Home ಕರಾವಳಿ Archive by category ಪುತ್ತೂರು (Page 2)

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ

ಪುತ್ತೂರು:ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬಿ ಪ್ರಯುಕ್ತ ದೇಶದ್ಯಾಂತ ಬಿ.ಜೆ.ಪಿ ವತಿಯಿಂದ ಅಟಲ್ ವಿರಾಸತ್ ವಿಶೇಷ ಕಾರ್ಯಕ್ರಮವನ್ನು ಪಕ್ಷ ಆಯೋಜಿಸಿದ್ದು, ದ.ಕ ಜಿಲ್ಲಾ ಬಿ.ಜೆ.ಪಿ ವತಿಯಿಂದ ಪುತ್ತೂರು ವೆಂಕಟರಮಣ ದೇವಸ್ಥಾನದ ಮೈದಾನದಲ್ಲಿ ನಡೆಯುವ ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ

ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರು “ಹಿರಿಯ ನಾಗರಿಕರ ದಿನಾಚರಣೆ”

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ (ರಿ.) ಪುತ್ತೂರುಇವರ ಸಂಯುಕ್ತ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರುಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರುಗಳ ಸಹಯೋಗದೊಂದಿಗೆ ಹಿರಿಯ ನಾಗರಿಕರ ದಿನಾಚರಣೆ” ಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ ಮನೀಷಾ ಸಭಾಂಗಣ, ಪುತ್ತೂರು, ಇಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು

ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಪುತ್ತೂರಿನ ದಿಶಾನ್ ಎಂ ಗೆ ಚಿನ್ನದ ಪದಕ.

ಪುತ್ತೂರು: ಸಂತ ಫಿಲೋಮಿನಾ ಪ ಪೂ ಕಾಲೇಜಿನ ದಿಶಾನ್ ಎಂ ಗೆ ಚಿನ್ನದ ಪದಕ. ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಸಂಘದ ಆಶ್ರಯದಲ್ಲಿ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಸೋಸಿಯೇಷನ್ ಸುಳ್ಯದಲ್ಲಿ ನ 8 ಮತ್ತು 9 ರವರೆಗೆ ನಡೆದ ರಾಜ್ಯಮಟ್ಟದ ಯುವ ಕಿರಿಯ ಮತ್ತು ಹಿರಿಯ ವಿಭಾಗದ 71 ಕೆ ಜಿ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ದಿಶಾನ್ ಎಂ ಚಿನ್ನದ ಪದಕವನ್ನು ಪಡೆದಿರುತ್ತಾರೆ. […]

ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಿತ್ರನಟಿ ನಯನತಾರಾ ದಂಪತಿ ಭೇಟಿ

ಸುಬ್ರಹ್ಮಣ್ಯ: ಭಾರತೀಯ ಚಿತ್ರರಂಗದ ಕಾಲಿವುಡ್ ನ ಬಹುಭಾಷಾ ನಟಿ ನಯನತಾರ ಹಾಗೂ ಅವರ ಪತಿ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗಳು ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸರ್ಪಸಂಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು. ನಯನತಾರಾ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪ್ರಖ್ಯಾತ ಬಹುಭಾಷಾ ನಟಿಯಾಗಿದ್ದಾರೆ. ಅವರು ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುಕ್ಕೆ ಶ್ರೀ

ಸುಬ್ರಹ್ಮಣ್ಯ:ಆಶ್ಲೇಷ ನಕ್ಷತ್ರ ಹಿನ್ನೆಲೆ,ಕುಕ್ಕೆಯಲ್ಲಿ ಅಧಿಕ ಭಕ್ತರ ಜಮಾವಣೆ

ಸುಬ್ರಹ್ಮಣ್ಯ : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರವಾದ ಈ ದಿನ ಅಧಿಕ ಭಕ್ತರು ಬಂದು ಆಶ್ಲೇಷ ಬಲಿ,ಶೇಷ ಸೇವೆ, ಮಹಾಪೂಜೆ, ನಾಗ ಪ್ರತಿಷ್ಠೆ ಮುಂತಾದ ಸೇವೆಗಳನ್ನ ನಡೆಸಿರುವರು. ಬೆಳಗ್ಗೆ ಹೊತ್ತು ಮೂರು ಬ್ಯಾಚಿನಲ್ಲಿ ಆಶ್ಲೇಷ ಬಲಿ ಸೇವೆ ನಡೆಯುತ್ತಿದ್ದು ಮೂರು ಬ್ಯಾಚುಗಳಲ್ಲಿ ಕೂಡ ಅಧಿಕ ಸಂಖ್ಯೆಯ ಭಕ್ತಾದಿಗಳು ಸೇವೆ ಸಲ್ಲಿಸಿರುವರು ಹಾಗೆಯೇ ಮಧ್ಯಾಹ್ನದ ನಾಗ ಪ್ರತಿಷ್ಠ ಮಂಟಪದ ಎದುರು ಸ್ಥಳವಕಾಶ ಕಡಿಮೆ

ಕಡಬ: ಬೆಂಗಳೂರಿನಲ್ಲಿ ಯುವಕ ಆತ್ಮಹತ್ಯೆ

ಕಡಬ:ಇಲ್ಲಿನ ನೂಜಿಬಾಳ್ತಿಲ ಗ್ರಾಮದ ಯುವಕನೋರ್ವ ಬೆಂಗಳೂರಿನ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಮೃತನನ್ನು ಕಲ್ಲುಗುಡ್ಡೆ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಜುಬಿನ್ ತೋಮಸ್ (24 ವರ್ಷ) ಎಂದು ಗುರುತಿಸಲಾಗಿದೆ. ಅವರು ವಿದೇಶಕ್ಕೆ ಹೋಗುವ ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದ್ದು, ಈ ನಡುವೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆತಂಕ ಉಂಟುಮಾಡಿದೆ.ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಾರದಿದ್ದು,

ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಅಟಲ್ ವಿರಾಸತ್ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ಪುತ್ತೂರು ನಗರ ಮಂಡಲದ ಅಟಲ್ ವಿರಾಸತ್ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಹಾಗೂ ನಗರ ಮಂಡಲದ ಅಧ್ಯಕ್ಷರಾದ ಶಿಶಿರ ಪೆರ್ವೋಡಿ ಹಾಗೂ ನಿತೇಶ್ ಕಲ್ಲೇಗ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಹಾಗೂ ಯುವ ಮೋರ್ಚಾ ಗ್ರಾಮಾಂತರ ಮಂಡಲದ ಪ್ರಭಾರಿಗಳಾದ ಕೃಷ್ಣ ಎಂ ಆರ್ ಕಡಬ, ಜಿಲ್ಲಾ ಕಾರ್ಯದರ್ಶಿಗಳಾದ ಮಚ್ಚಿಮಲೆ ವಿರುಪಾಕ್ಷ ಭಟ್, ಬಿಜೆಪಿ ಮುಖಂಡರಾದ

ಪುತ್ತೂರಿನಲ್ಲಿ ಭೀಕರ ಅಪಘಾತ: ಮೂವರಿಗೆ ಗಂಭೀರ ಗಾಯ

ಪುತ್ತೂರು: ನಗರದ ಮಂಜಲ್ಪಡ್ಪು ಎಂಬಲ್ಲಿ ಶನಿವಾರ ಕಾರು ಮತ್ತು ಆಟೋ ರಿಕ್ಷಾಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಟೋ ರಿಕ್ಷಾ ಚಾಲಕ, ಬಂಟ್ವಾಳ ತಾಲೂಕಿನ ಮುಡಿಪು ಬಳಿಯ ಫಜೀರ್ ನಿವಾಸಿ ಸುನಿಲ್ ಪಿಂಟೋ(37), ಫಜೀರ್ ನಿವಾಸಿಗಳಾದ ಉಸ್ಮಾನ್(57) ಮತ್ತು ವಿದ್ಯಾರ್ಥಿನಿ ಫಾತಿಮತ್ ಮುರ್ಷಿದಾ(17) ಎಂದು ಗುರುತಿಸಲಾಗಿದೆ. ಸುನಿಲ್ ಮತ್ತು ಉಸ್ಮಾನ್ ಅವರ ಕಾಲುಗಳಿಗೆ ತೀವ್ರ ಏಟು ತಗುಲಿದ್ದು, ಮುರ್ಷಿದಾ ಅವರ ತಲೆಗೆ

ಪುತ್ತೂರು: ದೇವದಾಸ್ ಗೌಡ ನಿಧನ

ಪುತ್ತೂರು ಕೊಂಬೆಟ್ಟು ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಮರೀಲು ಸಂಜಯನಗರ ನಿವಾಸಿ ದೇವದಾಸ್ ಗೌಡ ನಿಧನ. ಪುತ್ತೂರು: ಕೊಂಬೆಟ್ಟು ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಮರೀಲು ಸಂಜಯನಗರ ನಿವಾಸಿ ದೇವದಾಸ್ ಗೌಡ(74ವ) ನ.4ರಂದು ನಿಧನರಾದರು. ದೇವದಾಸ್ ಗೌಡ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ.4ರಂದು ಅವರು ನಿಧನರಾದರು. ಮೃತರು

ನಂದಿತಾ ಎಸ್. ಭಟ್ ಐಸಿಎಐ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ಉತ್ತೀರ್ಣ

ಕಡಬ: ಪೆರ್ಲದಕೆರೆ ಕಡಬದ ಶ್ರೀ ಎಸ್. ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಜಯಲಕ್ಷ್ಮಿ ಭಟ್ ಇವರ ಪುತ್ರಿ ನಂದಿತಾ ಎಸ್. ಭಟ್ ಇವರು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ (ICAI) ನಡೆಸಿದ ಲೆಕ್ಕಪರಿಶೋಧಕರ (CA) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈoಟ್ ಆನ್ಸ್ ಶಾಲೆ, ಕಡಬದಲ್ಲಿ, ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪಿ.ಯು. ಕಾಲೇಜು, ರಾಮಕುಂಜದಲ್ಲಿ, ಹಾಗೂ ಪದವಿ