Home ಕರಾವಳಿ Archive by category ಪುತ್ತೂರು (Page 85)

ಸೇಡಿಯಾಪುವಿನಲ್ಲಿ ರಸ್ತೆಗೆ ಅಡ್ಡವಾಗಿ ಉರುಳಿದ ಬೃಹತ್ ಗಾತ್ರದ ಮರ

ಪುತ್ತೂರು: ಕೋಡಿಂಬಾಡಿ ಸಮೀಪದ ಸೇಡಿಯಾಪು ಬಳಿ ಬೃಹತ್ ಗಾತ್ರದ ಆಲದ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮರ ಬಿದ್ದ ಪರಿಣಾಮ ಪುತ್ತೂರು-ಉಪ್ಪಿನಂಗಡಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮರ ಉರುಳಿ ಬಿದ್ದಿದ್ದು ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಸದಸ್ಯರು ಸಾರ್ವಜನಿಕರ

ಪುತ್ತೂರಿನಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಇಂಧನ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ಹಮ್ಮಿಕೊಂಡಿರುವ 100ನೋಟ್ ಔಟ್ ಎನ್ನುವ ಪ್ರತಿಭಟನಾ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕಾವು ಹೇಮನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ವಿನೂತನವಾಗಿ ನಡೆಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾವು ಹೇಮನಾಥ್ ಶೆಟ್ಟಿಯವರು ಮಾತಾಡಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೂಲಕ ಜನತೆಯ ಹಣವನ್ನು ಲೂಟಿಗೈಯ್ಯುತ್ತಿದೆ, ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ೧೪೦ ಡಾಲರ್ ಆಗಿದ್ದರೂ

ಪುತ್ತೂರಿನಲ್ಲಿ ‘ಭತ್ತ ಬೆಳೆಯೋಣ ಬದುಕು ಕಟ್ಟೋಣ’ ಆಂದೋಲನ

ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಪೂರ್ಣ ಪ್ರಮಾಣದಲ್ಲಿ ಭತ್ತದ ಬೇಸಾಯದ ಜಿಲ್ಲೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಬೇಸಾಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಶಯದಂತೆ ಮತ್ತೆ ದ.ಕ. ಜಿಲ್ಲೆಯನ್ನು ಬೇಸಾಯ ವೈಭವದ ಜಿಲ್ಲೆ ಮಾಡುವ ಉದ್ದೇಶ ಇಟ್ಟುಕೊಂಡು ಭತ್ತ ಬೆಳೆಯೋಣ.. ಬದುಕು ಕಟ್ಟೋಣ ಎಂಬ ಆಂದೋಲನ ಆರಂಭಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ

ಕಾಂಗ್ರೆಸ್ ವಿರೋಧ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದೆ: ಪುತ್ತೂರಿನಲ್ಲಿ ನಳಿನ್ ಕುಮಾರ್ 

ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡುವುದು ಬಿಟ್ಟು, ಬೇರೆ ವಿಷಯವೇ ತಿಳಿದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ಗೆ ತಿರುಗೇಟು ನೀಡಿದ್ದಾರೆ. ಪುತ್ತೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೆಟ್ರೋಲ್, ಡೀಸೇಲ್ ನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೇಸ್ ಪಕ್ಷ ರಾಜ್ಯದಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದ್ದು, ಈ ಪ್ರತಿಭಟನೆಯ ವಿರುದ್ಧ ನಳಿನ್

ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ. ದೀಪಕ್ ರೈ ನೇಮಕ

ಪುತ್ತೂರು: ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ದೀಪಕ್ ರೈ ಅವರನ್ನು ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಯಾಗಿರುವ ರಾಜೇಂದ್ರ ಕೆ.ವಿ ಅವರು ಆದೇಶ ನೀಡಿದ್ದಾರೆ. ಈ ಹಿಂದೆ ತಾಲೂಕು ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಅಶೋಕ್ ಕುಮಾರ್ ರೈ ಅವರನ್ನು ಮುಂದಿನ ಅದೇಶದ ತನಕ ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಆದೇಶದಲ್ಲಿ

ಕಲ್ಲಾಜೆಯಲ್ಲಿ ತಬ್ಬಲಿ ಸಹೋದರರ ಮನೆಗೆ ವಿದ್ಯುತ್ ಸಂಪರ್ಕ

ಕಡಬ: ಐತ್ತೂರು ಗ್ರಾಮದ ಕಲ್ಲಾಜೆ ಎಂಬಲ್ಲಿರುವ ತಬ್ಬಲಿ ಸಹೋದರರು ಇರುವ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅವರ ಮನೆ ಬೆಳಕು ನೀಡುವ ಮೂಲಕ ಕಡಬ ವಿಶ್ವ ಹಿಂದೂ ಪರಿಷತ್ ಸಂಘಟನೆ ಮಾನವೀಯತೆ ಮೆರೆದಿದೆ. ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ದಿ.ಗೋಪಾಲ ಗೌಡ, ದಿ. ಹೇಮಾವತಿ ದಂಪತಿಯ ಪುತ್ರರಾದ ಹಿತೇಶ್ ಹಾಗೂ ತೀರ್ಥಪ್ರಸಾದ್ ಅವರು ಕಳೆದ16 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರೆ. ಕಳೆದ 2 ವರ್ಷದ ಹಿಂದೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು.

ಆರೋಪಿಗಳ ದಸ್ತಗಿರಿಗೆ ಸಹಕರಿಸಿದ ಗೃಹರಕ್ಷಕ ಸಿಬ್ಬಂದಿಗೆ ’ಪ್ರಶಂಸನಾ ಪತ್ರ’

ಉಪ್ಪಿನಂಗಡಿ : ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಸಹಕರಿಸಿದ ಗೃಹರಕ್ಷಕ ಸಿಬ್ಬಂದಿ ಕುಸುಮಾ ಭಟ್ ಅವರಿಗೆ ಡಿವೈಎಸ್‌ಪಿ ಡಾ.ಗಾನಾ ಪಿ ಕುಮಾರ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಬಾಟಲಿಯಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಸಹಕರಿಸಿದ ಮಹಿಳಾ ಗೃಹರಕ್ಷಕ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಜೂನ್ ೬ ರಂದು ಬಂಟ್ವಾಳ ತಾಲೂಕಿನ

ಲಾಕ್‌ ಡೌನ್‌‌ ನಿಯಮ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು

ಪುತ್ತೂರು: ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಯವರು ಲಾಕ್‌ಡೌನ್ ನಿಯಮಗಳನ್ನು ಬಿಗಿಗೊಳಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಮತ್ತು ನಗರಸಭೆ ಪೌರಾಯುಕ್ತ ಮಧು ಎಸ್.ಎಮ್ ರವರು  ಕಾರ್ಯಾಚರಣೆಗೆ ಇಳಿದಿದ್ದಾರೆ. ಅನಗತ್ಯವಾಗಿ ತಿರುಗಾಡುತ್ತಿರುವ ವಾಹನಗಳಿಗೆ ಪುತ್ತೂರು ಪೊಲೀಸರ ಸಹಕಾರದೊಂದಿಗೆ ಅವರು ಕಡಿವಾಣ ಹಾಕಿದ್ದಾರೆ. ಡಿ.ಸಿ ಸೂಚನೆಯಂತೆ ತಾಲೂಕು ಮಟ್ಟದಲ್ಲಿ ಕೊರೋನಾ ನಿಂತ್ರಣಕ್ಕಾಗಿ ಮೂರು ವಿಚಕ್ಷಣ ದಳ

ಮದುವೆ ನಿಶ್ಚಿತಾರ್ಥವಾಗಿದ್ದ ಈಶ್ವರಮಂಗಲದ ಯುವತಿ ಆತ್ಮಹತ್ಯೆ

ವಿವಾಹ ನಿಶ್ಚಿತಾರ್ಥಗೊಂಡಿದ್ದ 25 ರ ಹರೆಯದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಹೊರವಲಯ ಈಶ್ವರಮಂಗಲ ಸಮೀಪದಿಂದ ವರದಿಯಾಗಿದೆ. ಕಾಸರಗೋಡು ಜಿಲ್ಲೆಯ ನೆಟ್ಟನಿಗೆ ಗ್ರಾಮದ ಕುಳದಪಾರೆ ಸಮೀಪದ ನಿದಿಯಡ್ಕದ ಸುಬ್ಬಣ್ಣ ನಾಯ್ಕ ಎಂಬವರ ಪುತ್ರಿ ಪ್ರಿಯಾ ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಈಗಾಗಲೇ ವಿವಾಹ ನಿಶ್ಚಿತಾರ್ಥವಾಗಿದ್ದೂ ಕಳೆದ ಮೇ ತಿಂಗಳಿನಲ್ಲಿ ವಿವಾಹಕ್ಕೆ ದಿನಾಂಕ ನಿಗದಿಯಾಗಿತ್ತು .  ಲಾಕ್ ಡೌನ್ ಹೇರಲ್ಪಟ್ಟ

ಮೈದಾನದ ಪ್ರವೇಶ ದಾರಿ ಬಂದ್ ಗ್ರಾಪಂನಿಂದ ಸಾಮರಸ್ಯ ಒಡೆಯುವ ಕೆಲಸ : ಎ.ಜತೀಂದ್ರ ಶೆಟ್ಟಿ ಆರೋಪ

ಪುತ್ತೂರು: 34 ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯ ಮೈಂದನಡ್ಕದಲ್ಲಿ ಸಾರ್ವಜನಿಕ ಆಟದ ಮೈದಾನದ ಪ್ರವೇಶ ದಾರಿಯನ್ನು ಮುಚ್ಚಿ ಧರ್ಮಾಧಾರಿತ ರಾಜಕಾರಣದ ಮೂಲಕ ಸಮಾಜದ ಸಾಮರಸ್ಯವನ್ನು ಒಡೆಯುವ ಹುನ್ನಾರ ಗ್ರಾಪಂ ನಡೆಸಿದ್ದು, ಇದೊಂದು ಸಂಘರ್ಷದ ವಾತಾವರಣ ಉಂಟುಮಾಡುವ ಕಾರ್ಯವಾಗಿದೆ ಎಂದು ಮೈಂದನಡ್ಕ ಶಾಂತಿ-ಸೌಹಾರ್ದತೆ ಉಳಿಸಿ ಹೋರಾಟ ಸಮಿತಿ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿ ಅಲಿಮಾರ್ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಸತತವಾಗಿ