Home Articles posted by Laxman Suvarna (Page 7)

ಉಡುಪಿಯಲ್ಲಿ ಗೃಹ ಸಚಿವರೊಂದಿಗೆ ಸಭೆ : ‘ಬೆನಿಫಿಟ್ ಆಫ್ ಡೌಟ್ ನ ಲಾಭ ಬಾಡಿಗೆದಾರರಿಗೆ ಸಿಗಬೇಕು’

ಉಡುಪಿ : ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಗೃಹ ಸಚಿವ ಜಿ. ಪರಮೇಶ್ವರ್, ಇಂದು ಸಂಜೆ ಉಡುಪಿ ಎಸ್ಪಿ ಕಚೇರಿಯಲ್ಲಿ ಉಡುಪಿ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ, ಉಡುಪಿ ಎಸ್ಪಿ ಅಕ್ಷಯ್, ಎಎನ್ ಎಫ್ ಎಸ್ ಪಿ ಪ್ರಕಾಶ್ ನಿಕ್ಕಂ ನೇತೃತ್ವದದಲ್ಲಿ ಪರಿಶೀಲನಾ ಸಭೆ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ

ಉಡುಪಿಯಲ್ಲಿ ಕೇವಲ 10 ದಿನ ಕುಡಿಯುವ ನೀರು ಪೂರೈಕೆ ಸಾಧ್ಯ : ಉಡುಪಿ ನಗರಸಭೆ

ಉಡುಪಿ : ಮುಂಗಾರಿನ ಋತು ಪ್ರಾರಂಭವಾದರೂ, ಉಡುಪಿ ಜಿಲ್ಲೆಯ ಕೆಲೆವೆಡೆ ಮಾತ್ರ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ ಉಡುಪಿ ನಗರ ಪ್ರದೇಶ ಸೇರಿದಂತೆ ಹಲವೆಡೆ ಕೇವಲ ಮೋಡ ಕವಿದ ವಾತಾವರಣ ಮಾತ್ರ ಭಾಗ್ಯವೆಂಬಂತಿದೆ. ಬಹುತೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರ ಪಡುವಂತಾಗಿದ್ದು, ಇದೀಗ ನಗರಸಭೆ ವ್ಯಾಪ್ತಿಯಲ್ಲಿ ಇನ್ನು 10 ದಿನ ಮಾತ್ರ ಆಗುವಷ್ಟು ಕುಡಿಯುವ ನೀರು ಪೂರೈಸಲು, ಹಿರಿಯಡಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರು ಲಭ್ಯವಿದೆ ಎನ್ನುವ ಮಾಹಿತಿ ಉಡುಪಿ ನಗರಸಭೆ

ಬೆಂಗಳೂರಿನಲ್ಲಿ ನಾಪತ್ತೆಯಾದ ಬಾಲಕ : ಮಗನನ್ನು ಹುಡುಕುತ್ತ ಕಡಲತೀರಕ್ಕೆ ಬಂದ ಹೆತ್ತವರು

ಬೆಂಗಳೂರಿನ ಯಲಹಂಕದ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಆದಿತ್ಯ ಟಿ. (15), ಒಂದು ವಾರದ ಹಿಂದೆ ನಾಪತ್ತೆಯಾಗಿದ್ದಾನೆ. ಮೇ 29, 2023ರ ಸೋಮವಾರದಂದು ತನ್ನ ಪೋಷಕರಾದ ತಂದೆ ತಿಮ್ಮ ರಾಯಪ್ಪ ಮತ್ತು ತಾಯಿ ಅನಿತಾರಲ್ಲಿ ಕೂದಲು ಕಟ್ಟಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಮಧ್ಯಾಹ್ನದ ಹೊತ್ತಿಗೆ ಹೋದವನು ಮರಳಿ ಮನೆಗೆ ಬಂದಿಲ್ಲ. ಈ ಬಗ್ಗೆ ಹೆತ್ತವರು ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ

ವಿಶ್ವ ಪರಿಸರ ದಿನಾಚರಣೆ : ಕಾಂಡ್ಲಾ ಸಸಿ ನೆಟ್ಟ ಶೋಭಾ ಕರಂದ್ಲಾಜೆ

ಉಡುಪಿ : ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿ ಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೋಟ್ ಮೂಲಕ ತೆರಳಿ ನದಿ ನಡುವೆ ಬೆಳೆಸಿದ ಕಾಂಡ್ಲಾ ವನಗಳ ವೀಕ್ಷಣೆ ಮಾಡಿದ ಬಳಿಕ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಶೇ.20 ಅರಣ್ಯ

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೊದಲ ಬಾರಿಗೆ : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ನವೀನ ಎಂಡೋಸ್ಕೋಪಿ (ಈ ಯು ಎಸ್ – ಗ್ಯಾಸ್ಟ್ರೊಜೆಜುನ್ಸೋಟಮಿ)

ಉಡುಪಿ : ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಿರನ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ಡಾ. ಗಣೇಶ್ ಭಟ್, ಡಾ. ಅತಿಶ್ ಶೆಟ್ಟಿ, ಡಾ. ಬಾಲಾಜಿ ಮತ್ತು ಡಾ. ಸಂದೇಶ್ ಶೇಟ್ (ಅರಿವಳಿಕೆ) ಇವರುಗಳು ಎಂಡೋಲ್ಟ್ರಾಸೌಂಡ್ ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೋಮಿ ಎಂಬ ಸಂಕೀರ್ಣ ವಿನೂತನ ಎಂಡೋಸ್ಕೋಪಿ ಕಾರ್ಯವಿಧಾನ (ಶಸ್ತ್ರಚಿಕಿತ್ಸೆ)ಯನ್ನು ಉಡುಪಿ ಜಿಲ್ಲೆಯ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಇತ್ತೀಚೆಗೆ ನಡೆಸಲಾಯಿತು.

ತೂಫಾನ್ ವೇಗದಲ್ಲಿ ಪ್ರಾಣಕ್ಕೆ ಕಂಟಕ ತರುವ ಎಚ್ಚರಗೇಡಿ ಪ್ರಯಾಣ

ಉಡುಪಿ ಜಿಲ್ಲೆಯ ಮೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಪ್ರವಾಸಿಗರು ತೂಫಾನ್ ವಾಹನದಲ್ಲಿ ನೇತಾಡಿಕೊಂಡು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ವಾಹನದ ಒಳಗೆ ಭರ್ತಿ ಜನರನ್ನು ತುಂಬಿಸಿಕೊಂಡು, ಜೀವಕ್ಕೆ ಅಪಾಯ ತರುವಂತೆ ವಾಹನದ ಮೇಲ್ಭಾಗದಲ್ಲಿ ಮತ್ತು ಸ್ಪೇರ್ ಟೈರ್ ಮೇಲೆ ಕುಳಿತು ನೇತಾಡುತ್ತಾ ನಿರ್ಲಕ್ಷ್ಯವಾಗಿ ವಾಹನದಲ್ಲಿ ಸಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೈವೇ ನಲ್ಲಿ ಪ್ರವಾಸಿಗರ ತೀರ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು

ಉಡುಪಿಯ ಯಕ್ಷಗಾನ ಕಲಾರಂಗ : ಯಕ್ಷನಿಧಿ ಕಲಾವಿದರ ಸಮಾವೇಶ

ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷನಿಧಿ ಕಲಾವಿದರ 2023ರ ಸಮಾವೇಶವು ಜೂನ್ 1 ರ ಗುರುವಾರದಂದು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಸಮಾವೇಶವನ್ನು ಖ್ಯಾತ ಕಥಕ್ ಕಲಾವಿದೆ ವಿದುಷಿ ಮಧು ನಟರಾಜ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅದಮಾರು ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಡಾ. ಎ. ಪಿ. ಭಟ್, ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈ, ಕೊಂಡದಕುಳಿ ರಾಮಚಂದ್ರ ಹೆಗಡೆ,

ವಿದ್ಯುತ್ ಸ್ಪರ್ಶ : ನವಿಲ ರಕ್ಷಣೆಗೆ ಬಂತು ಆಂಬುಲೆನ್ಸ್

ಉಡುಪಿ : ವಿದ್ಯುತ್ ಸ್ಪರ್ಶಿಸಿ ರಾಷ್ಟ್ರಪಕ್ಷಿ ನವಿಲೊಂದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆ ಬಳಿ ನಡೆದಿದೆ. ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ನವಿಲನ್ನು ಕಂಡ ಸ್ಥಳೀಯರು ಉಡುಪಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅವರು, ನವಿಲನ್ನು ಆ್ಯಂಬುಲೆನ್ಸ್ ನ ಮೂಲಕ ಉದ್ಯಾವರದ ಪಶುವೈದ್ಯ ಸಂದೀಪ್ ಶೆಟ್ಟಿ ಅವರ ಬಳಿ ಕೊಂಡೊಯ್ದು ಮಾನವೀಯತೆಯನ್ನು ಮೆರೆದಿದ್ದಾರೆ. ಆದರೆ, ನವಿಲನ್ನು ಪರೀಕ್ಷಿಸಿದ

ಶಾಲಾ ಪ್ರಾರಂಭೋತ್ಸವದಲ್ಲಿ ಉಡುಪಿ ಡಿಸಿ ಕೂರ್ಮಾರಾವ್ ಎಂ. ಭಾಗಿ

ಉಡುಪಿ : ಉಡುಪಿಯಲ್ಲಿ ಮೇ 29 ರಿಂದ ಶಾಲೆಗಳು ತೆರೆದುಕೊಂಡಿದ್ದು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳು ಇಲಾಖೆಯ ಸೂಚನೆಯಂತೆ ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಿರ್ವಹಿಸಿದರು. ಮೇ 31 ರಂದು ತರಗತಿಗಳು ಆರಂಭಗೊಂಡು, ಬೇಸಿಗೆ ರಜೆಯನ್ನು ಮುಗಿಸಿ ಬಂದ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಗಿತ್ತು. ವಿಶೇಷವೆಂಬಂತೆ ಜಿಲ್ಲೆಯ ಹಲವು ಶಾಲೆಗಳಲ್ಲಿ ತೋರಣ, ರಂಗೋಲಿ ಹಾಕಿ ಮಕ್ಕಳನ್ನು ಬರಮಾಡಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ

ಸರಕಾರ ಖಾಸಗಿ ಬಸ್ ಗಳ ವೆಚ್ಚ ಭರಿಸಿದ್ರೆ ಖಾಸಗಿ ಬಸ್ ನಲ್ಲೂ ಉಚಿತ ಪ್ರಯಾಣ : ಉಡುಪಿ ಸಿಟಿ ಬಸ್ ಮಾಲಕರ ಸಂಘ

ಉಡುಪಿ : ರಾಜ್ಯದಾದ್ಯಂತ ಕಾಂಗ್ರೆಸ್ ನ ಭರವಸೆ ನೀಡಿದ ಗ್ಯಾರಂಟಿ ಗಳು ಒಂದೊಂದೆ ಜಾರಿ ಆಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ನಿನ್ನೆಯಷ್ಟೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ರಾಜ್ಯದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದರು. ಆದರೆ ರಾಜ್ಯದಲ್ಲಿ ಸರಕಾರಿ ಬಸ್ ಮಾತ್ರ ಅಲ್ಲ, ಖಾಸಗಿ ಬಸ್ ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ಮಾಡುತ್ತಿವೆ. ಇಲ್ಲಿ ಮಹಿಳೆಯರಿಗೆ ಸಮಸ್ಯೆ ಅಗುವ ಸಾದ್ಯತೆ ಇದೆ. ರಾಜ್ಯದಾದ್ಯಂತ 17