Home ಕರಾವಳಿ Archive by category ಉಡುಪಿ (Page 26)

ಉಡುಪಿ: ಹುಲಿ ಕುಣಿತ ಬೀಟ್‍ಗೆ ಹೆಜ್ಜೆ ಹಾಕಿದ ನಟ ರಕ್ಷಿತ್ ಶೆಟ್ಟಿ ಮತ್ತು ತಂಡ

ಉಡುಪಿಯ ಮಲ್ಪೆ ಸಮೀಪದ ಕೊಳ ಎಂಬಲ್ಲಿ ನಡೆದ ಹುಲಿ ವೇಷ ಸ್ಪರ್ಧೆಯಲ್ಲಿ ಸಪ್ತಸಾಗರದಾಚೆ ಎಲ್ಲೋ ಚಿತ್ರತಂಡದ ಕಲಾವಿದರು ಭಾಗವಹಿಸಿದ್ದರು. ನಟ ರಕ್ಷಿತ್ ಶೆಟ್ಟಿ ಮತ್ತು ತಂಡ ಭೇಟಿ ನೀಡಿ ಹುಲಿ ಕುಣಿತ ಬೀಟ್‍ಗೆ ಹೆಜ್ಜೆ ಹಾಕಿದರು. ರಕ್ಷಿತ್ ಶೆಟ್ಟಿಗೆ ಚಿತ್ರದ ಹೀರೋಯಿನ್ ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತ್ ಸಾಥ್ ನೀಡಿದರು.

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾದ ಸ್ಪೀಕರ್ ಯು.ಟಿ.ಖಾದರ್

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾದರು. ಮಠದೊಳಗೆ ಭೇಟಿ ನೀಡಿದ ಯು.ಟಿ.ಖಾದರ್ ಅವರನ್ನು ಸತ್ಯನಾರಾಯಣ ಭಟ್ ಮತ್ತು ಸಮಿತಿಯವರು ಶಾಲು ಹೊದಿಸಿ ಸ್ವಾಗತಿಸಿದರು. ಪ್ರಸಾದವನ್ನು ನೀಡಿ ಹರಸಿದರು. ಬುಧವಾರ ಬೆಳಿಗ್ಗೆ ಬೆಂಗಳೂರು ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಬಂದು ತನ್ನ ಕ್ಷೇತ್ರದಲ್ಲಿ ವಿವಿಧೆಡೆ ಕೃಷ್ಣಾಷ್ಟಮಿ, ಮೊಸರು ಕುಡಿಕೆ ಕಾರ್ಯಕ್ರಮದಲ್ಲಿದ್ದು ನಂತರ ಉಡುಪಿಯ ಕಡಿಯಾಲಿನಲ್ಲಿ ಪ್ರಸಾದ್

ಉಡುಪಿ : ಅಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವಕ್ಕೆ ಸಿದ್ಧವಾಗಿದೆ ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ಹುಲಿ ವೇಷ ತಂಡ

ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ಹುಲಿ ವೇಷ ತಂಡ ಸಿದ್ಧವಾಗಿದೆ. ಈ ಬಾರಿ ಅಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದಲ್ಲಿ ಹೆಣ್ಣು ಮಕ್ಕಳ ತಂಡದ ಹುಲಿವೇಷ ಕುಣಿತ ವಿಶೇಷ ಗಮನ ಸೆಳೆಯಲಿದೆ. ಈ ಮೂಲಕ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷ ಕುಣಿತವನ್ನು ಉಳಿಸಿ ಬೆಳೆಸುವಲ್ಲಿ ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ತಂಡ ಮುಂದಡಿಯಿಟ್ಟಿದೆ. ಈ ಕುರಿತು ದರ್ಪಣ ಸಂಸ್ಥೆಯ ನೃತ್ಯ ನಿರ್ದೇಶಕಿ ರಮ್ಯಾ ಅವರು ಮಾತನಾಡಿ ನಮ್ಮ ದರ್ಪಣ ಸಂಸ್ಥೆಯಲ್ಲಿ ಸುಮಾರು ಏಳು ವರ್ಷಗಳಿಂದ ಮಹಿಳೆಯರು ಹಾಗೂ

ಕಾರ್ಕಳ: ಒಳ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲಿನಿಂದ ಹರಿಯುತ್ತಿದ್ದ ಸಮಸ್ಯೆಗೆ ಪರಿಹಾರ

ವಿ4 ವರದಿಗೆ ಸ್ಪಂದಿಸಿದ ಕಾರ್ಕಳ ಪುರಸಭಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ನಾಗರಿಕರು ಕಾರ್ಕಳ ಗಾಂಧಿ ಮೈದಾನದ ಕ್ರೈಸ್ಟ್ ಕಿಂಗ್ ಚರ್ಚ್ ಮತ್ತು ಶಾಲೆಗಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಒಳ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲಿನಿಂದ ಹರಿದು ಎಲ್ಲರಿಗೂ ಸಮಸ್ಯೆಯಾಗುತ್ತಿದ್ದು ಇದೀಗ ಕಾರ್ಕಳ ಪುರಸಭೆಯವರು ಒಳ ಚರಂಡಿಯ ಕಾಮಗಾರಿಕೆಯನ್ನು ಪ್ರಾರಂಭಿಸಿ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ. ಒಳ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲಿನಿಂದ ಹರಿಯುತ್ತಿದ್ದರಿಂದ ಕಂಗೆಟ್ಟ

ಉಡುಪಿ: ಜಿಲ್ಲೆಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದ ಎಸ್.ಪಿ. ಅಕ್ಷಯ್ ಮಚ್ಚಿಂದ್ರ ವರ್ಗಾವಣೆ

ಜಿಲ್ಲೆಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದ ಉಡುಪಿ ಎಸ್.ಪಿ. ಅಕ್ಷಯ್ ಮಚ್ಚಿಂದ್ರರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ. ಅ ಸ್ಥಾನಕ್ಕೆ ಗುಲ್ಭರ್ಗ ಪೆÇಲೀಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ.ಅರುಣ್ ಕೆ ಅವರನ್ನು ನೇಮಕಗೊಳಿಸಲಾಗಿದೆ. ಸದ್ಯ ಅಕ್ಷಯ್ ಹಾಕೆಗೆ ಯಾವುದೇ ಹುದ್ದೆಯನ್ನು ಸೂಚಿಸಲಾಗಿಲ್ಲ. ಉಡುಪಿಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಕ್ಷಯ್ ಮಚ್ಚಿಂದ್ರಉಡುಪಿಯಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಪೀಟ್ ಕ್ಲಬ್‍ಗಳು, ಗಾಂಜಾ

ಶಿರೂರು ಮಠದ ವತಿಯಿಂದ ಸುಮಾರು 4 ಲಕ್ಷ ರೂ. ನೋಟಿನ ಮಾಲೆಯಿಂದ ಕಲಾತಂಡಗಳಿಗೆ ಗೌರವಾರ್ಪಣೆ

ಈ ಬಾರಿಯ ಕೃಷ್ಣಜನ್ಮಾಷ್ಟಮಿಯ ವಿಟ್ಲಪಿಂಡಿ ಮಹೋತ್ಸವದಂದು ಶಿರೂರು ಮಠದ ವತಿಯಿಂದ ಸುಮಾರು 4 ಲಕ್ಷ ರೂ. ನೋಟಿನ ಮಾಲೆಗಳನ್ನು ವಿವಿಧ ಕಲಾ ತಂಡಗಳಿಗೆ ನೀಡಿ ಗೌರವಿಸಲಾಗುವುದು ಎಂದು ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು ತಿಳಿಸಿದ್ದಾರೆ. ಉಡುಪಿಯ ರಥಬೀದಿಯಲ್ಲಿರುವ ಶಿರೂರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರು ಈ ಹಿಂದೆ ವಿಜೃಂಭಣೆಯಿಂದ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದರು. ಅವರಂತೆಯೇ

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಆರಾಧನಾ ಮಹೋತ್ಸವ

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಉಚ್ಚಿಲ ರಾಘವೇಂದ್ರ ಮಠ, ಕಳತ್ತೂರು ರಾಘವೇಂದ್ರ ಮಠ ಸೇರಿದಂತೆ ತಾಲೂಕಿನ ವಿವಿಧೆÉಡೆ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಅರ್ಚಕರಾದ ಜನಾರ್ದನ ತಂತ್ರಿಗಳ ಸಹಕಾರದಲ್ಲಿ ರಾಘವೇಂದ್ರ ಶ್ರೀಗಳ ಆರಾಧನಾ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಜರಗಿತು. ಆರಾಧನೋತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ,

ಉಡುಪಿ : ಡಿವೈನ್ ಸ್ಟಾರ್ ರಿಶಬ್ ಶೆಟ್ಟಿಗೆ ಕರಾವಳಿಯ ಪಾಣರ ಯಾನೆ ದೈವ ನಲಿಕೆ ಸಂಘಟನೆಯಿಂದ ಸೆ.3ರಂದು ಉಡುಪಿಯಲ್ಲಿ ಸನ್ಮಾನ

ಕಾಂತರ ಸಿನಿಮಾ ಮೂಲಕ ಕರಾವಳಿ ದೈವಾರಾಧನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿ ಡಿವೈನ್ ಸ್ಟಾರ್ ಪಟ್ಟ ಪಡೆದುಕೊಂಡ ರಿಶಬ್ ಶೆಟ್ಟಿ ಅವರಿಗೆ ಕರಾವಳಿಯ ಪಾಣರ ಯಾನೆ ದೈವ ನಲಿಕೆ ಸಂಘಟನೆ ವತಿಯಿಂದ ಸೆ.3ರಂದು ಭಾನುವಾರ ಉಡುಪಿಯಲ್ಲಿ ಸನ್ಮಾನ ನಡೆಯಲಿದೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪಾಣರ ಯಾನೆ ನಲಿಕೆ ಸಮಾಜ ಸೇವಾ ಸಂಘದ ವಾರ್ಷಿಕ ಸಮಾವೇಶ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಚಿತ್ರ ನಟ ರಿಶಬ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತಿದೆ. ಕಾರ್ಯಕ್ರಮವನ್ನು

ಪ್ರತಿಭಾನ್ವಿತಾ ವಿದ್ಯಾರ್ಥಿನಿ ಕ್ಯಾನ್ಸರ್ ಗೆ ಬಲಿ.ದುಖಃ ಸಾಗರದಲ್ಲಿ ಕುಟುಂಬಸ್ಥರು.

ಶಿರ್ವ:ಹೂವಾಗಿ ಅರಳುವ ಮುನ್ನವೇ ವಿಧಿ ಮುಗ್ದ ಹೆಣ್ಣು ಮಗುವಿನ‌ ಬದುಕನ್ನೇ ಕಸಿದು ಬಿಟ್ಟಿದೆ.ನಗು ನಗುತ್ತಾ ಎಲ್ಲರೊಂದಿಗೂ ಬೆರೆತು ಸ್ನೇಹ ಜೀವಿಯಾಗಿದ್ದ ಮುಗ್ದ ಯುವತಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.ಕ್ಯಾನ್ಸರ್ ಎಂಬ ಮಹಾಮಾರಿ ಅಕೆಯನ್ನ ಬಲಿ ಪಡೆದುಕೊಂಡಿದೆ. ಉಡುಪಿಯ ಶಿರ್ವ ಕಾನ್ವೆಂಟ್ ರಸ್ತೆಯ ಇಪ್ಪತ್ತೊಂದು ವರ್ಷದ ವಿದ್ಯಾರ್ಥಿನಿ ರಿಯಾನಾ ಜೆನ್ ಡಿಸೋಜಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾಳೆ. ರಿಯಾನಾ ಜೆನ್ ಡಿಸೋಜಾ ಬಿಕಾಂ‌ ಮುಗಿಸಿ ಮಣಿಪಾಲದಲ್ಲಿ ಎಕಾಂ‌

ಉಡುಪಿ: ಬಿಜೆಪಿಯವರಿಂದಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ-ಗಾಯಾಳು ಅಸ್ಪತ್ರೆಗೆ ದಾಖಲು

ಉಡುಪಿಯ ಜಿಲ್ಲೆಯ ಮುದ್ದೂರು ಎಂಬಲ್ಲಿ ಬಿಜೆಪಿಯವರಿಂದಲೇ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದ್ದು ಗಂಭೀರ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ನೆಂಚಾರು ನಿವಾಸಿ ಪ್ರಭಾಕರ ಪೂಜಾರಿ (51) ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು ಮೊದಲಿನಿಂದಲೂ ಬಿಜೆಪಿಯ ಕಾರ್ಯಕರ್ತರಾಗಿದ್ದ ಪ್ರ್ರಭಾಕರ ಪೂಜಾರಿ ಕಳೆದ ಬಾರಿ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ