Home Archive by category ರಾಷ್ಟ್ರೀಯ (Page 13)

ಆಗ್ರಾ, ಮಥುರಾ, ಆಲಿಗಡಗಳಲ್ಲಿ ಭಾರೀ ಮಳೆ

ದಿಲ್ಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿ ಭಾರೀ ಮಳೆ ಬಂದಿದೆ. ಸುತ್ತಣ 12 ರಾಜ್ಯಗಳಲ್ಲಿ ತುಂತುರು ಮಳೆ ಬಂದಿದ್ದು ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಗಾಳಿ ಮಳೆ ಸುರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾರತದ ಕೆಲವೆಡೆ ಹವಾಮಾನ ಬದಲಾವಣೆ ಕಂಡಿದೆ. ಮಳೆಯೊಂದಿಗೆ 50 ಕಿಮೀ ವೇಗದಲ್ಲಿ ಗಾಳಿಯೂ ಬೀಸಲಿದೆ; ಬೀಳುತ್ತಿದೆ. ದಿಲ್ಲಿ, ಉತ್ತರ

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ  ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ

ನೆಯ್ಪಿಲಿಯ ನರಳಾಟ

ಭಾರತದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ 1.08 ಶೇಕಡಾ ಏರಿಕೆ ಕಾಣುತ್ತಿದೆ. ಸದ್ಯ ಭಾರತದಲ್ಲಿ 13,874 ಚಿರತೆಗಳು ಇರುವುದಾಗಿ ಒಕ್ಕೂಟ ಸರಕಾರದ ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿರುವ ಚಿರತೆ ಸ್ಥಿತಿಗತಿ ವರದಿಯಲ್ಲಿ ಇದೆ. ಈ ಚಿರತೆ ಎನ್ನುವುದು ಲೆಪರ್ಡ್. ಇದನ್ನು ತುಳುವಿನಲ್ಲಿ ಚಿಟ್ಟೆ ಪಿಲಿ, ನೆಯ್ಪಿಲಿ ಎಂದೆಲ್ಲ ಕರೆಯುತ್ತಾರೆ. ಇದಕ್ಕೆ ನೆಯ್ಪಿಲಿ ಹೆಸರು ಬಂದುದು ಅದರ ಬೇಟೆಯಿಂದ. ಲೆಪರ್ಡ್ ಚಿರತೆಯು ನಾಯಿ ಹಿಡಿಯುವುದರಲ್ಲಿ ಎಕ್ಸ್‍ಪರ್ಟ್.

ಹಣವಂತರ ನಡುವಣ ಹೆಣವಂತ ಸಮುದಾಯ

ಭಾರತದಲ್ಲಿ ಅತೀ ಸಿರಿವಂತರ ಸಂಖ್ಯೆಯು 13,230ಕ್ಕೆ ಏರಿಕೆಯಾಗಿದೆ. 141 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ ಅಭಿವೃದ್ಧಿಶೀಲ ಹೆಸರು ಹಲಗೆ ಕಳಚಿಕೊಳ್ಳಲಾಗದ, 40 ಕೋಟಿಯಷ್ಟು ಬಡವರನ್ನು ಹೊಂದಿರುವ ಭಾರತದಲ್ಲಿ ಬಡವರ ಸಂಖ್ಯೆ ಇಳಿಸಲು ಸಾಧ್ಯವಾಗಿಲ್ಲ. ಬದಲಿಗೆ ಜನಸಂಖ್ಯೆ ಏರಿದಂತೆಯೇ ಬಡವರ ಸಂಖ್ಯೆಯೂ ಏರುತ್ತ ನಡೆದಿದೆ. 1970ನೇ ಇಸವಿಯಲ್ಲಿ ತಿಂಗಳಿಗೆ 300 ರೂಪಾಯಿ ಗಳಿಸುತ್ತಿದ್ದ ವ್ಯಕ್ತಿಯು ಈಗ ತಿಂಗಳಿಗೆ 13,000

ಅಡ್ಡ ಮತದಾನ ಬಿಜೆಪಿಗೆ ಭರ್ಜರಿ ಲಾಭ

ಹದಿನೈದು ರಾಜ್ಯಗಳ 66 ರಾಜ್ಯ ಸಭಾ ಸ್ಥಾನಗಳಿಗೆ ವಿಧಾನ ಸಭೆಯಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 30 ಸ್ಥಾನ ಗೆದ್ದು 45 ಶೇಕಡಾಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಆದರೆ ಇದರಲ್ಲಿ 6 ಸ್ಥಾನಗಳನ್ನು ಅದು ವಶೀಲಿಬಾಜಿಯಿಂದ, ಖರೀದಿಯಿಂದ, ಹಿಂದಿನ ಬಾಗಿಲಿನಿಂದ ತನ್ನದಾಗಿಸಿಕೊಂಡಿದೆ ಎನ್ನುವುದು ಹಲವರ ಆರೋಪವಾಗಿದೆ. ಆರು ವರುಷ ಸದಸ್ಯಾವಧಿಯ ರಾಜ್ಯ ಸಭೆಯ ಮೂರನೇ ಒಂದು ಭಾಗದ ಸದಸ್ಯರು ಪ್ರತಿ ಎರಡು ವರುಷಕ್ಕೊಮ್ಮೆ

ದಿಲ್ಲಿ: ಮೈತ್ರಿ, ಸೀಟು ಹಂಚಿಕೆ ಬಗೆಗೆ ಸ್ಪಷ್ಟನೆ

ದಿಲ್ಲಿಯ ದಿಲ್ಲಿ ಪಶ್ಚಿಮ, ದಿಲ್ಲಿ ದಕ್ಷಿಣ, ದಿಲ್ಲಿ ಪೂರ್ವ ಮತ್ತು ನವದೆಹಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಶಾನ್ಯ ದಿಲ್ಲಿ, ವಾಯುವ್ಯ ದಿಲ್ಲಿ ಮತ್ತು ಚಾಂದಿನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.ಎಎಪಿಯವರೂ ಇದ್ದ ಮಾಧ್ಯಮ ಮಾತುಕತೆಯಲ್ಲಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಮಾಹಿತಿ ನೀಡಿದರು.ಗುಜರಾತಿನ 26ರಲ್ಲಿ 24ಕಡೆ ಕಾಂಗ್ರೆಸ್

ಟಿವಿ ನಿರೂಪಕನನ್ನು ಅಪಹರಿಸಿದ ತರುಣಿ

ಮದುವೆ ಪ್ರಸ್ತಾಪ ತಿರಸ್ಕರಿಸಿದ ಟಿವಿ ನಿರೂಪಕನನ್ನು ಅಪಹರಿಸಿ ಮದುವೆಗೆ ಒತ್ತಾಯಿಸಿದ ಮಹಿಳಾ ಉದ್ಯಮಿ ಒಬ್ಬರು ಈಗ ಪೋಲೀಸು ಕಸ್ಟಡಿ ಸೇರಿರುವ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ.ಬಂಧಿತ ಯುವತಿ ಭೋಗಿರೆಡ್ಡಿ ತ್ರಿಶಾ. ಈಕೆ ಐದು ಸ್ಟಾರ್ಟಪ್ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕಿ ಆಗಿದ್ದಾರೆ. ಮ್ಯಾಟ್ರಿಮೊನಿ ಜಾಲ ತಾಣದ ಮೂಲಕ ಟಿವಿ ಸಂಗೀತ ಚಾನಲ್ ಒಂದರ ನಿರೂಪಕ ಪ್ಣವ್ ಪ್ರೊಫೈಲ್ ನೋಡಿ ಆತನಲ್ಲಿ ತ್ರಿಶಾ ಮದುವೆಯ ಪ್ರಸ್ತಾಪ ಮಾಡಿದ್ದಾಳೆ. ಆದರೆ ಆತ ಮದುವೆಗೆ

ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ : ವೈ. ಎಸ್. ಶರ್ಮಿಳಾ ಬಂಧನ

ಜಿಲ್ಲಾ ಆಯ್ಕೆ ಸಮಿತಿಯಿಂದ ಶಿಕ್ಷಕರ ನೇಮಕಾತಿ ಪಟ್ಟಿ ಆಗಿದ್ದರೂ ಸಚಿವಾಲಯವು ಆ ಪಟ್ಟಿ ತಡೆ ಹಿಡಿದಿರುವುದರ ವಿರುದ್ಧ ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಈ ವೇಳೆ ಎಪಿಸಿಸಿ ಅಧ್ಯಕ್ಷೆ ವೈ. ಎಸ್. ಶರ್ಮಿಳಾ ಮತ್ತಿತರರನ್ನು ಪೋಲೀಸರು ವಶಕ್ಕೆ ಪಡೆದರು.ಮನೆಗೆ ಹೋದರೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂದು ರಾತ್ರಿ ಕಾಂಗ್ರೆಸ್ ಕಚೇರಿಯಲ್ಲೇ ಮಲಗಿದ್ದ ಶರ್ಮಿಳಾ ಅವರು ಬೆಳಿಗ್ಗೆ ನೇರ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಶರ್ಮಿಳಾ ಅವರು ಆಂಧ್ರದ

ರೈತ ಶುಭಕರಣ್ ಸಿಂಗ್ ಸಾವು : ದಿಲ್ಲಿ ಹರಿಯಾಣ ಗಡಿಯಲ್ಲಿ ಕೊಲೆ : ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

21ರ ಪ್ರಾಯದ ಶುಭಕರಣ್ ಸಿಂಗ್ ಎರಡು ಎಕರೆ ಹೊಲ ಹೊಂದಿದ್ದಾನೆ. ತಂಗಿಯ ಮದುವೆಗಾಗಿ ಸಾಲ ಮಾಡಿದ್ದ. ಈಗ ರೈತರ ಚಳವಳಿಯಲ್ಲಿ ದಿಲ್ಲಿ ಹರಿಯಾಣ ಗಡಿಯಲ್ಲಿ ಸರಕಾರದ ರೈತ ಚಳವಳಿ ಹತ್ತಿಕ್ಕುವ ಹೋರಾಟದಲ್ಲಿ ಬಲಿಯಾಗಿದ್ದಾನೆ.ಪಂಜಾಬದ ಭಟಿಂಡಾ ಜಿಲ್ಲೆಯ ಬಾಲೋಕ್ ಗ್ರಾಮದ ಯುವಕ ರೈತನಿವನು. ಈಗ ಪೋಲೀಸರ ದಾಳಿಯಲ್ಲಿ ರೈತರ ಪ್ರಕಾರ ಕೊಲೆಯಾಗಿದ್ದಾನೆ. ಸರಕಾರ ಸರಿಯಾದ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿರುವ ರೈತ ನಾಯಕರು ತಾವೇ ಒಂದಷ್ಟು ಸಣ್ಣ ಪ್ರಮಾಣದಲ್ಲಿ ಪರಿಹಾರ ಒಟ್ಟು

ದಿಲ್ಲಿ ಲೋಕ ಸಭಾ ಕ್ಷೇತ್ರ : ಕಾಂಗ್ರೆಸ್ ಎಎಪಿ ಮೈತ್ರಿ ಹಂಚಿಕೆ : ಎಎಪಿ 4, ಕಾಂಗ್ರೆಸ್ 3 ಕಡೆ ಸ್ಪರ್ಧೆ

ದಿಲ್ಲಿ ಲೋಕಸಭಾ ಕ್ಷೇತ್ರಗಳ ಬಗೆಗೆ ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಂದು ಒಡಂಬಡಿಕೆಗೆ ಬಂದವು. ಅದರಂತೆ ದಿಲ್ಲಿಯ 7 ರಲ್ಲಿ 4 ಕಡೆ ಎಎಪಿ ಮತ್ತು 3 ಕಡೆ ಕಾಂಗ್ರೆಸ್ ಪಕ್ಷಗಳು ಸ್ಪರ್ಧಿಸಲಿವೆ.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಅವರು ಈ ಬಗೆಗೆ ಒಡಂಬಡಿಕೆ ಮಾಡಿಕೊಂಡು ದಿಲ್ಲಿಯಲ್ಲಿ ಮಾಹಿತಿ ನೀಡಿದ್ದಾರೆ. ಅವರ ಮಾತಿನಂತೆ ದಿಲ್ಲಿ ಪೂರ್ವ ಮತ್ತು