Home Blog Left Sidebar

ಭಾರತದ ಮೀನು ಮಾಂಸ ಪ್ರಸಾದದ ಆಲಯಗಳು

ಇತ್ತೀಚೆಗೆ ದೇಶದ ನಿಜ ಪರಂಪರೆ ಮತ್ತು ಭಾರತೀಯರ ದಿಟ ಸಂಸ್ಕøತಿಯ ಬಗೆಗೆ ಅರಿವಿಲ್ಲದವರು ಮೀನು ಮಾಂಸದ ಬಗೆಗೆ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯವರೇ ಮಾಂಸ ತಿಂದು ಹಬ್ಬ ಮಾಡಿದರು; ಮೀನು ತಿಂದು ಉತ್ಸವ ನೋಡಿದರು ಎಂದಿತ್ಯಾದಿಯಾಗಿ ಟೀಕಿಸಿದ್ದಾರೆ. ಇಡೀ ಮಾನವ ಕುಲವೇ ಆದಿ ಯುಗದಲ್ಲಿ ಎರಡೇ ಕೆಲಸ ಮಾಡುತ್ತಿದ್ದುದು. ಒಂದು

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗ್ಯಾರಂಟಿ ಯೋಜನೆ ವಿಸ್ತರಣೆ : ಪದ್ಮಪ್ರಸಾದ್ ಜೈನ್

ಮೂಡುಬಿದಿರೆ: 2004 ರ ಲೋಕಸಭಾ ಚುನಾವಣೆಯಲ್ಲಿ ಯಾವ ಫಲಿತಾಂಶ ಕಾಂಗ್ರೆಸ್ ಗೆ ಸಿಕ್ಕಿತ್ತೋ ಅದೇ ರೀತಿಯ ಫಲಿತಾಂಶ ಈಬಾರಿ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ ಗೆ ಸಿಗಲಿದ್ದು ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅನುಷ್ಠಾನ ಮಾಡಿರುವ ಎಲ್ಲ ಗ್ಯಾರಂಟಿಗಳನ್ನು ದೇಶದಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ತರಲಾಗುವುದೆಂದು ಕೆಪಿಸಿಸಿ ರಾಜ್ಯ ವಕ್ತಾರ ಪದ್ಮಪ್ರಸಾದ್ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಂಗಳವಾರ

ವಿಟ್ಲ: ಬಾವಿಗೆ ರಿಂಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತ್ಯು

ವಿಟ್ಲ: ಬಾವಿಗೆ ರಿಂಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್‌ ನಿವಾಸಿ ಆಲಿ(24) ಎಂದು ಗುರುತಿಸಲಾಗಿದೆ. ಸುಮಾರು30 ಫೀಟ್‌ ಆಳದ ಬಾವಿಗೆ ರಿಂಗ್‌ ಹಾಕಿ ನಂತರ ಕ್ಲೀನಿಂಗ್‌ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಬಾವಿಗೆ ಇಳಿದವನು

ಬೈಂದೂರು : ನಾರಿ ಶಕ್ತಿ ಮಹಿಳಾ ಸಮಾವೇಶ

ಬೈಂದೂರು ವಿಧಾನ ಸಭಾ ಕ್ಷೇತ್ರದ ಕಿರಿ ಮಂಜೇಶ್ವರದಲ್ಲಿ ನಾರಿ ಶಕ್ತಿ ಮಹಿಳಾ ಸಮಾವೇಶ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಮಾತನಾಡಿ, ಮಹಿಳೆಯರ ಕಲ್ಯಾಣಕ್ಕಾಗಿ ಮೋದಿ ಸರಕಾರ ಶೇಕಡಾ 33% ಮೀಸಲಾತಿಯನ್ನು ನೀಡಿದೆ. ಯಡಿಯೂರಪ್ಪ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಶೇಕಡಾ 50% ಮೀಸಲಾತಿ ನೀಡುವುದರ ಮೂಲಕ ಮಹಿಳೆಯರ ಪರ

ಪುತ್ತೂರು: ದಿ. ಬೆಳ್ಯಪ್ಪ ಗೌಡ ಪೆರ್ಲಂಪಾಡಿ ಅವರಿಗೆ ನುಡಿನಮನ

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಬೆಳ್ಯಪ್ಪ ಗೌಡ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಪೆರ್ಲಂಪಾಡಿಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಬೆಳ್ಯಪ್ಪ ಗೌಡರು ಕಳೆದ 50 ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದು, ಹಸಿವಿನಿಂದ ಬಂದವರಿಗೆ ಅನ್ನದಾತರಾಗಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎಪ್ರಿಲ್ 7ರಂದು ನಿಧನರಾಗಿದ್ದರು.

ಉಳ್ಳಾಲ: ಮಲಗಿದ್ದಲ್ಲೇ ಹೃದಯಾಘಾತ : 28ರ ವಿವಾಹಿತ ಸಾವು

ಉಳ್ಳಾಲ: ಕೊಲ್ಯ ಕನೀರುತೋಟ ನಿವಾಸಿ 28 ರ ಹರೆಯದ ವಿವಾಹಿತರೊಬ್ಬರು ಮಲಗಿದ್ದಲ್ಲೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಇಂದು ಸಂಭವಿಸಿದೆ.ಕನೀರುತೋಟ ನಿವಾಸಿ ಜಿತೇಶ್ (28) ಸಾವನ್ನಪ್ಪಿದವರು ಜಿತೇಶ್ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಬೆಳಿಗ್ಗೆ ಏಳದ ಸಂದರ್ಭ, ಮನೆಮಂದಿ ವಿಚಾರಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ

ಮುಜುಗರ ತರುವ ಬೆಡ್ ವೆಟ್ಟಿಂಗ್ ಸಮಸ್ಯೆ

ನಿದ್ರಿಸುವ ವೇಳೆ ಮಕ್ಕಳು ತಮಗರಿವಿಲ್ಲದೆ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ಬೆಡ್ ವೆಟ್ಟಿಂಗ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ 5ರಿಂದ6 ವರ್ಷದವರೆಗೆ ಮೂತ್ರ ಚೀಲದ ಮೇಲಿನ ನಿಯಂತ್ರಣವಿರುವುದಿಲ್ಲ. ಈ ಕಾರಣಕ್ಕಾಗಿ ಹೆಚ್ಚಾಗಿ 5ರಿಂದ 6 ವರ್ಷದವರೆಗೆ ಡೈಪರ್ ಹಾಕಿ ಮಕ್ಕಳನ್ನು ಮಲಗಿಸುತ್ತಾರೆ. ಆ ಬಳಿಕವೂ ಈ ಸಮಸ್ಯೆ ಕಂಡು ಬಂದಲ್ಲಿ ಯಾಕಾಗಿ ಈ ನಿಯಂತ್ರಣ ಬಂದಿಲ್ಲ ಎಂಬುದನ್ನು ಹೆತ್ತವರ ಮತ್ತು ವೈದ್ಯರು ಕೂಲಂಕುಷವಾಗಿ

ಗುಕೇಶ್ ದೊಮ್ಮರಾಜು ಲೋಕ ದಾಖಲೆ ಬಾಲಕ

ಗುಕೇಶ್ ಎಂಬ ಹದಿನೇಳರ ಭಾರತದ ಬಾಲಕನು ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಆಗಿ ಇತಿಹಾಸ ಬರೆದಿದ್ದಾನೆ. 17 ಸುತ್ತಿನ ಹೋರಾಟದಲ್ಲಿ ಗುಕೇಶ್ ದೊಮ್ಮರಾಜು ಅತಿ ಚಿಕ್ಕ ಎಂದರೆ 17 ವರುಷ ಹತ್ತು ತಿಂಗಳಲ್ಲಿ ಫಿಡೆ 2024ರ ಕ್ಯಾಂಡಿಡೇಟ್ಸ್ ವಿಜಯಿಯಾಗಿದ್ದಾನೆ. ಆ ಮೂಲಕ ಗುಕೇಶ್‍ಗೆ ಚೆಸ್ ವಿಶ್ವ ಚಾಂಪಿಯನ್ ಜೊತೆ ಸ್ಪರ್ಧಿಸಿ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಲು ಬಾಗಿಲು ತೆರೆದಂತಾಗಿದೆ. ರಶಿಯಾದ ಗ್ಯಾರಿ ಕಾಸ್ಪರೋವ್ 20 ವರುಷ 11 ತಿಂಗಳಲ್ಲಿ, ನಾರ್ವೆಯ ಮ್ಯಾಗ್ನಸ್

ಕಡಿಮೆ ರಕ್ತದ ಒತ್ತಡ ಕಾರಣಗಳೇನು ?

ಕಡಿಮೆ ರಕ್ತದ ಒತ್ತಡ ಕಾರಣಗಳೇನು ?( Low Blood Pressure… Reasons and Simple Solutions) ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು ಪುರುಷರಲ್ಲಿ ರಕ್ತದ ಒತ್ತಡವು 120/80 ಮಿಲಿ ಮೀಟರ್‍ನಷ್ಟು (ಪಾದರಸ ಕಂಬದ

ಗರ್ಭಿಣಿಯರು ಮತ್ತು ದಂತ ಆರೋಗ್ಯ

ಗರ್ಭಾವಸ್ಥೆ ಜಗತ್ತಿನ ಎಲ್ಲಾ ಮಹಿಳೆಯರು ಬಯಸುವಂತಾ ಒಂದು ಭಾಗ್ಯ ಮತ್ತು ದೇವರು ಮನುಸಂಕುಲಕ್ಕೆ ನೀಡಿದ ಒಂದು ವರದಾನ. ಸಾಮಾನ್ಯವಾಗಿ ಗರ್ಭಧರಿಸಿದ ಬಳಿಕ ಗರ್ಭಿಣಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಾರ್ಮೋನು ವ್ಯತ್ಯಾಸ ಹಾಗೂ ವೈಪರೀತ್ಯ. ಹೆಚ್ಚಿನ ಮಹಿಳೆಯರು ಗರ್ಭಿಣಿಯರಾದಾಗ ರಸದೂತ ಏರಿಳಿತದ ಸ್ರವಿಕೆಯ ಕಾರಣದಿಂದಲೇ ರಕ್ತದೊತ್ತಡ, ಕಾಲಿನ ವಾತ, ಕಾಲಿನಲ್ಲಿ ನೀರು ತುಂಬಿಕೊಳ್ಳುವುದು,