Home Blog Left SidebarPage 191

ಉಡುಪಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ

ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಸಿಎಂ, ‘ಈ ಯೋಜನೆಯಿಂದ ನಿಮಗೆ ಹಣ ಸಿಗುವುದಿಲ್ಲ, ಬದಲಾಗಿ ನಿಮ್ಮ ಅಮ್ಮನಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ

ಬೈಂದೂರು : ದೋಣಿ ಅವಘಡದಲ್ಲಿ ನಾಪತ್ತೆಯಾದ ಯುವಕ : ಡ್ರೋನ್ ಮೂಲಕ ಶೋಧ ಕಾರ್ಯ

ಬೈಂದೂರು ವ್ಯಾಪ್ತಿಯ ಉಪ್ಪುಂದ ಸಮೀಪ ಸಾಂಪ್ರದಾಯಿಕ ಪಟ್ಟಿ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ನಾಪತ್ತೆಯಾಗಿರುವ ಮೀನುಗಾರನ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ. ನೀರು ಪಾಲಾಗಿದ್ದ ಇಬ್ಬರಲ್ಲಿ ಒಬ್ಬನ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಸತೀಶ್ ಕಾರ್ವಿ ಮೀನುಗಾರನ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಮಲ್ಪೆ ಅವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿ.ಐ

ಕ್ರಿಮಿನಲ್‍ಗಳಿಗೆ ಬಿಜೆಪಿ ಸಪೋರ್ಟ್ ಮಾಡುತ್ತಿದೆ : ಸಚಿವ ದಿನೇಶ್ ಗುಂಡೂರಾವ್

ಜಿಲ್ಲೆಗೆ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ತರಲು ಕೋಮುವಾದಿ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡೋದಿಲ್ಲ, ಇದನ್ನು ಅನೈತಿಕ ಪೊಲೀಸ್ ಗಿರಿ ಅಂತಾ ಕರೆಯಬೇಕಾಗುತ್ತದೆ ಎಂದು

ಪಡುಬಿದ್ರಿ – ಕಡಲು ಕೊರೆತ ಶಾಶ್ವತ ಪರಿಹಾರಕ್ಕೆ ಚಿಂತನೆ : ಸಿಎಂ ಭರವಸೆ

ಕರಾವಳಿ ಭಾಗದಲ್ಲಿ ಸುಮಾರು 98 ಕೀ.ಮೀ. ಕಡಲು ಇದ್ದು, ಮಳೆಗಾಲದಲ್ಲಿ ತೆರೆಗಳ ಅಬ್ಬರಕ್ಕೆ ಕೊರೆತ ಆಗುವುದು ಸರ್ವೇ ಸಾಮಾನ್ಯ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಡಿ ಇಡುವುದಾಗಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಪಡುಬಿದ್ರಿ ಮುಖ್ಯ ಬೀಚ್ ನಲ್ಲಿ ಕಡಲು ಕೊರೆತ ವೀಕ್ಷಿಸಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಖ್ಯ ಮಂತ್ರಿಗಳ

ಗದ್ದೆಗಿಳಿದು ನಾಟಿ ಮಾಡಿದ ಮಾಜಿ ಶಾಸಕ ರಘುಪತಿ ಭಟ್

ಉಡುಪಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ .ರಘುಪತಿ ಭಟ್ ರವರ ಪರಿಕಲ್ಪನೆಯ ಹಡಿಲು ಭೂಮಿಯ ಕೃಷಿಯ ಯೋಜನೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೈಜೋಡಿಸಿದೆ. ಆರೂರು ರಂಜೆಬೈಲ್‍ನ ಕುಮಾರ ಶೆಟ್ಟಿಯವರ ಗದ್ದೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣರು ನಾಟಿಗೆ ಅಗೆಯನ್ನು ನೀಡುವ ಮೂಲಕ ಚಾಲನೆ ನೀಡಿದರು. ಹಡಿಲು ಭೂಮಿಯ ಕೃಷಿಯ ಕನಸುಗಾರ ಉಡುಪಿ ಮಾಜಿ ಶಾಸಕ ಕೆ ರಘುಪತಿ ಭಟ್ ಸ್ವತಹ: ಗದ್ದೆಗಿಳಿದು ನಾಟಿ ಮಾಡುವುದನ್ನು ಕಂಡ ಬ್ರಹ್ಮಾವರ ತಾಲೂಕಿನ

ಉಪ್ಪುಂದ ಮಡಿಕಲ್‍ನಲ್ಲಿ ದೋಣಿ ದುರಂತ : ಅವಘಡದಲ್ಲಿ ಓರ್ವ ಮೃತ್ಯು, ಇನ್ನೋರ್ವರಿಗಾಗಿ ಹುಡುಕಾಟ

ಬೈಂದೂರು ತಾಲ್ಲೂಕಿನ ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಎಂಬಲ್ಲಿ ಸಂಜೆ ದೋಣಿ ದುರಂತ ಸಂಭವಿಸಿದ್ದು, ಒಬ್ಬರು ಮೃತಪಟ್ಟು ಒಬ್ಬರು ನಾಪತ್ರೆಯಾಗಿದ್ದಾರೆ. ನಾಗೇಶ್ (30)ಮೃತಪಟ್ಟಿದ್ದು, ಸತೀಶ್ ಖಾರ್ವಿ(34) ನಾಪತ್ತೆಯಾಗಿರುವ ಮೀನುಗಾರ. ಸಚಿನ್ ಖಾರ್ವಿ ಮಾಲೀಕತ್ವದ ಮಾಸ್ತಿ ಮರ್ಲು ಚಿಕ್ಕು ಪ್ರಸಾದ ಹೆಸರಿನ ನಾಡದೋಣಿಯಲ್ಲಿ ಬೆಳಿಗ್ಗೆ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಮೀನುಗಾರಿಕೆ ಮುಗಿಸಿಕೊಂಡು ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಬಳಿ

ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ನಿರ್ದಾಕ್ಷಿಣ್ಯ ಕ್ರಮ : ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಮಳೆ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಿ ಸಭೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣದ ಬಗ್ಗೆ ಮಾತನಾಡಿದ ಅವರು ಕೇಸ್ ಸಂಬಂಧ ಮಾಹಿತಿ ಪಡೆಯುತ್ತೇನೆ. ಈಗಾಗಲೇ ಎಫ್‍ಐಆರ್ ಆಗಿದೆ, ಡಿಸಿಪಿ

ನರಿಂಗಾನ ಗ್ರಾ.ಪಂ.ನ ದ್ವಿತೀಯ ಹಂತದ ಗ್ರಾಮಸಭೆ

ನರಿಂಗಾನ ಗ್ರಾಮದಲ್ಲಿ ರೈತರು ಹಿಂದಿನಿಂದಲೂ ಹೈನುಗಾರಿಕೆ ಬಗ್ಗೆ ಒಲವು ಹೊಂದಿದ್ದು ಅತಿ ಹೆಚ್ಚು ದನಗಳನ್ನು ಸಾಕುತ್ತಿದ್ದಾರೆ. ಆದರೆ ಗೋವುಗಳಿಗೆ ಆರೋಗ್ಯದಲ್ಲಿ ಏರುಪೇರಾದಾಗ ಸ್ವತಃ ದನದ ಮಾಲೀಕರೇ ಪಶು ವೈದ್ಯರ ಬಳಿಗೆ ಹೋದರೂ ಚಿಕಿತ್ಸೆಗೆ ಬರುತ್ತಿಲ್ಲ. ವೈದ್ಯರು ಈ ರೀತಿ ವರ್ತಿಸಿದರೆ ಹೈನುಗಾರಿಕೆ ಹೇಗೆ ಅಭಿವೃದ್ಧಿ ಸಾಧ್ಯ ಎಂದು ನರಿಂಗಾನ ಗ್ರಾಮಸ್ಥರೊಬ್ಬರು ನರಿಂಗಾನಗ್ರಾಮ ಪಂಚಾಯ್ ಸಭಾಭವನದಲ್ಲಿ ನಡೆದ ದ್ವಿತೀಹ ಹಂತದ ಗ್ರಾಮಸಭೆಯಲ್ಲಿ ವೈದ್ಯರನ್ನು

ತಲಪಾಡಿ, ಅಪ್ರಾಪ್ತೆಗೆ ಕಿರುಕುಳ : ಪೋಕ್ಸೊ ಕಾಯಿದೆಯಡಿ ಆರೋಪಿ ಬಂಧನ

ಉಳ್ಳಾಲ: ಅಪ್ರಾಪ್ತೆ ಮೇಲೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟ್ಯಾಂಡ್ ಬಳಿ ಇಂದು ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಹಿತ ಇತರೆ ಎರಡು ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇಂದು ಸಂಜೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಶಾಲೆಯಿಂದ

ಪಡುಬಿದ್ರಿ ಬೀಚ್‌ಗೆ ಆಗಮಿಸಲಿರುವ ಸಿಎಂ : ಪೊಲೀಸ್ ಕಟ್ಟೆಚರ, ತಾತ್ಕಾಲಿಕ ರಸ್ತೆ ದುರಸ್ಥಿ ಕಾರ್ಯ

ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಡುಬಿದ್ರಿ ಕಡಲು ಕೊರೆತ ವೀಕ್ಷಣೆಗಾಗಿ ಇಲ್ಲಿನ ಮುಖ್ಯ ಬೀಚ್ ಗೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸ್ ಕಟ್ಟೆಚರ ವಹಿಸಲಾಗಿದೆ. ಪಡುಬಿದ್ರಿಯ ಪ್ರಸಿದ್ಧ ಬ್ಲೂ ಫ್ಲ್ಯಾಗ್ ಬೀಚ್ ಗೆ ಕಡಲು ಕೊರೆತದಿಂದ ಆದ ಹಾನಿಯ ಬಗ್ಗೆ ವೀಕ್ಷಣೆ ಮಾಡಬೇಕಾಗಿದ್ದರೂ ಅಂತಿಮ ಕ್ಷಣದಲ್ಲಿ ಬದಲಾಗಿ ಬಾರೀ ಹಾನಿಯಾದ ಮುಖ್ಯ ಬೀಚ್‌ನ್ನು ಮುಖ್ಯ ಮಂತ್ರಿಗಳು ವೀಕ್ಷಣೆ ನಡೆಸಲಿದ್ದಾರೆ.ಮುಖ್ಯ ಮಂತ್ರಿಗಳು ಬರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಬೀಚ್