Home Archive by category ರಾಷ್ಟ್ರೀಯ (Page 26)

ವರಾಹ ರೂಪಂ ಹಾಡಿಗೆ ತಡೆಯಾಜ್ಞೆ

ಬೆಂಗಳೂರು: ಕಾಂತಾರ ಸಿನಿಮಾ ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು ವಿವಾದ ಆಗಿತ್ತು. ಇದೀಗ ಈ ಹಾಡು ಬಳಸದಂತೆ ಕೋಯಿಕ್ಕೋಡ್ ಕೋರ್ಟ್ ಸೂಚನೆ ನೀಡಿರೋದು ಚಿತ್ರತಂಡಕ್ಕೆ ಬಿಗ್ ಶಾಕ್ ಕೊಟ್ಟಿದೆ. ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್

ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸಂಸ್ಥೆ..!

ಕೊಚ್ಚಿ : ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಕೇರಳದ ತೈಕುಡಂ ಬ್ರಿಗೇಡ್ ಸಂಸ್ಥೆ ಮುಂದಾಗಿದೆ. ಮಲಯಾಳಂ ‘ನವರಸಂ’ ಹಾಡು ಹೋಲುವಂತೆ ‘ವರಾಹ ರೂಪಂ’ ಹಾಡಿನ ಸಾಮ್ಯತೆ ಇದೆ. 5 ವರ್ಷಗಳ ಹಿಂದೆ ‘ನವರಸಂ’ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅದರ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಕಾಪಿ ರೈಟ್ ಉಲ್ಲಂಘನೆಯಾಗಿದ್ದು, ‘ಕಾಂತಾರ’ ಚಿತ್ರತಂಡದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತೈಕುಡಂ ಬ್ರಿಗೇಡ್ ಸಂಸ್ಥೆ

ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರಿಗೆ 26 ಸಂಸದರ ಬೆಂಬಲ ದೊರೆತಿದ್ದವು. ಬ್ರಿಟನ್’ನಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಮಧ್ಯೆ 45 ದಿನಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಲಿಝ್ ಟ್ರಸ್ ಅವರು ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಕಳೆದ ವಾರ

ಪ್ರಧಾನಿ ನರೇಂದ್ರ ಮೋದಿ : ಕಾರ್ಗಿಲ್‌ಗೆ ತೆರಳಿ ಯೋಧರೊಂದಿಗೆ ದೀಪಾವಳಿ ಆಚರಣೆ

ಕಾರ್ಗಿಲ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಾರ್ಗಿಲ್ ​ನಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್‌ಗೆ ಆಗಮಿಸಿದ್ದಾರೆ. ಇನ್ನು ಮೋದಿಯರವರು 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಂತಹ ರಾಜ್ಯಗಳಲ್ಲಿ ದೀಪಾವಳಿಯಂದು

ಮಂಗಳೂರು : ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ

ವಿಶ್ವದ ಹಲವಾರು ದೇಶಗಳಲ್ಲಿ ಅಕ್ಟೋಬರ್ 25ರಂದು ಕಾಣಲಿರುವ ಸೂರ್ಯಗ್ರಹಣ, ಭಾರತದ ಭೂಭಾಗದಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿ ಗೋಚರಿಸಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಸುಮಾರು ಘಂಟೆ ಸಂಜೆ 5:09 ರಿಂದ 6:06ರ ವರೆಗೆ ಕಾಣಸಿಗುವ ಈ ಘಟನೆಯಲ್ಲಿ ಸುಮಾರು ಘಂಟೆ ಸಂಜೆ 5:50ರ ಹೊತ್ತಿಗೆ ಅತಿಹೆಚ್ಚು ಅಂದರೆ ಸೂರ್ಯನ ಬಿಂಬದ 10.9% ಶೇಕಡದಷ್ಟು ಭಾಗವನ್ನು ಮರೆಮಾಚಲಿದೆ. ಗ್ರಹಣವೀಕ್ಷಣೆ ಬರಿಗಣ್ಣಿನಿಂದ ನೋಡುವುದು ಹಾನಿಕಾರಕ. ಇದನ್ನು ದೂರದರ್ಶಕದಿಂದ (ಟೆಲೆಸ್ಕೋಪ್)

ಅ.25 ರ ದೀಪಾವಳಿಯಂದೇ ಸೂರ್ಯಗ್ರಹಣ

ಈ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣವು ಅಕ್ಟೋಬರ್ 25ರಂದು ಗೋಚರವಾಗಲಿದೆ. ದೀಪಾವಳಿಯಂದೇ ಈ ಸೂರ್ಯಗ್ರಹಣ ಉಂಟಾಗಲಿದ್ದು, ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗದಲ್ಲಿ ಗೋಚರಿಸುತ್ತದೆ. ಈ ಸೂರ್ಯಗ್ರಹಣವು ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್‌ 25ರ ಪಾರ್ಶ್ವ ಸೂರ್ಯ ಗ್ರಹಣವು ಸಂಜೆ ಗಂಟೆ 5.08ಕ್ಕೆ ಪ್ರಾರಂಭವಾಗಿ 6.29ಕ್ಕೆ ಅಂತ್ಯವಾಗಲಿದ್ದು, ಸೂರ್ಯ ಗ್ರಹಣವನ್ನು

ಎಲ್ ಕೆ ಅಡ್ವಾಣಿ ಭೇಟಿ ಮಾಡಿದ ಪೇಜಾವರ ಶ್ರೀಗಳು

ಶ್ರೀ ಪೇಜಾವರ ಮಠಾಧೀಶಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಬಿಜೆಪಿ ಹಿರಿಯ ಧುರೀಣ ಎಲ್ ಕೆ ಅಡ್ವಾಣಿಯವರನ್ನು ಅವರ ನಿವಾಸದಲ್ಲಿ ಸೌಹಾರ್ಧ ಭೇಟಿ ಮಾಡಿದರು . ಅಡ್ವಾಣಿಯವರೊಂದಿಗೆ ಉಭಯಕುಶಲೋಪರಿ ನಡೆಸಿ ಅವರಿಗೆ ದೀರ್ಘಾಯುರಾರೋಗ್ಯವನ್ನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು . ಅಯೋಧ್ಯಾ ರಾಮಜನ್ಮಭೂಮಿ ಆಂದೋಲನದಲ್ಲಿ ಅಡ್ವಾಣಿ ಯವರ ಪಾತ್ರವನ್ನು ಶ್ರೀಗಳು ಬಣ್ಣಿಸಿ ಆ ಹೋರಾಟದ ಫಲವಾಗಿ ಇಂದು

5G ವಂಚಕರ ಬಗ್ಗೆ ಇರಲಿ ಎಚ್ಚರ : ಓಟಿಪಿ ನೀಡಿ ವಂಚನೆಗೊಳ್ಳಬೇಡಿ

5G ಅಥವಾ 5 ನೇ ಜನರೇಷನ್ನಿನ ಮೊಬೈಲ್ ನೆಟ್ ವರ್ಕ್ ಕೇವಲ ಇಂಟರ್ನೆಟ್ ಸ್ಪೀಡ್ ನ್ನು ಮಾತ್ರವೇ ಅಪ್ ಗ್ರೇಡ್ ಮಾಡುವುದಿಲ್ಲ ಬದಲಾಗಿ ಇದು ಮುಂದಿನ ಜನರೇಷನ್ನಿನ ಟೆಕ್ನಾಲಜಿಯನ್ನು ಡ್ರೈವ್ ಮಾಡುತ್ತದೆ. ಇದೀಗ 5G ಯಲ್ಲಿ ಕೆಲ ಸೈಬರ್ ಹ್ಯಾಕರ್’ಗಳು ಕೂಡ ಹೊಸ ರೀತಿಯ ವಂಚನೆಗೆ ಮುಂದಾಗಿದ್ದಾರೆ. ಈ ಹೊಸ ರೂಪದ ಸೈಬರ್ ಕ್ರೈಮ್ಗೆ ಬಲಿಯಾಗಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. ನಿಮ್ಮ ಮೊಬೈಲ್‌ನಲ್ಲಿರುವ 4G ಸಿಸ್ಟಮ್’ನ್ನ 5ಉಗೆ ಅಪ್‌ಗ್ರೇಡ್ ಮಾಡಬೇಕೆಂದು ನಿಮ್ಮ

ಮಹಾರಾಷ್ಟ್ರ: ಟ್ರಕ್‌ ಹಾಗೂ ಬಸ್ ಅಪಘಾತ: ಬೆಂಕಿ ಹೊತ್ತಿ 10 ಮಂದಿ ಸಜೀವ ದಹನ, 24 ಮಂದಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಔರಂಗಾಬಾದ್ ರಸ್ತೆಯಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಸಂಭವಿಸಿದ ದುರ್ಘಟನೆಯಲ್ಲಿ 24 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಲೀಪರ್ ಕೋಚ್ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ನಂದೂರ್ ನಾಕಾ ಎಂಬಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಕೆಲವೇ

ಉತ್ತರಕಾಶಿ : ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತ

ಉತ್ತರಕಾಶಿಯಲ್ಲಿ ನಡೆದ ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.  ಹಿಮಪಾತ ಅಪಘಾತದ ಮೂರನೇ ದಿನ ಎಲ್ಲಾ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.ಈಗಾಗಲೇ  ರಕ್ಷಣಾ ತಂಡವು  19 ಪರ್ವತಾರೋಹಿಗಳ ಮೃತದೇಹಗಳನ್ನು ಹೊರತೆಗೆದಿದ್ದು ಇನ್ನುಳಿದವರ ಶೋಧ ಕಾರ್ಯ ಹೆಲಿಕಾಪ್ಟರ್‌ ಮೂಲಕ  ಮುಂದುವರಿದಿದೆ. ಹಿಮಪಾತದ ತೀವ್ರತೆಯಿಂದ  ಗುರುವಾರ ಮಧ್ಯಾಹ್ನದ ನಂತರ  ರಕ್ಷಣಾವನ್ನು