Home Blog Left SidebarPage 193

ರೈಲಿನಡಿಗೆ ಬೀಳುತ್ತಿದ್ದ ವ್ಯಕ್ತಿಯ ರಕ್ಷಣೆ : ಸಮಯಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿ

ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತಲು ಪ್ರಯತ್ನಿಸಿ ರೈಲಿನಡಿಗೆ ಬೀಳುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿ ಸಮಯಪ್ರಜ್ಞೆ ಮೆರೆದ ಘಟನೆ ನಡೆದಿದೆ. ಸೆಂಟ್ರಲ್ ರೈಲು ನಿಲ್ದಾಣದಿಂದ ಗುರುವಾರ ಸಂಜೆ 6.15ರ ವೇಳೆ ಮಲಬಾರ್ ಎಕ್ಸ್‍ಪ್ರೆಸ್ ರೈಲು ಹೊರಡುತ್ತಿದ್ದಾಗ ಶಂಕರ್ ಬಾಬು(70) ಎಂಬ ವ್ಯಕ್ತಿ ರೈಲಿನ

ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲ : ಮಾಜಿ ಸಚಿವ ವಿನಯಕುಮಾರ್ ಸೊರಕೆ

ಉಡುಪಿಯಲ್ಲಿ ಶೌಚಾಲಯ ವಿಡಿಯೋ ನಡೆದಿದೆ ಎಂಬ ಪ್ರಕರಣಕ್ಕೆ ಉತ್ತರ ನೀಡ ಬೇಕಾದವರು ಕಾಲೇಜು ಆಡಳಿತ. ಆದರೆ ಆ ಘಟನೆಯನ್ನು ಹಿಜಾಬಿಗೆ ಹೋಲಿಕೆ ಮಾಡಿಕೊಂಡು ಉಡುಪಿ ಶಾಸಕರೇ ಸೇರಿ ಡೊಂಬರಾಟ ನಡೆಸುತ್ತಿದ್ದಾರೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವ್ಯಂಗವಾಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಆಡಳಿತದಲ್ಲಿರುವ ಸಂದರ್ಭದಲ್ಲೇ ಅವರೇ ಕರೆತಂದ ಜಿಲ್ಲಾ ಎಸ್ಪಿಯವರ ತನಿಖೆಯಲ್ಲೂ ಬಿಜೆಪಿಗರಿಗೆ ವಿಶ್ವಾಸವಿಲ್ಲದಂತಾಗಿದೆ. ಮಹಿಳಾ

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಣಿಪುರ ಹಿಂಸಾಚಾರ ಖಂಡಿಸಿ ಪ್ರತಿಭಟನೆ

ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಧೀರ್ ಕುಮಾರ್ ಅವರು, ಮೈಥೇಯಿ-ಕುಕಿ-ನಾಗಾ ಸಮುದಾಯದಲ್ಲಿ ಎಷ್ಟು ಸಂಖ್ಯೆ ಇದೆ ಗೊತ್ತಿಲ್ಲ. ಚುನಾವಣೆ ಉದ್ದೇಶದಿಂದ ಬಿಜೆಪಿ ಸರ್ಕಾರ ಮೈಥೇಯಿ ಪರವಾಗಿ ನಿಂತಿದೆ. ಬಿಜೆಪಿ ಮನುಷ್ಯ ವಿರೋಧಿ ನೀತಿ ಅನುಸರಿಸುತ್ತಿದೆ. ದೇಶದಲ್ಲಿ ದೌರ್ಜನ್ಯ ನಡೆಯುತ್ತಿರುವಾಗ ಮೋದಿ ವಿಶ್ವನಾಯಕನಾಗಲು ಸಾಧ್ಯವಿಲ್ಲ ಎಂದರು. ಇನ್ನು

ಮಣಿಪುರ ಕೃತ್ಯ ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ

ಮಹಿಳೆಯರನ್ನು ಮಾತೆಯರೆನ್ನುವ ಬಿಜೆಪಿ ಸರ್ಕಾರದ ಇನ್ನೊಂದು ಮುಖ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವುದರ ಮೂಲಕ ಮಣಿಪುರದಲ್ಲಿ ಬಹಿರಂಗಗೊಂಡಿದೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಅವರು ಬಿಜೆಪಿ ಆಡಳಿತ ನಡೆಸುತ್ತಿರುವ ಮಣಿಪುರ ರಾಜ್ಯದಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಕಾಪು ಪೇಟೆಯಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್

ಮಂಗಳೂರಿನಲ್ಲಿ ಮಣಿಪುರ ಹಿಂಸಾಚಾರ ಖಂಡಿಸಿ ಕಥೋಲಿಕ್ ಸಭಾದ ನೇತೃತ್ವದಲ್ಲಿ ಪ್ರತಿಭಟನೆ

ಮಣಿಪುರದ ಹಿಂಸಾಚಾರವನ್ನು ನಿಲ್ಲಿಸಿ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ನೀಡಲು ಕೇಂದ್ರ ಸರ್ಕಾರ ವಿಫಲವಾದರೆ ದೆಹಲಿ ಮತ್ತು ಮಣಿಪುರ ಚಲೋ ನಡೆಸಲಾಗುವುದು ಎಂದು ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೊ ಎಚ್ಚರಿಕೆ ನೀಡಿದರು. ಕಥೋಲಿಕ್ ಸಭಾದ ನೇತೃತ್ವದಲ್ಲಿ ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗ, ಕ್ರೈಸ್ತ ಐಕ್ಯತೆಯ ಆಯೋಗ, ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್‍ನ ಸಹಭಾಗಿತ್ವಲ್ಲಿ ನಗರದ ಪುರಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಅವರು

ಶಿಕ್ಷಣ ಇಲಾಖಾ ಕರಾಟೆ ಕ್ರೀಡಾ ಕೂಟದಲ್ಲಿ ಬಂಗಾರದ ಪದಕ ಗಳಿಸಿದ ಆದಿತ್ಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ , ಮಂಗಳೂರು ಉತ್ತರ ವಲಯ ದ ವತಿಯಿಂದ ತಾಲೂಕು ಮಟ್ಟದ ಪ್ರಾಥಮಿಕ / ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2023 -2024 ಮುಲ್ಕಿಯ ಸಿ . ಯಸ್ . ಐ . ಇ ಶಾಲೆ ಕಾರ್ನಾಡು ಇಲ್ಲಿ ಆಯೋಜಿಸಲಾಗಿದ್ದು . ಇಲಾಖೆಯ ಕರಾಟೆ ಕ್ರೀಡೆಯಲ್ಲಿ ( 62-65 ) ವಿಭಾಗದಲ್ಲಿ ನಗರ ಕೆನರಾ ಉರ್ವಾ ಶಾಲೆಯ 10 ನೇ […]

ಖಾಸಗಿ ವಿಚಾರ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಶಿಕ್ಷೆ ಆಗಬೇಕು : ಶೋಭಾ ಕರಂದ್ಲಾಜೆ

ಉಡುಪಿಯ ಕಾಲೇಜೊಂದರ ಶೌಚಾಲಯಲ್ಲಿ ನಡೆದ ಶೂಟಿಂಗ್ ಘಟನೆ ದೇಶದ ಗಮನ ಸೆಳೆದಿದೆ. ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿದೆ. ಖಾಸಗಿ ವಿಚಾರ ಹೊರಗಡೆ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಪ್ರತಿನಿಧಿಗಳು ,ಡಿಸಿ, ಎಸ್‍ಪಿಗೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ. ಲಂಚ್ ಬ್ರೇಕ್

ಪಡುಬಿದ್ರಿ : ಗಾಳಿಗೆ ಟ್ರಾನ್ಸ್ ಫಾರ್ಮರ್ ಧರೆಗೆ

ರಾತ್ರಿ ಬೀಸಿದ ಬಾರೀ ಮಳೆಗಾಳಿಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರೆಗುರುಳಿ ಮೆಸ್ಕಾಂಗೆ ಸುಮಾರು ಐದು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಎರ್ಮಾಳು ಪೊಂದಾಡು ಆಲಡೆ ಬೆಟ್ಟು ಎಂಬಲ್ಲಿ ರಾತ್ರಿ ಹೊತ್ತು ಈ ಘಟನೆ ನಡೆದಿದ್ದು, ಹಗಲು ಹೊತ್ತು ನಡೆದಿದ್ದರೆ ಬಾರೀ ಅನಾಹುತ ನಡೆಯುವ ಸಾಧ್ಯತೆ ಇತ್ತು ಎನ್ನುತ್ತಾರೆ ಸ್ಥಳೀಯರು, ವಿದ್ಯುತ್ ಇಲ್ಲದೆ ಗ್ರಾಮದ ಜನರು ಭಾರೀ ಸಮಸ್ಯೆ ಅನುಭವಿಸಿದ್ದು, ತುರ್ತಾಗಿ ಪಡುಬಿದ್ರಿ ಮೆಸ್ಕಾಂ

ಅವ್ಯವಸ್ಥೆಯ ಆಗರವಾದ ಮೂಡುಬಿದರೆ ಕರಿಂಜೆಯ ಘನತ್ಯಾಜ್ಯ ವಿಲೇವಾರಿ ಘಟಕ

ಎಲ್ಲೆಲ್ಲೂ ಪ್ಲಾಸ್ಟಿಕ್, ಕೊಳೆತ ತ್ಯಾಜ್ಯಗಳ ರಾಶಿ, ವಿಲೇವಾರಿ ಆಗದೆ ಉಳಿದಿರುವ ಗೊಬ್ಬರದ ರಾಶಿ, ಸಿಯಾಳದ ಚಿಪ್ಪುಗಳ ರಾಶಿ, ಕೊಳೆತ ಪದಾರ್ಥಗಳಿಂದ ಹರಿಯುತ್ತಿರುವ ನೀರು, ಅದರ ಮೇಲಿನಿಂದ ಗುಂಯ್ ಎಂದು ಹಾರುತ್ತಾ ಡೆಂಗ್ಯೂ, ಮಲೇರಿಯಾ ರೋಗಕ್ಕೆ ಆಹ್ವಾನ ನೀಡುತ್ತಿರುವ ಸೊಳ್ಳೆಗಳು. ಇಂತಹ ಸನ್ನಿವೇಶ ಕಂಡು ಬಂದದ್ದು ಮೂಡುಬಿದಿರೆ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ. ಪರಿಸರದ ಜನರ ವಿರೋಧದ ಮಧ್ಯೆ 2013 ರಲ್ಲಿ ದಿ. ರತ್ನಾಕರ ದೇವಾಡಿಗ ಅವರು ಪುರಸಭಾ

ಉಳ್ಳಾಲ: ಪೋಕ್ಸೊ ಕಾಯಿದೆಯಡಿ ದಾಖಲಾದ ಪ್ರಕರಣದ ಆರೋಪಿ ಪರಾರಿ

ಉಳ್ಳಾಲ: ಅಪ್ರಾಪ್ತ ವಿದ್ಯಾರ್ಥಿನಿ ವಿರುದ್ಧ ಕಿರುಕುಳ ನೀಡಿದ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.ಅಂಬ್ಲಮೊಗರು ನಿವಾಸಿ ಇಕ್ಬಾಲ್ ಎಂಬಾತ ನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಸ್ಸಿಗಾಗಿ ಕಾಯುವ ಸಂದರ್ಭ ಮಾತನಾಡಿಸಲು ಯತ್ನಿಸಿದ್ದ ರಿಕ್ಷಾ ಚಾಲಕ ವಿದ್ಯಾರ್ಥಿನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದನು. ಜೂನ್ ತಿಂಗಳಲ್ಲಿ ನಡೆದ ಘಟನೆ ಕುರಿತು ಅಪ್ರಾಪ್ತೆ ಹೆತ್ತವರಲ್ಲಿ