಮಾಡಿದರು. ಈ ತಿರುವಿನಲ್ಲಿ ಅನೇಕ ವಾಹನ ಅಫಘಾತಗಳು ನಡೆದಿದ್ದು ಮೂವರು ಮೃತಪಟ್ಟ ಘಟನೆಯೂ ನಡೆದಿತ್ತು. ಇಲ್ಲಿರುವ ಅಪಾಯಕಾರಿ ಧರೆಯನ್ನು ತೆರವು ಮಾಡಿ ವಾಹನ ಸಂಚಾರ ಗೋಚರಿಸುವಂತೆ ಮಾಡಬೇಕು ಎಂಬ ಆಗ್ರಹ

ಆಳ್ವಾಸ್ ಕಾಲೇಜಿನಲ್ಲಿ ತುಳು ರಂಗ್- 2024:ತುಳು ಭಾಷೆಯ ಆಸ್ತಿಯಾಗೋಣ: ಅರವಿಂದ್ ಕೆ. ಪಿ

ಮೂಡುಬಿದಿರೆ:  ನಾವು ಎಷ್ಟೇ ದೂರವಿದ್ದರೂ ಭಾಷೆ ಎಲ್ಲರನ್ನೂ, ಎಲ್ಲತನವನ್ನೂ ಒಗ್ಗೂಡಿಸುತ್ತದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಎಲ್ಲವನ್ನೂ ಒಗ್ಗೂಡಿಸುವ ಕಾರ್ಯವನ್ನು ನಾವು ಮಾಡುವುದರ ಜೊತೆಗೆ  ತುಳು ಭಾಷೆಯ ಆಸ್ತಿಯಾಗುವ ಕೆಲಸ ಮಾಡಬೇಕಾಗಿದೆ  ಎಂದು ಅಂತರಾಷ್ಟ್ರೀಯ ಮೋಟಾರ್  ರೇಸರ್ ಮತ್ತು ಚಲನಚಿತ್ರ ನಟ ಅರವಿಂದ್ ಕೆ. ಪಿ ಹೇಳಿದರು. ಅವರು ಆಳ್ವಾಸ್ ಪದವಿ

ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಣೆ

ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನವಾಗಿದ್ದು, ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗ್‌ದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಭವನದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ

ಮಂಗಳೂರು: ಕಾಂಕ್ರೀಟು ಕಡಿದು ತೋಡಿದ ಗುಂಡಿ : ಅವೈಜ್ಞಾನಿಕತೆಗೆ ಬೇಕಿದೆ ಒಂದು ಕೊನೆ

ನಗರ ನಿವಾಸಿಗಳ ನಿರೀಕ್ಷೆಗಳು ಹುಸಿಯಾಗಿವೆ. ನಗರ ಸಂಪರ್ಕದ ಕಾಂಕ್ರೀಟ್ ರಸ್ತೆಗಳು ಮಾನ್ಸೂನ್‌ನಲ್ಲಿ ಬಾಳಿಕೆ ಬರುವಲ್ಲಿ ವಿಫಲವಾಗಿವೆ. ವಾಹನ ಮಾಲೀಕರಿಗೆ ಮತ್ತು ಪಾದಚಾರಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದು, ಮಂಗಳೂರು ಮಹಾನಗರಪಾಲಿಕೆ ವಿರುದ್ದ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಕಾಂಕ್ರೀಟ್ ರಸ್ತೆ ಯೋಜನೆಗಳು ಅವೈಜ್ಞಾನಿಕವಾಗಿದ್ದು ವಿವಿಧ ಸಿವಿಲ್

ಮಂಗಳೂರಿಗೆ ಮೋದಿ: ತರಾತುರಿಯಲ್ಲಿ ರಸ್ತೆಗೆ ತೇಪೆ ಕಾರ್ಯ

2024 ಲೋಕಸಭಾ ಚುನಾವಣೆ ನಿಮ್ಮಿತ್ತ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೧೪ರಂದು ಮಂಗಳೂರಿಗೆ ಆಗಮಿಸಲ್ಲಿದ್ದು, ಮಂಗಳೂರು ನಗರವನ್ನು ಸ್ವಚ್ಚ ಹಾಗೂ ಸುಂದರಗೊಳಿಸುವ ಕೆಲಸಗಳು ತರಾತುರಿಯಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಏಪ್ರಿಲ್ 14ರಂದು ನಗರಕ್ಕೆ