Home Archive by category ರಾಷ್ಟ್ರೀಯ (Page 7)

ಕನ್ನಡದ ಲೇಖಕಿ ಬಾನು ಮುಷ್ತಾಕ್- ಪ್ರತಿಷ್ಟಿತ ಬೂಕರ್ ಪ್ರಶಸ್ತಿಗೆ ಭಾಜನ

ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ಬರೆದಿರುವ ಹಸೀನಾ ಮತ್ತು ಇತರ ಕತೆಗಳು ಕೃತಿಯ ಇಂಗ್ಲಿಷ್ ಅನುವಾದ ಹಾರ್ಟ್ ಲ್ಯಾಂಪ್ ಕೃತಿಯು ಪ್ರತಿಷ್ಟಿತ ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ. ದೀಪಾ ಭಸ್ತಿ ಅವರು ಬಾನು ಅವರ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದರು. ಮೇ 20ರಂದು ತೀರ್ಪು ಆಗಿದ್ದು, ಈ ಬಗೆಗೆ ಬುಧವಾರ ಅಧಿಕೃತ ಘೋಷಣೆಯಾಗಿದೆ. ಬೂಕರ್ ವಿಜೇತ ಕೃತಿಗೆ

ಶ್ರೀಹರಿಕೋಟಾ: ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶ್ರೀಹರಿಕೋಟಾದಿಂದ ತನ್ನ 101ನೇ ರಾಕೆಟ್ ಉಡಾವಣೆಯನ್ನು ಕೈಗೊಂಡಿದೆ. ಆದರೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ಮುಖ್ಯಸ್ಥ ವಿ.ನಾರಾಯಣನ್ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೋದ 101 ನೇ ಬಾಹ್ಯಾಕಾಶ ಯಾನವು ಉಡಾವಣೆಯಾದ ಸ್ವಲ್ಪ ಸಮಯದ ನಂತರ ತಾಂತ್ರಕ ದೋಷ ಕಂಡುಬಂದ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ, ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಲಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರುಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ,ಸೇನೆ ನಡೆಸಿದ ಆಪರೇಷನ್ ಸಿಂದೂರ್ಬಗ್ಗೆ ಮಾತನಾಡಲಿದ್ದಾರೆ

ಪಾಕಿಸ್ತಾನದ ಡ್ರೋನ್ ದಾಳಿ ವಿಫಲ:ಸರಣಿ ಸ್ಫೋಟಗಳು ಮತ್ತು ಮೊಳಗಿದ ಸೈರನ್ ಸದ್ದು

ಭಾರತ-ಪಾಕ್ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದ್ದು, ಇಂದು ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿದ ನಂತರ ಸರಣಿ ಸ್ಫೋಟಗಳು ಮತ್ತು ಸೈರನ್‌ಗಳು ಕೇಳಿಬರುತ್ತಿವೆ. ನಸುಕಿನ ಜಾವ 3:50 ರಿಂದ 4:45 ರ ನಡುವೆ ಕೇಳಿದ ಸ್ಫೋಟಗಳಿಂದ ಜಮ್ಮು ನಗರದ ಕೆಲವು ಭಾಗಗಳಲ್ಲಿ ಕತ್ತಲೆಯಾಗಿದ್ದು, ಆಕಾಶದಲ್ಲಿ ಯುದ್ಧಸಾಮಗ್ರಿಗಳು ಕಂಡುಬಂದವು.

ಪದ್ಮಶ್ರೀ ಪುರಸ್ಕೃತ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ನಿಧನ

ಪದ್ಮಶ್ರೀ ಪುರಸ್ಕೃತ 128 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರು ನಿಧನರಾದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಾರಾಣಸಿಯ ಬಿಎಚ್‌ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಅವರು ಮೃತರಾಗಿದ್ದು, ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಯೋಗಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದ ಶಿವಾನಂದ ಅವರಿಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್

ಮಹಾ ಕುಂಭ ಮೇಳದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ

ದಕ್ಷಿಣ ಕನ್ನಡ ಜಿಲ್ಲೆಯ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಸಂಚಾಲಕರಾದ ಡಾ. ರವಿಕಕ್ಕೆಪದವು ನೇತೃತ್ವದಲ್ಲಿ ಮಹಾ ಕುಂಭ ಮೇಳಕ್ಕೆ ತೆರಳಿದ 42 ಮಂದಿ ಸೇರಿ ಅಲ್ಲಿನ ಸ್ವಾಮಿಗಳ ನೇತೃತ್ವದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪವಿತ್ರ ಧಾರ್ಮಿಕ ಸ್ಥಳವಾದ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಮಹಾ ಕುಂಭ ಮೇಳದಲ್ಲಿ ಅನಾವರಣ ಗೊಳಿಸಲಾಯಿತು. ಈ ಸಂಧರ್ಭದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಬೇಕು ಸಮಾಜಕ್ಕೆ

ಮುಂಬೈ: ತುಳುವರ ಮನಗೆದ್ದ ಗಮ್ಮತ್ ಕಲಾವಿದರ್ ಯುಎಇ ಹವ್ಯಾಸಿ ಕಲಾವಿದರ ತಂಡ ಪ್ರದರ್ಶಿಸಿದ “ವಾ ಗಳಿಗೆಡ್ ಪುಟುದನಾ” ನಾಟಕ

ಕೊಲ್ಲಿ ರಾಷ್ಟ್ರದ ತುಳು ರಂಗ ಭೂಮಿಯಲ್ಲಿ ಚೊಚ್ಚಲ ಪ್ರದರ್ಶನದಲ್ಲೇ ಜನಮನ‌ಸೂರೆಗೊಂಡ ಗಮ್ಮತ್ ಕಲಾವಿದರ “ವಾ ಗಳಿಗೆಡ್ ಪುಟುದನಾ” ತುಳು ಸಾಂಸಾರಿಕ ಹಾಸ್ಯಮಯ ನಾಟಕ – ಮುಂಬೈ ಮಹಾನಗರದಲ್ಲಿ ಭಾನುವಾರ 27 ಅಕ್ಟೋಬರ್ 2024 ರಂದು ತಮ್ಮ ದ್ವಿತೀಯ ಪ್ರದರ್ಶನದೊಂದಿಗೆ ಅಭೂತಪೂರ್ವ ಯಶಸ್ವಿ ದಾಖಲೆಗಳೊಂದಿಗೆ ಮುಂಬೈ ತುಳುವರ ಮನಗೆದ್ದು ಹೊಸ ಭಾಷ್ಯ ಬರೆಯಿತು. ಕನ್ನಡ ಸಂಘ ಸಯನ್ ಮುಂಬೈ ಆಶ್ರಯದಲ್ಲಿ, ಅಧ್ಯಕ್ಷ ರಾದ ಶ್ರೀ ಡಾ. ಎಂ.ಜೆ. ಪ್ರವೀಣ್ ಭಟ್

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಲೋಕಾರ್ಪಣೆ

ಪಣಜಿ: ಗೋವಾದ ತುಳುವರನ್ನು ಸಂಘಟಿಸಿ ಗಣೇಶ್‌ ಕೆ. ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ತುಳುಕೂಟ ಗೋವಾ ಘಟಕ ಅದ್ದೂರಿ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆಗೊಂಡಿದೆ. ತುಳುನಾಡಿನಿಂದ ಬಂದಿದ್ದ ಗಣ್ಯರು ಹಾಗೂ ಗೋವಾದ ಪ್ರಮುಖರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ತುಳುಕೂಟ ಗೋವಾದ ಅಧ್ಯಕ್ಷ ಗಣೇಶ್‌ ಕೆ. ಶೆಟ್ಟಿ ಇರ್ವತ್ತೂರು ಗೋವಾದಲ್ಲಿ ತುಳುಕೂಟ ಆರಂಭಿಸಲು ಕಾರಣವಾದ ಅಂಶಗಳನ್ನು ವಿವರಿಸಿದರು. ಮುಂಬೈ ಮತ್ತು

ದಿಲ್ಲಿ : ವಿಮಾನಗಳಲ್ಲಿ ಬಾಂಬಿಟ್ಟ ಸುಳ್ಳು ಕರೆಗಳ ಸರಣಿ: ಮರಳಿ ಬಂದಿಳಿದ ಲಂಡನ್ ದಿಲ್ಲಿ ವಿಮಾನ

ಇದೇ ಸೋಮವಾರದಿಂದ ವಿಮಾನಗಳಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆಗಳು ಬರುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿನ 3 ಸೇರಿ ಒಟ್ಟು ೩೫ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಕಾರಣಕ್ಕೆ ವಿಮಾನಗಳನ್ನು ಬೇರೆಡೆ ತಿರುಗಿಸಿದೆ, ಇಲ್ಲವೇ ತುರ್ತಾಗಿ ಅಲ್ಲೇ ಕೆಳಕ್ಕೆ ಇಳಿಸಲಾಯಿತು. ಕಳೆದ 24 ಗಂಟೆಗಳಲ್ಲಿ ಮೂರು ಪ್ರಮುಖ ವಿಮಾನ ಯಾನಗಳು ತತ್ತರಿಸಿವೆ. ವಿಸ್ತಾರ ಸೇವೆಯ ಲಂಡನ್ ದಿಲ್ಲಿ ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿದೆ. ಜೈಪುರ ದುಬಾಯಿ, ಬೆಂಗಳೂರು

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ