Home Archive by category ರಾಷ್ಟ್ರೀಯ (Page 4)

ಅತಿ ಹೆಚ್ಚು ಚಪ್ಪರೆ ಬದನೆ ಬೆಳೆಯುವ ದೇಶ ಮತ್ತುಅತಿ ಹೆಚ್ಚು ಟೊಮ್ಯಾಟೊ ರಫ್ತು ಮಾಡುವ ದೇಶ

ಮಧ್ಯ ಅಮೆರಿಕ ಮೂಲದ ಟೊಮ್ಯಾಟೊ ಇಲ್ಲವೇ ಚಪ್ಪರಬದನೆ ಯುರೋಪಿನಲ್ಲಿ ಹೆಚ್ಚು ಬಳಸುವರು ಹಾಗೂ ಏಶಿಯಾದಲ್ಲಿ ಹೆಚ್ಚು ಬೆಳೆಯುವರು.ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಮತ್ತು ರಫ್ತು ಮಾಡುವ ದೇಶವಾಗಿದೆ ಚೀನಾ. ಕ್ಸಿಂಜಿಯಾಂಗ್ ಟೊಮ್ಯಾಟೊ ತೋಟಗಾರಿಕೆ ಪ್ರಾಂತ್ಯವಾಗಿದೆ ಭಾರತ ಎರಡನೆಯ ಸ್ಥಾನದಲ್ಲಿದೆ. ಮಧ್ಯ ಪ್ರದೇಶ, ಕರ್ನಾಟಕ ಹೆಚ್ಚು ಬೆಳೆಯುವ ರಾಜ್ಯಗಳಾಗಿವೆ. ಚೀನಾವು

ಅತಿ ಹೆಚ್ಚು ಬಣ್ಣಗಳು ಇರುವ ಬಾವುಟ ಯಾವ ದೇಶದ್ದು

ಬೆಲಿಜ್ ದೇಶದ ಬಾವುಟವು ಹನ್ನೆರಡು ಬಣ್ಣಗಳನ್ನು ಹೊಂದಿದೆ. ಭಾರತದ ಧ್ವಜದಲ್ಲಿ ನಾಲ್ಕು ಬಣ್ಣಗಳು ಇವೆ.ಸಾಮಾನ್ಯವಾಗಿ ಜಗತ್ತಿನ ಬಾವುಟಗಳು ಎರಡು ಇಲ್ಲವೇ ಮೂರು ಬಣ್ಣಗಳಲ್ಲಿ ಇರುತ್ತವೆ. ಅತಿ ಹೆಚ್ಚು ಬಣ್ಣಗಳ ವರ್ಣಮಯ ಬಾವುಟ ಬೆಲಿಜ್ ದೇಶದ್ದಾಗಿದೆ. ಇದರಲ್ಲಿ ಹನ್ನೆರಡು ಬಣ್ಣಗಳನ್ನು ಗುರುತಿಸಬಹುದು. ನೀಲಿ, ಕೆಂಪು, ಬಿಳಿ, ಕಪ್ಪು, ಕಂದು, ಹಳದಿ, ಹಸಿರು ಅಲ್ಲದೆ ಮಿಶ್ರ ಬಣ್ಣಗಳ ಧ್ವಜವಿದು.ಡೊಮಿನಿಕಾ, ಪೋರ್ಚುಗಲ್, ಸೌತ್ ಆಫ್ರಿಕಾದ ಧ್ವಜಗಳು ಆರು ಬಣ್ಣ

ಸುಪ್ರೀಂ ಕೋರ್ಟು ತೀರ್ಪು :ಬೀದಿ ನಾಯಿಗಳು ಮತ್ತೆ ಬೀದಿಗೆ ಬರಲಿ! ಬೀದಿಯಲ್ಲಿ ತಿನಿಸು ಕೊಡುವುದು ಅಪರಾಧ

ಬೀದಿ ನಾಯಿಗಳು ಮತ್ತೆ ಬೀದಿಗೆ ಬಂದು ತಿರುಗಾಡಬಹುದು ಆದರೆ ಬೀದಿಯಲ್ಲಿ ಬೀದಿ ನಾಯಿಗಳಿಗೆ ತಿನಿಸು ಕೊಡುವುದು ಅಪರಾಧ ಎಂದು ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ಬದಲಿಸಿ ತೀರ್ಪಿತ್ತಿದೆ.ಎಲ್ಲ ಬೀದಿ ನಾಯಿಗಳಿಗೆ ನಾಯಿ ಮನೆ ಕಟ್ಟುವುದು ಕಷ್ಟ ಎಂದು ದಿಲ್ಲಿಯ ಬಿಜೆಪಿ ಸರಕಾರವು ಹೇಳಿತ್ತು. ನಾಯಿ ಪ್ರಿಯರುಗಳು ಬೀದಿ ನಾಯಿಗಳ ಮೇಲೆ ಕಠಿಣ ಕ್ರಮ ಸರಿಯಲ್ಲ ಎಂದು ವಾದಿಸಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯಾ

ಮಧ್ಯ ಪ್ರದೇಶ:ಎಲ್ಲರಿಗೂ ಎರಡು ಲಾಡು, ನನಗೆ ಒಂದು ಮುಖ್ಯಮಂತ್ರಿಗಳಿಗೆ ಸಾಮಾನ್ಯನಿಂದ ದೂರು

ಮಧ್ಯ ಪ್ರದೇಶದಲ್ಲಿ ಹಂಚಿದ ಲಾಡು ಪೊಟ್ಟಣದಲ್ಲಿ ಎಲ್ಲರಿಗೂ ಎರಡು ಲಾಡು ಸಿಕ್ಕರೆ, ಒಬ್ಬ ಸಾಮಾನ್ಯನಿಗೆ ಒಂದು ಲಾಡು ಸಿಕ್ಕಿತ್ತು. ಆತನು ಮುಖ್ಯಮಂತ್ರಿಗಳ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದ; ಪಂಚಾಯತ್ ಒಂದು ಕಿಲೋ ಸಿಹಿ ತಪ್ಪು ದಂಡ ಕೊಟ್ಟಿತು.ಈ ಘಟನೆಯು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿಸ್ವಾತಂತ್ರ‍್ಯ ದಿನಾಚರಣೆಯಂದು ನಡೆದಿದೆ. ಕಮಲೇಶ್ ಕುಶ್ವಾಹನಿಗೆ ಮಾತ್ರ ಒಂದು ಲಾಡು ಕೊಡಲಾಗಿತ್ತು ಆತನು ಒಂದಿದೆ, ಎರಡು ಕೊಡಿ ಎಂದರೂ ಸಂಘಟಕರು ಕೊಟ್ಟಿಲ್ಲ. ಆತನು

ನದಿಗಳು ಇಲ್ಲದ ಪ್ರಪಂಚದ ಅತಿ ದೊಡ್ಡ ದೇಶ

ಜಗತ್ತಿನಲ್ಲಿ ನದಿಗಳು ಇಲ್ಲದ ಅತಿ ದೊಡ್ಡ ದೇಶವಾಗಿದೆ ಸೌದಿ ಅರೇಬಿಯಾ. ಬಾವಿ, ಒಯಸಿಸ್ ಸಾಕಾಗದ ಕಾಲವಿದು.ನದಿಗಳು ಇಲ್ಲದ ದೇಶಗಳು ಈಗ ಕುಡಿಯುವ ನೀರಿಗೆ ಡಿಸಾಲಿನೇಶನ್ ಎಂಬ ಉಪ್ಪುಕಳೆ ತಂತ್ರಜ್ಞಾನವನ್ನು ನಂಬಿವೆ. ಕೆಳಗಿನವುಗಳೆಲ್ಲ ನದಿಗಳು ಇಲ್ಲದ ದೇಶಗಳಾಗಿವೆ.ಸೌದಿ ಅರೇಬಿಯಾ 70 ಶೇಕಡಾ ಕುಡಿಯುವ ನೀರನ್ನು ಉಪ್ಪು ಕಳೆ ಮೂಲಕ ಪಡೆಯುತ್ತದೆ. ಅತಿ ಹೆಚ್ಚು ಎಂದರೆ 70 ಶೇಕಡಾ ಉಪ್ಪು ಕಳೆ ತಂತ್ರಜ್ಞಾನದ ಮೂಲಕ ಕುಡಿಯುವ ನೀರು ಪಡೆಯುವ ದೇಶ ಕತಾರ್.ಯುಎಇ- ಅರಬ್

ಹಣ್ಣಿನಲ್ಲಿ ಇಂಡೋನೇಶಿಯಾ ಸೋಲಿಸಿದ ಮಲೇಶಿಯಾ

ನೆಪೆಲಿಯಂ ಲೆಪ್ಪೆಸಿಯಂ ಎಂಬ ರಾಂಬುಟಾನ್ ಹಣ್ಣು ಜಾಗತಿಕವಾಗಿ ಅರ್ಧಕ್ಕರ್ಧ ಇಂಡೋನೇಶಿಯಾದಲ್ಲಿ ಬೆಳೆಯುತ್ತಿತ್ತು; ಆ ಸ್ಥಾನವನ್ನು ಈಗ ತಾಯ್‍ಲ್ಯಾಂಡ್ ಕಸಿದುಕೊಂಡಿದೆ.ರಾಂಬುಟಾನ್ ಮೂಲ ಕೊಂಗಣ ಎಂದರೆ ಆಗ್ನೇಯ ಏಶಿಯಾ. ಅರಬ್ ವ್ಯಾಪಾರಿಗಳು ನಡುಗಾಲದಲ್ಲಿ ಇದನ್ನು ಆಫ್ರಿಕಾದ ಜಾಂಜಿಬಾರ್ ಮೊದಲಾದ ಕಡೆಗೆ ಒಯ್ದರು. ಕಳೆದ ಶತಮಾನದಲ್ಲಿ ನಡುವಣ ಅಮೆರಿಕದ ದೇಶಗಳಿಗೆ ಈ ಉಷ್ಣವಲಯದ ಹಣ್ಣಿನ ಬೆಳೆ ವಿಸ್ತರಿಸಿದೆ. ದಶಕದ ಹಿಂದಿನವರೆಗೆ ಇಂಡೋನೇಶಿಯಾ ಮುಂದಿತ್ತು. ಕಳೆದೊಂದು

ಭಾರತದಲ್ಲಿ ಆನ್‍ಲೈನ್ ಗೇಮಿಂಗ್,ಪ್ರತಿ ವರುಷ 20,000 ಕೋಟಿ ನಷ್ಟ

ಭಾರತದಲ್ಲಿ ಪ್ರತಿ ವರುಷ ಆನ್‍ಲೈನ್ ಗೇಮ್ ಆಡಿ 45 ಕೋಟಿ ಭಾರತೀಯರು 20,000 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.ಕಳೆದೊಂದು ದಶಕದಿಂದ ಭಾರತದಲ್ಲಿ ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಈಗ ಕಾನೂನು ಮೂಲಕ ಆನ್‍ಲೈನ್ ಗೇಮಿಂಗ್ ತಡೆಯಲು ನಿಯಮಾವಳಿ ತರಲಾಗುತ್ತಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಬೆಳೆದಿದ್ದು, ಹಲವರು ಸಾಲಗಾರರಾಗಿದ್ದಾರೆ. ಮತ್ತೆ ಕೆಲವರು ಸಾಲಗಾರರ ಕಾಟ ತಾಳಲಾಗದೆ ಆತ್ಮಹತ್ಯೆ

ರಾಜಧಾನಿ ಇಲ್ಲದ ದೇಶ ಯಾವುದು?

ಶಾಂತ ಮಹಾಸಾಗರದ ನವುರು ದೇಶವು ಅಧಿಕೃತ ರಾಜಧಾನಿ ನಗರ ಹೊಂದಿಲ್ಲ; ಯೇರೆನ್ ಜಿಲ್ಲೆಯಿಂದ ಆಡಳಿತ ನಡೆಸಲಾಗುತ್ತದೆ. 21 ಚದರ ಕಿಲೋಮೀಟರ್ ವಿಸ್ತೀರ್ಣದ ನವುರು ದೇಶವು ಜಗತ್ತಿನ ಮೂರನೆಯ ಅತಿ ಪುಟ್ಟ ದೇಶವಾಗಿದೆ. ಜನಸಂಖ್ಯೆ ರೀತಿಯಲ್ಲಿ ಎರಡನೆಯ ಸ್ಥಾನದಲ್ಲಿರುವ ಈ ದೇಶದಲ್ಲಿ 12,000 ಜನರು ಇದ್ದಾರೆ. ಸರಕಾರಿ ಕಚೇರಿಗಳು, ಅಧ್ಯಕ್ಷರ ನಿವಾಸ, ಸಂಸತ್ತು ಎಲ್ಲವೂ ಯೇರೆನ್ ಜಿಲ್ಲೆಯಲ್ಲಿ ಇದ್ದು, ಅದು ಆಡಳಿತ ಕೇಂದ್ರ ಎನಿಸಿದೆ. ಈ ಪುಟ್ಟ ದ್ವೀಪ ದೇಶವನ್ನು ಹಿಂದೆ

ದಿಲ್ಲಿ ಮುಖ್ಯಮಂತ್ರಿಯ ಕೆನ್ನೆಗೆ ಏಟು.ಸಭೆಯಲ್ಲಿ ರೇಖಾ ಗುಪ್ತ ಮೇಲೆ ಹಲ್ಲೆದಾಳಿಕೋರನನ್ನು ಬಂಧಿಸಿದ ಪೋಲೀಸರು

ದಿಲ್ಲಿಯ ಮಖ್ಯಮಂತ್ರಿ ಮನೆ ಕಚೇರಿ ಬಳಿ ಕೂಟವೊಂದರ ಜೊತೆಗೆ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಮಾತನಾಡುವಾಗ ಅಪರಿಚಿತನೊಬ್ಬನು ನುಗ್ಗಿ ಬಂದು ಅವರ ಕೆನ್ನೆಗೆ ಹೊಡೆದಿದ್ದಾನೆ.ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಜನ್ ಸುನ್‌ವಯ್ ಎಂಬ ಜನರ ಅಹವಾಲು ಸ್ವೀಕರಿಸುವಾಗ ಈ ಘಟನೆ ನಡೆದಿದೆ ಎಂದಿರುವ ದಿಲ್ಲಿ ಬಿಜೆಪಿ ಘಟಕವು ಘಟನೆಯನ್ನು ಖಂಡಿಸಿದೆ. ನುಗ್ಗಿದ ವ್ಯಕ್ತಿಯು ಮುಖ್ಯಮಂತ್ರಿಯ ಕೂದಲು ಎಳೆದು, ಕೆನ್ನೆಗೆ ಒಂದು ಬಾರಿಸಿ ತೂರಿ ಹೋದುದಾಗಿ ಹೇಳಲಾಗಿದೆ. ಈ

ಸ್ವೀಟ್ ಕಾರ್ನ್ ರಫ್ತುಮಾಡುವ ಪ್ರಮುಖ ದೇಶ ?

ಜಾಗತಿಕವಾಗಿ ಯುಎಸ್‌ಎ, ಯೂರೋಪಿನಲ್ಲಿ ಹಂಗೆರಿ, ಏಶಿಯಾದಲ್ಲಿ ತಾಯ್‌ಲ್ಯಾಂಡ್ ಪ್ರಮುಖ ಸ್ವೀಟ್ ಕಾರ್ನ್ ರಫ್ತು ಮಾಡುವ ದೇಶಗಳಾಗಿವೆ.ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತಿ ಹೆಚ್ಚು ಸಿಹಿ ಮೆಕ್ಕೆಜೋಳ ಬೆಳೆಯುವ ದೇಶವಾಗಿದೆ. ಮೆಕ್ಕೆಜೋಳವನ್ನು ಶೀತಲವಾಗಿಸಿ ಯುಎಸ್‌ಎ ಬಹಳಷ್ಟು ದೇಶಗಳಿಗೆ ರಫ್ತು ಮಾಡುತ್ತದೆ. ಪ್ರತಿ ವರುಷ ಈ ದೇಶದ ಸ್ವೀಟ್ ಕಾರ್ನ್ ರಫ್ತುವ್ಯವಹಾರ 10 ಕೋಟಿ ಡಾಲರ್‌ನಷ್ಟು ಇರುತ್ತದೆ. ಹಂಗೆರಿ ದೇಶವು ಎರಡನೆಯ ಸ್ಥಾನದಲ್ಲಿದೆ. ಇದು