ಜೇಸಿಐ ಪಂಜ ಪಂಚಶ್ರೀ ಕ್ಷಯ ಮುಕ್ತ ಭಾರತ ಕಾರ್ಯಕ್ರಮ ಜೇಸಿಐ ಪಂಜ ಪಂಚಶ್ರೀ, ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದಕ್ಷಿಣಕನ್ನಡ, ಕ್ಷಯ ಚಿಕಿತ್ಸಾ ಘಟಕ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು ಇದರ ಆಶ್ರಯದಲ್ಲಿ ಟಿ.ಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅಭಿಯಾನ ಅಂಗವಾಗಿ ಕ್ಷಯ ಮುಕ್ತ ಭಾರತ 2025, ಮಾಹಿತಿ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಕೆವಿಜಿ
ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರವೆಸಗಿದ್ದ ಪೊಲೀಸ್ ಅಧಿಕಾರಿ ಉಮೇಶ್ಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ, ಅಪರಾಧಿಗೆ ವಿಧಿಸಲಾದ 1 ಲಕ್ಷ ದಂಡವನ್ನು ಮೇಲ್ಮನವಿ ಅವಧಿ ಮುಗಿದ ಬಳಿಕ ಸಂತ್ರಸ್ತೆಗೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತರ ಪರಿಹಾರ ಕಾಯ್ದೆಯಡಿ ಸಂತ್ರಸ್ಥೆಗೆ ಸಿಗಬಹುದಾದ
ರಾಜ್ಯ ನಗರಾಭಿವೃದ್ದಿ ಸಚಿವರಾದ ಭೈರತಿ ಬಸವರಾಜ್ ಅವರು ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ನಗರದ ಹಂಪನಕಟ್ಟೆ ಜಂಕ್ಷನ್, ಎಮ್ಮೆಕೆರೆ ಈಜುಕೊಳ, ಕಂಕನಾಡಿ ಮಾರುಕಟ್ಟೆ, ಕದ್ರಿ ಪಾರ್ಕ್, ವೆನ್ಲಾಕ್ ನ ನೂತನ ಕಾಮಗಾರಿ, ಮಂಗಳಾದೇವಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲ ರಾವ್, ಮನಪಾ ಕಮಿಷನರ್ ಅಕ್ಷಯ್ ಶ್ರೀಧರ್ ,
ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದ ದೇಶದ ಮಧ್ಯಮ ವರ್ಗದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ 2022 -23 ರ ಬಜೆಟ್ ನಿರೀಕ್ಷೆಗಳ ಪಟ್ಟಿ ದೊಡ್ಡದಿದೆ. ಆದಾಯ ತೆರಿಗೆ ಪರಿಹಾರದಿಂದ ಹಿಡಿದು ಭವಿಷ್ಯ ನಿಧಿ ಹೂಡಿಕೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡುವವರೆಗೆ ಮಧ್ಯಮ ವರ್ಗ ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಕೇಂದ್ರ ಸರ್ಕಾರ
ಭಾರತಕ್ಕೆ ರಾಷ್ಟ್ರಪಿತ ಎಂದು ಯಾರು ಇರಲು ಸಾಧ್ಯವಿಲ್ಲ. ಆದರೆ, ರಾಷ್ಟ್ರಪುತ್ರನಾಗಬಹುದು ಅಷ್ಟೇ. ಸುಭಾಷ್ ಚಂದ್ರ ಬೋಸ್ರನ್ನು ದೇಶದ ಮೊದಲ ಪ್ರಧಾನಿ ಎಂದು ಘೋಷಿಸಬೇಕು ಎಂದು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಭಾನುವಾರ ನಡೆದ ಧರ್ಮ ಸಂಸದ್ನಲ್ಲಿ ಒತ್ತಾಯಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ದೇಶವನ್ನು ಒಗ್ಗೂಡಿಸಿ ಹೋರಾಡಿದ ಗಾಂಧಿ ಅವರನ್ನು ದೇಶದ ರಾಷ್ಟ್ರಪಿತ ಎಂದು ನಾವು ಕರೆಯುತ್ತೇವೆ. ಈ ಮೂಲಕ ದೇಶದ ಜನರು ಗಾಂಧಿ
ಬಂಟ್ವಾಳ ತಾಲೂಕಿನ ಕುರ್ನಾಡುವಿನ ಪಿದಮಲೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಗೋಂದೋಲು ಪೂಜೆ ಜನವರಿ 30ರಿಂದ ಫೆಬ್ರವರಿ 4ರ ವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಹೋಮ, ಹಾಗೂ ಗೋಂದೋಲು ಪೂಜೆಯು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.ಜನವರಿ 30ರಂದು ಶ್ರೀ ಕ್ಷೇತ್ರ
ಮುಂದಿನ ತಿಂಗಳು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯನ್ನು ನೀಡುತ್ತವೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ದೇಶದ ಚಿತ್ತ ಉತ್ತರ ಪ್ರದೇಶದ ಚುನಾವಣೆಯತ್ತ ನೆಟ್ಟಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಲವಾರು ಸಚಿವ-ಶಾಸಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು
ಮೂಡುಬಿದಿರೆ: ನಾಗರಕಟ್ಟೆ ದೇರಾಡಿ ಬ್ರಹ್ಮಮುಗೇರ ಶ್ರೀಮಹಾಂಕಾಳಿ ದೈವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕರ ಪ್ರಯತ್ನದಿಂದ 7 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನದ ಅಭಿವೃದ್ಧಿಗೆ ಶಿಲಾನ್ಯಾಸ ಮಾಡಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ
ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿಫೆಬ್ರವರಿ-ಮಾರ್ಚ್ನಲ್ಲಿ ಚುನಾವಣೆ ನೆಡೆಯಲಿದೆ. ಅವುಗಳು ನೀಡುವ ಫಲಿತಾಂಶವು ರಾಷ್ಟ್ರೀಯ ರಾಜಕೀಯದ ಹಾದಿಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನೆಡೆಯುತ್ತಿದೆ. ವಾಸ್ತವವಾಗಿ ಉತ್ತರ ಪ್ರದೇಶ ಚುನಾವಣೆ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಮುಂದಿನ ಚುನಾವಣೆಯ ದಿಕ್ಕೂಚಿ ಅಗಿದೆ. ನವದೆಹಲಿಯ ಅಧಿಕಾರದ ಹಾದಿಯು ಲಕ್ನೋದಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದ್ದು
ದೇಶ ವಿರೋಧಿ ಸುದ್ದಿ ಪ್ರಕಟಿಸುತ್ತಿದ್ದವು ಎಂಬ ಆರೋಪದಡಿ 35 ಯೂ ಟ್ಯೂಬ್ ಚಾನಲ್ಗಳು, 2 ವೆಬ್ಸೈಟ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬ್ಲಾಕ್ ಮಾಡಿರುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ತಿಳಿಸಿದ್ದಾರೆ. ಬ್ಲಾಕ್ ಮಾಡಲಾದ ಖಾತೆಗಳನ್ನು ಪಾಕಿಸ್ಥಾನದಿಂದ ನಿರ್ವಹಿಸಲಾಗುತ್ತಿತ್ತು. ದೇಶ ವಿರೋಧಿ ಸುದ್ದಿಗಳನ್ನು ಅಸಂಘಟಿತ ರೀತಿಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು ಎಂಬ ಮಾಹಿತಿ ಇದೆ. ಬ್ಲಾಕ್ ಮಾಡಲಾದ