Header Ads
Breaking News

ಗಿರಿಜಾ ಹೆಲ್ತ್ ಕೇರ್ ಸರ್ಜಿಕಲ್ ಉಡುಪಿ : ಜಿಲ್ಲಾಡಳಿತಕ್ಕೆ ಉಚಿತ ಔಷಧಿ ಹಸ್ತಾಂತರ

ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಗಿರಿಜಾ ಹೆಲ್ತ್ ಕೇರ್ ಸರ್ಜಿಕಲ್ ಸಂಸ್ಥೆಯ ವತಿಯಿಂದ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅವಶ್ಯವಿರುವ ಉಚಿತ ಔಷಧಿಗಳ ಹಸ್ತಾಂತರ ಕಾರ್ಯಕ್ರಮವು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಕೊವೀಡ್ ಸಂಕಷ್ಟ ಕಾಲದಲ್ಲಿಯೂ ತಾವು ಮಾಡಿದ ವ್ಯಾಪಾರದಲ್ಲಿ ಬಂದಂತಹ ಲಾಭಂಶದಲ್ಲಿ ಒಂದಿಷ್ಟು ಪಾಲನ್ನು ಬಡ ಕೊವಿಡ್ ರೋಗಿಗಳ ಸಹಾಯಕ್ಕೆ ಉಡುಪಿಯ ಸಂಸ್ಥೆಯೊಂದು ನೀಡಲು ಮುಂದಾಗಿದೆ. ಉಡುಪಿಯ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ ಸಂಸ್ಥೆ ಕೊವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅವಶ್ಯವಿರುವ ಔಷಧಿಗಳನ್ನ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ಸುಮಾರು ಒಂದು ಸಾವಿರ ಮಂದಿಗೆ ಬೇಕಾಗುವಷ್ಟು ಔಷಧಗಳನ್ನ ಉಚಿತವಾಗಿ ಸಂಸ್ಥೆ ಜಿಲ್ಲಾಡಳಿತಕ್ಕೆ ನೀಡಿದ್ದು, ಸಂಸ್ಥೆಯ ಸಾಮಾಜಿಕ ಕಳಕಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಗಿರಿಜಾ ಹೆಲ್ತ್ ಕೇರ್ ಸಂಸ್ಥೆ ಜಿಲ್ಲಾಡಳಿತದೊಂದಿಗೆ ಅರಂಭದಿಂದಲೂ ಸಹಕರಿಸುತ್ತಿದೆ. ಜಿಲ್ಲೆಯಲ್ಲಿ ಐಸಿಯೂ ಬೆಡ್ ಗಳು ತುರ್ತಾಗಿ ಬೇಕಾದ ಸಂಧರ್ಭದಲ್ಲಿ ಕೂಡಲೇ ತರಿಸಿಕೊಟ್ಟಿದ್ದರು. ಇದೀಗ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವರಿಗೆ ಅಗತ್ಯ ಔಷಧಿಗಳನ್ನ ನೀಡಿರುತ್ತಾರೆ. ಕೊವಿಡ್ ವೈರಾಣು ವಿರುದ್ದ ಹೋರಾಟದ ಮಹತ್ವದ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿರುವ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗಿರಿಜಾ ಹೆಲ್ತ್ ಸೆಂಟರಿನ ಅಡಳಿತ ಪಾಲುದಾರ ರವೀಂದ್ರ ಶೆಟ್ಟಿ ಮಾತನಾಡಿ ಕೊವಿಡ್ ಸಂಧರ್ಭದಲ್ಲಿ ಜನ ಸಂಕಷ್ಟದಲ್ಲಿದ್ದಾರೆ.ನಮ್ಮ ಉದ್ಯಮದಲ್ಲಿ ಒಂದಷ್ಟು ಅದಾಯ ಬಂದಿದೆ ಇದರಲ್ಲಿ ಒಂದು ಪಾಲು ಸಾಮಾಜಿಕ ಕಾರ್ಯ ಬಳಸುವ ಉದ್ದೇಶದಿಂದ ಔಷಧಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದೇವೆ ಎಂದರು. ಇದು ಜಿಲ್ಲೆಯ ಬಡ ಜನರಿಗೆ ಉಪಯೋಗವಾಗಲಿ ಎಂದರು.

ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಔಷಧಿ ನಿಯಂತ್ರಣಾಧಿಕಾರಿ ಕೆ.ವಿ. ನಾಗರಾಜ್, ಗಿರಿಜಾ ಹೆಲ್ತ್ ಕೇರ್ ಸರ್ಜಿಕಲ್ ಸಂಸ್ಥೆಯ ಪಾಲುದಾರ ಹರೀಶ್ ಕುಮಾರ್ ಹಾಗೂ
ಗಿರಿಜಾ ಹೆಲ್ತ್ ಕೇರ್ ಸರ್ಜಿಕಲ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *