Home ಕರಾವಳಿ Archive by category ಪುತ್ತೂರು

ತಡರಾತ್ರಿ ಮನೆಗೆ ಅಕ್ರಮ ಪ್ರವೇಶಿಸಿ ಹಲ್ಲೆ ಆರೋಪ ಕಡಬ ಠಾಣಾ ಹೆಡ್ ಕಾನ್‌ಸ್ಟೇಬಲ್ ರಾಜು ನಾಯ್ಕ ಬಂಧನ -ಸೇವೆಯಿಂದ ಅಮಾನತು

ಕಡಬ: ತಡರಾತ್ರಿ ಮನೆಗೆ ಅಕ್ರಮ ಪ್ರವೇಶಿಸಿ ಮನೆಯ ಸದಸ್ಯರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಡಬ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜು ನಾಯ್ಕ್ ಎಂಬಾತನನ್ನು ಬಂಧಿಸಲಾಗಿದ್ದು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಡಬ ತಾಲೂಕು ಕೊಯಿಲ ನಿವಾಸಿ ಬಾಬು ಗೌಡ ಎಂಬವರ ಮನೆಯ ಸಮೀಪವಿರುವ ಅವರ ಸಹೋದರ ಹರೀಶ ಎಂಬವರ ಮನೆಗೆ ಡಿ.3ರಂದು ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಅಕ್ರಮ

ಬಿಳಿನೆಲೆ: ಯುವತಿ ಚೈತನ್ಯ (19) ಅಸೌಖ್ಯದಿಂದ ನಿಧನ

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಸೂಡ್ಲು ನಿವಾಸಿ ತಿಮ್ಮಪ್ಪ ಗೌಡರ ಪುತ್ರಿ ಚೈತನ್ಯ (19) ಅವರು ಅಸೌಖ್ಯಕ್ಕೆ ಒಳಗಾಗಿ ಡಿಸೆಂಬರ್ 4ರಂದು ಸ್ವಗೃಹದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಶಿಕ್ಷಣ ಮುಗಿಸಿದ ನಂತರ ಪುತ್ತೂರಿನಲ್ಲಿ ಪ್ರಥಮ ವರ್ಷದ ಫ್ಯಾಷನ್ ಡಿಸೈನ್ ಅಧ್ಯಯನ ಮಾಡುತ್ತಿದ್ದ ಚೈತನ್ಯ ಅವರು ಬಿಳಿನೆಲೆ ಮಹಿಳಾ ಭಜನಾ ತಂಡದ ಸಕ್ರಿಯ ಸದಸ್ಯೆಯಾಗಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾರನ್ನು ಭೇಟಿಯಾದ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಮಾಜಿ ಪುತ್ತಿಲ ಪರಿವಾರದ ಅಧ್ಯಕ್ಷ, ಪ್ರಸ್ತುತ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾರನ್ನು ಭಾನುವಾರ ನಡೆದ ಪುತ್ತಿಲ ಪರಿವಾರ ನೇತೃತ್ವದ ಶ್ರೀನಿವಾಸ ಕಲ್ಯಾಣಕ್ಕೆ ಹೋದ ಸಂದರ್ಭದಲ್ಲಿ ಅವರನ್ನು ಕಾರ್ಯಕ್ರಮಕ್ಕೆ ಹೋಗದಂತೆ ಕಾರ್ಯಕರ್ತರು ತಡೆದ ಘಟನೆ ನಡೆದಿತ್ತು. ಇದೀಗ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ರವರು ಭೇಟಿ ನೀಡಿ ಪ್ರಸನ್ನ ಕುಮಾರ್ ಮಾರ್ತಾ ರಿಗೆ ಸಾಂತ್ವನ ಹೇಳಿದ್ದಾರೆ.ಸಂದರ್ಭದಲ್ಲಿ

ಜೇನಿನ ಸಿಹಿಯ ಹಿಂದೆ ಶ್ರಮದ ಸವಿ: ದ.ಕನ್ನಡ, ತುಮಕೂರು ಜೇನುತುಪ್ಪದ ಸಾಧನೆ ಹಾಡಿಹೊಗಳಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ, ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಗಳ ಜೇನುತುಪ್ಪದ ಅಸಾಧಾರಣ ಗುಣಮಟ್ಟವನ್ನು ಉಲ್ಲೇಖಿಸಿ, ಅದರ ಹಿಂದೆ ಇರುವ ರೈತರ ಶ್ರಮವನ್ನು ಹಾಡಿಹೊಗಳಿದರು. ದ.ಕ. ಜಿಲ್ಲೆಯ ಪರಿಸರವು ಉತ್ತಮ ಗುಣಮಟ್ಟದ ಜೇನು ಉತ್ಪಾದನೆಗೆ ಹೇಳಿ ಮಾಡಿಸಿದಂತಿದೆ. ಈ ಸಾಮರ್ಥ್ಯವನ್ನು ಗುರುತಿಸಿ, ಗ್ರಾಮಜನ್ಯ ಎಂಬ ಸಂಸ್ಥೆಯು ಜೇನನ್ನು ಬ್ರಾಂಡ್ ಮಾಡಿ ನಗರ ಮಾರುಕಟ್ಟೆಗೆ ತಲುಪಿಸುತ್ತಿದ್ದು, ಇದರಿಂದ ರೈತರಿಗೆ ಭಾರಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನೆಲೆ-ರೂ.25ಲಕ್ಷ ದೇಣಿಗೆ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನೆಲೆ-ಈಶಾನ್ಯ ಬದಿಯ ಕಟ್ಟೆ ನಿರ್ಮಾಣಕ್ಕೆ ಬೆಂಗಳೂರಿನ ಉದ್ಯಮಿ ನಾಗೇಶ್ ರಾವ್ ಅತ್ತಾಳ ಸುಜಾತ ದಂಪತಿಯಿಂದ ರೂ.25ಲಕ್ಷ ದೇಣಿಗೆ ಸಮರ್ಪಣೆ. ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಬಗ್ಗೆ ದೇವಳದ ಈಶಾನ್ಯ ಬದಿಯ ಕಟ್ಟೆ ನಿರ್ಮಾಣಕ್ಕಾಗಿ ನಾಗೇಶ್ ರಾವ್ ಅತ್ತಾಳ ಮತ್ತು ಸುಜಾತ ರಾವ್ ಅವರು ರೂ.25 ಲಕ್ಷ

ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ದಿನಾಚರಣೆ

ಸಂವಿಧಾನದ ಆಶಯಗಳನ್ನು ಗೌರವಿಸಿರಿ: ಕೃಷ್ಣ ಪ್ರಸಾದ ಆಳ್ವ ಸಂವಿಧಾನದ ಜಾಗೃತಿ ಮೂಡಿಸುವ, ಬ್ಲಾಕ್ ಕಾಂಗ್ರೆಸ್ಸಿನ ಕಾರ್ಯ ಶ್ಲಾಘನೀಯ:ನೂರುದ್ದೀನ್ ಸಾಲ್ಮರಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ವತಿಯಿಂದ, ಕಾಂಗ್ರೆಸ್ ಕಚೇರಿಯಲ್ಲಿ ಇಂದು, ಸಂವಿಧಾನ ದಿನಾಚರಣೆಯನ್ನು ಆಚರಿಸಿ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ಬರೆದ “ಸಂವಿಧಾನ ಓದು” ಎಂಬ ಪುಸ್ತಕವನ್ನು, ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಎಲ್ಲಾ

ಪುತ್ತೂರು: ಅನಾರೋಗ್ಯ ಪೀಡಿತ ಯುವತಿ ಆತ್ಮಹತ್ಯೆ

ಪುತ್ತೂರು: ತಲೆನೋವು, ನರದೋಷ ಮತ್ತಿತರ ಸಮಸ್ಯೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ಜರ್ಝರಿತಗೊಂಡಿದ್ದ ಯುವತಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.23ರಂದು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಪೊಯ್ಯೊಲೆ ಎಂಬಲ್ಲಿ ನಡೆದಿದೆ. ಗುಡ್ಡಪ್ಪ ರೈ ಎಂಬವರ ಪುತ್ರಿ ನೀತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈ ಬಗ್ಗೆ ಮೃತಳ ಅಕ್ಕ ಗೀತಾ ಪಿ. ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು :ರಾಜಸ್ಥಾನದಲ್ಲಿ ನಡೆಯುವ ಹುಡುಗರ ಮತ್ತು ಹುಡುಗಿಯರ 49ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್ಶಿಪ್

ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲಿ .ಬಾಲಕರ ಮತ್ತು ಬಾಲಕಿಯರ 49ನೇ ಜೂನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ 2025 ರ ಡಿಸೆಂಬರ್ 16 ರಿಂದ 21 ರವರೆಗೆ ರಾಜಸ್ಥಾನದ ಜುನ್ಜುನುವಿನ ಪಿಲಾನಿಯಲ್ಲಿ ನಡೆಯಲಿದೆ . ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಗೆ .ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆ ಪ್ರಕಾರ ದಿನಾಂಕ: 27ನೇ ಮತ್ತು 28 ನವೆಂಬರ್ 2025 ರಂದು ಬೆಳಗ್ಗೆ 9 ಗಂಟೆಗೆ ಭಾರತೀಯ ಕ್ರೀಡಾ

ಯುವ ಮನಸ್ಸುಗಳು ಎಚ್ಚೆತ್ತುಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ : ಡಾ. ಅನುರಾಧ ಕುರುಂಜಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ) ಸುಳ್ಯ ತಾಲೂಕು, ಸುಳ್ಯ ವಲಯ ಗಾಂಧಿನಗರ ಕಾರ್ಯಕ್ಷೇತ್ರದ ವತಿಯಿಂದ ಆಲೆಟ್ಟಿ ಮಿತಡ್ಕ ರೋಟರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಭಾಗದ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಅನುರಾಧ ಕುರುಂಜಿಯವರು ಮಾತನಾಡಿ ಯುವ ಮನಸ್ಸುಗಳು ಎಚ್ಚೆತ್ತುಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರಲ್ಲದೇ ದುಶ್ಚಟಕ್ಕೆ

ಪುತ್ತೂರು: ಯುವಕನ ದುರಂತ ಅಂತ್ಯ; ತಂದೆ-ತಾಯಿಯಂತೆಯೇ ಮಗನೂ ಆತ್ಮಹತ್ಯೆಗೆ ಶರಣು

ಪುತ್ತೂರು: ಬೆಂಗಳೂರಿನಿಂದ ಊರಿಗೆ ಬಂದಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಪುರುಷರಕಟ್ಟೆ ಇಂದಿರಾನಗರದಲ್ಲಿ ನವೆಂಬರ್ 21ರಂದು ನಡೆದಿದೆ. ಮೃತರನ್ನು ಪುರುಷರಕಟ್ಟೆ ಇಂದಿರಾನಗರ ನಿವಾಸಿ, ದಿವಂಗತ ಪ್ರವೀಣ್ ಜೋಗಿ ಅವರ ಪುತ್ರ ಪ್ರತೀಕ್ (23) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಶೋರೂಮ್‌ ವರ್ಕ್‌ಶಾಪ್‌ ಒಂದರಲ್ಲಿ ಉದ್ಯೋಗದಲ್ಲಿದ್ದ ಪ್ರತೀಕ್, ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಗುರುವಾರ ಮಧ್ಯಾಹ್ನ