ಮಂಜೇಶ್ವರದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ

ಮಂಜೇಶ್ವರ : ಕೇಂದ್ರ ಸರಕಾರದ ದುರಾಡಳಿತದಿಂದಾಗಿ ದೇಶ ತತ್ತರಿಸಿ ಹೋಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ನರೇಂದ್ರ ಮೋದಿಯವರ ಅಚ್ಚೇ ದಿನ್ ಕೊಡುಗೆಯಾಗಿದೆ. ಈ ದೇಶದಿಂದ ಮೋದಿ ಆಡಳಿತವನ್ನು ಕಿತ್ತೆಸೆಯುವ ಮೂಲಕ ದೇಶವನ್ನು ರಕ್ಷಿಸುವ ಕೆಲಸ ಆಗಲೇಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿದ್ದಾರೆ.

ಅವರು ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿಯ ವತಿಯಿಂದ ಹೊಸಂಗಡಿ ಚೆಕ್ ಪೋಸ್ಟ್ ಬಳಿಯ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇರ್ಷಾದ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದ ಪ್ರತಿಭಟನೆಯಲ್ಲಿ ಮೀಂಜ ಮಂಡಲ ಕಾಂಗ್ರೆಸ್ ಅಧ್ಯಕ್ಷ ಸಂಕಬೈಲು ಸತೀಶ ಅಡಪ್ಪ, ಕಾಂಗ್ರೆಸ್ ಮುಖಂಡರಾದ ದಿವಾಕರ ಎಸ್ ಜೆ, ಇಕ್ಬಾಲ್ ಕಳಿಯೂರು, ಜಗದೀಶ್ ಮೂಡಂಬೈಲು , ಆರಿಫ್ ಮಚ್ಚಂಪಾಡಿ, ಕಲೀಲ್ ಬಜಾಲ್ , ಅಜೀಜ್ ಕಲ್ಲೂರು, ಯಾಕೂಬ್ ಮಚ್ಚಂಪಾಡಿ, ಯೂತ್ ಕಾಂಗ್ರೆಸ್ ಮುಖಂಡರಾದ ಶರೀಫ್ ಅರಿಬೈಲು, ವಿನೋದ್ ಪಾವೂರು, ಇಮ್ತಿಯಾಜ್, ಹುಸೇನ್ ಕುಬಣೂರು, ಮೊಯಿನುದ್ದೀನ್ ಪೆರಿಂಗಡಿ, ಸಮದ್ ಪೊಯ್ಯತ್ತಬೈಲು, ನವಾಜ್, ಮುವಾಸ್ ಮುಂತಾದವರು ನೇತೃತ್ವ ನೀಡಿದರು.

Related Posts

Leave a Reply

Your email address will not be published.