Home ಕರಾವಳಿ Archive by category ಉಡುಪಿ (Page 20)

ಕಾಪು ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ: ನಗ ನಗದು ದೋಚಿ ಪರಾರಿ

ಕಾಪು ಠಾಣಾ ವ್ಯಾಪ್ತಿಯ ಮೂಳೂರು ಮುಖ್ಯ ರಸ್ತೆಯ ಬಳಿಯ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ನಗನಗದು ಕಳವು ಗೈದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೂಳೂರು ಈಸ್ಟ್ ವೆಸ್ಟ್ ನರ್ಸರಿ ಸಮೀಪದ ಮಹಮ್ಮದ್ ರಫೀಕ್, ಮಧುರ ಕಾಂಪೌಂಡ್ ನಿವಾಸಿ ಇಬ್ರಾಹಿಂ ಹಾಗೂ ಶಹನಾಜ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಅಪಾರ ನಗ ಹಾಗೂ ನಗದು ಕಳವು ಗೈದಿರುವ ಬಗ್ಗೆ ಮಾಹಿತಿ

ಪಡುಬಿದ್ರಿಯ ಕಡಲತೀರದಲ್ಲಿ ತೆರವಾಗದ ಟಗ್: ಸ್ಥಳೀಯ ನಿವಾಸಿಗಳಿಗೆ ತೊಂದರೆ

ಕಳೆದ ಚಂಡಮಾರುತದ ಸಂದರ್ಭ ಪಡುಬಿದ್ರಿಯ ಕಡಲತೀರ ಸೇರಿದ ಟಗ್ ತೆರವುಗೊಳಿಸುವಂತೆ ಒತ್ತಾಯಿಸಿದ ಮೀನುಗಾರ ಮುಖಂಡರು ತೆರವುಗೊಳಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದರು. ಆದರೆ ಇದುವರೆಗೆ ಟಗ್ ತೆರವು ಕಾರ್ಯಕ್ಕೆ ಮುಂದಾಗಿಲ್ಲ. ಮಂಗಳೂರು ಮೂಲದ ಬಿಲಾಲ್ ಸಂಸ್ಥೆ ಪಲ್ಟಿಯಾಗಿದ್ದ ಟಗ್ ತೆರವುಗೊಳಿಸುವ ಗುತ್ತಿಗೆ ಪಡೆದಿದ್ದರೂ, ಬಹಳಷ್ಟು ದಿನಗಳ ಪ್ರಯತ್ನದ ಬಳಿಕ ವಿಫಲಗೊಂಡು ಮತ್ತೊಂದು ಸಂಸ್ಥೆಯ ಸಹಾಯ ಯಾಚಿಸಿ ಉಡುಪಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ

ಕಾಪುವಿನಲ್ಲಿ ಹಿರಿಯ ನಾಯಕ ಆಸ್ಕರ್ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ

  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಚೇತರಿಕೆಗಾಗಿ ಹಾರೈಸಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಪೊಲಿಪು ಜಾಮಿಯಾ ಮಸೀದಿ, ಉದ್ಯಾವರ ಚರ್ಚ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ, ಉದ್ಯಾವರ ಮಹಾಗಣಪತಿ ದೇವಸ್ಥಾನ ಸಹಿತವಾಗಿ ವಿವಿಧ

ಕಾಪು : ಗಾಯಗೊಂಡ ರಾಷ್ಟ್ರ ಪಕ್ಷಿಯನ್ನು ರಕ್ಷಿಸಿದ ಯುವಕರು

ಕಾಲಿಗೆ ಗಾಯಗೊಂಡು ತೀವ್ರ ಅಸ್ವಸ್ಥಗೊಂಡ ಗಂಡು ನವಿಲೊಂದನ್ನು ಕಾಪುವಿನ ಯುವಕರು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಅರಣ್ಯಾಧಿಕಾರಿಯವರಿಗೆ ಒಪ್ಪಿಸಿದ ಘಟನೆ ನಡೆದಿದೆ. ಮೂಳೂರು ಬಳಿ ಕಾಲಿಗೆ ತೀವ್ರ ಗಾಯಗೊಂಡ ಸ್ಥಿತಿಯಲ್ಲಿದ್ದ ಗಂಡು ನವಿಲನ್ನು ಕಾಪುವಿನ ಪ್ರಶಾಂತ್ ಪೂಜಾರಿ ಹಾಗೂ ಶಿವಾನಂದ ಪೂಜಾರಿ ಅವರು ಗುರುವಾರ ರಾತ್ರಿ ತಮ್ಮ ಮನೆಗೆ ತಂದು ಆರೈಕೆ ಮಾಡಿದ್ದರು. ಆರೈಕೆಯೊಂದಿಗೆ ಚೇತರಿಕೆಗೊಂಡ ನವಿಲನ್ನು ಅರಣ್ಯ ಅಧಿಕಾರಿ ಮಂಜುನಾಥ್ ಅವರಿಗೆ

ಉಡುಪಿಯ ಪೆರ್ಣಂಕಿಲದಲ್ಲಿ ಬೋನಿಗೆ ಬಿದ್ದ ಚಿರತೆ

ಪೆರ್ಣಂಕಿಲದಲ್ಲಿ ಗ್ರಾಮಸ್ಥರನ್ನು ಬಹು ದಿನಗಳಿಂದ ಕಾಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗ್ರಾಮದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕಳೆದ ರಾತ್ರಿ ಪೆರ್ಣಂಕಿಲದ ಗುಂಡುಪಾದೆ ಎಂಬಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ. ಚಿರತೆಯನ್ನು ಸೆರೆ ಹಿಡಿಯಲು ಗುಂಡುಪಾದೆಯ ಅಶೋಕ್ ನಾಯಕ್ ಎಂಬವರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಕಳೆದ ರಾತ್ರಿ ಚಿರತೆ ಇದರೊಳಗೆ ಸೆರೆಯಾಗಿದೆ. ಇಂದು ಬೆಳಗ್ಗೆ

ಜೀವವನ್ನು ಪಣಕ್ಕಿಟ್ಟು ಪರೀಕ್ಷೆ ಬರೆದ ಎಸ್ಸೆಸ್ಸೆಲ್ಸಿ ಮಕ್ಕಳು

ಜಿಟಿ ಜಿಟಿ ಮಳೆ. ತುಂಬಿ ಹರಿಯುತ್ತಿರುವ ಸೌಪರ್ಣಿಕೆ. ಆ ಭಾಗದ ಮಕ್ಕಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕೆಂದರೆ ತುಂಬಿ ಹರಿಯುವ ನದಿಯನ್ನು ದೋಣಿ ಮೂಲಕ ದಾಟಿ ಜೀವವನ್ನು ಪಣಕ್ಕಿಟ್ಟು ಪರೀಕ್ಷೆಯನ್ನು ಬರೆಯಬೇಕು. ಆದರೆ ಮಕ್ಕಳ ಸುರಕ್ಷತೆಗಾಗಿ ಖುದ್ದು ಡಿಡಿಪಿಐ ಉಡುಪಿಯಿಂದ ಬಂದು ಪರೀಕ್ಷಾ ಕೇಂದ್ರಕ್ಕೆ ದೋಣಿಯ ಮೂಲಕ ಮಕ್ಕಳನ್ನು ಕರೆದೊಯ್ದ ಅಪರೂಪದ ಸ್ಟೋರಿಯನ್ನು ನಾವಿವತ್ತು ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ..   ಒಂದೆಡೆ ಜಿಟಿಜಿಟಿ ಮಳೆಯಲಿ ನೆನೆದು

ಯುಪಿಸಿಎಲ್ ಅವಾಂತರ, ಕೃಷಿ ಚಟುವಟಿಕೆಗಳು ನಾಶ:ಉಚ್ಚಿಲ ಬಡಾ ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ನಿರಂತರವಾಗಿ ಜನರಿಗೆ ತೊಂದರೆ ನೀಡುತ್ತಾ ಬಂದಿರುವ ಯುಪಿಸಿಎಲ್ ಕಂಪನಿಯ ಅವಾಂತರದಿಂದಾಗಿ ಕೃಷಿ ಚಟುವಟಿಕೆ ನಡೆಸಿದ ಗದ್ದೆಯಲ್ಲಿ ನೀರು ನಿಂತು ಕೃಷಿ ನಾಶವಾಗುತ್ತಿದ್ದು, ಈ ಬಗ್ಗೆ ಸ್ಥಳೀಯಾಢಳಿತ ಸಹಿತ ಯುಪಿಸಿಎಲ್ ಕಂಪನಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಆ ನಿಟ್ಟಿನಲ್ಲಿ ನಮ್ಮ ಬದುಕಿಗಾಗಿ ಪ್ರತಿಭಟಿಸುವುದು ಅನಿವಾರ್ಯ ಎಂಬುದಾಗಿ ಉಚ್ಚಿಲ ಬಡಾ ಗ್ರಾಮದ ಸಂತ್ರಸ್ಥ ರೈತರು ಎಚ್ಚರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಆಕ್ರೋಶ ವ್ಯಕ್ತ ಪಡಿಸಿದ

ವಿಶಾಲ ಗಾಣಿಗ ಕೊಲೆಗೆ ದುಬೈನಲ್ಲಿ ಸ್ಕೆಚ್:ಹಣದ ಪಾರ್ಸೆಲ್ ಕಳುಹಿಸಿ ಕೊಲೆ ಮಾಡಿಸಿದ ಪತಿ

ಉಡುಪಿ : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಒಂದೇ ವಾರದಲ್ಲಿ ಬೇಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿಯ ಜೊತೆಯಲ್ಲಿದ್ದಾಗಲೇ ಪತಿ ರಾಮಕೃಷ್ಣ ವಿಶಾಲ ಗಾಣಿಗ ಹತ್ಯೆಗೆ ಸುಫಾರಿ ಕೊಟ್ಟಿದ್ದ. ಅಲ್ಲದೇ ಮನೆಗೆ ಹಣದ ಪಾರ್ಸೆಲ್ ಕಳುಹಿಸಿ ಪತ್ನಿಯನ್ನು ಕೊಂದು ಮುಗಿಸಿದ್ದಾನೆ. ಉಡುಪಿ ಜಿಲ್ಲೆಯ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ಜುಲೈ 12ರಂದು ಕೊಲೆಯಾಗಿದ್ದ ವಿಶಾಲ ಗಾಣಿಗ ಕೊಲೆಯನ್ನು ಪತಿಯೇ

ಉಡುಪಿಯಲ್ಲಿ ಕೃಷಿಯತ್ತ ಮುಖಮಾಡಿದ ಯುವ ಜನಾಂಗ

ಯುವ ಜನಾಂಗ ಮತ್ತೆ ಕೃಷಿಯತ್ತ ಮುಖ ಮಾಡಿದೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ ಹಡಿಲು ಬಿದ್ದಿರುವ ಭೂಮಿಯನ್ನು ಮತ್ತೆ ಹಸನಾಗಿಸಲು ಇಲ್ಲೊಂದು ಯುವಕರ ಗುಂಪು ಮುಂದಾಗಿದೆ. ಹೀಗೆ..ಭತ್ತದ ಪೈರು ಹಿಡ್ಕೊಂಡು ಗದ್ದೆಗಿಳಿದ ಯುವಕರು, ಉಡುಪಿಯ ಮೂಡುಪೆರಂಪಳ್ಳಿ ಶೀಂಭ್ರಾ ಎಂಬಲ್ಲಿನ ಯುವಕರು.ತನ್ನೂರಲ್ಲಿ ಬೇಸಾಯನೇ ಮಾಡದೇ ಹಡಿಲು ಬಿದ್ದಿದ್ದ ಭೂಮಿಯನ್ನ ಕೃಷಿ ಮಾಡಲು ಮುಂದಾಗಿರುವ ವಿದ್ಯಾವಂತ ಯುವಕರು. ಮೂಡು ಪೆರಂಪಳ್ಳಿಯ ಹಲವು ಎಕ್ರೆ ಕೃಷಿ ಭೂಮಿ ಬೇಸಾಯನೇ ಮಾಡದೇ

ಎಲ್ಲೂರು ಪೆಜತಕಟ್ಟೆ ಬಳಿ ಕಾರು ಅಪಘಾತ, ಒರ್ವ ಮೃತ್ಯು

ಕಾರು ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಸಮೀಪದ ಪೆಜತಕಟ್ಟೆ ಎಂಬಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.  ಕಟಪಾಡಿ ಪಳ್ಳಿಗುಡ್ಡೆ ನಿವಾಸಿ ರವೀಂದ್ರ ಪೂಜಾರಿ(37) ಮೃತಪಟ್ಟವರಾಗಿದ್ದು,ಇವರು ಭಾನುವಾರ ರಾತ್ರಿ ಎಲ್ಲೂರಿನಲ್ಲಿರುವ ಸ್ನೇಹಿತ ಮನೆಗೆ ಹೋಗಿ ಹಿಂತಿರುಗಿ ಬರುತ್ತಿರುವ ವೇಳೆ ಮಣ್ಣಿನ ರಸ್ತೆಗಿಳಿದ ಕಾರು ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.ಘಟನೆ ತಡರಾತ್ರಿ