Home Posts tagged #manel

ಮಳಲಿ ಮಸೀದಿ ದೇವಸ್ಥಾನ ಆಗಿತ್ತು ಎಂಬುದು ಅಪ್ಪಟ ಸುಳ್ಳು ಸುದ್ದಿ : ಮೌನವಾಗಿದ್ದ ಗ್ರಾಮದಲ್ಲಿ ಅತಂಕ ಸೃಷ್ಟಿಸಿದ ಮಾಧ್ಯಮಗಳು

“ಮಂಗಳೂರಿನಲ್ಲಿ ದರ್ಗಾ ನವೀಕರಣ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆ” ಎಂಬ ಸುದ್ದಿ ಕನ್ನಡ ಟಿವಿ ಮಾಧ್ಯಮ ಮತ್ತು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಪಾಡಿಗೆ ತಾನಿದ್ದ ಮಳಲಿ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಮಂಗಳೂರು ನಗರ ಪೊಲೀಸರು ಎರಡೆರಡು ವಾಹನಗಳಲ್ಲಿ ಮಳಲಿ ಗ್ರಾಮಕ್ಕೆ ತೆರಳಿ ಮಸೀದಿ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.ದಕ್ಷಿಣ ಕನ್ನಡ

ದೇವಸ್ಥಾನ ಇದ್ದರೆ, ಸಾರ್ವಜನಿಕವಾಗಿ ಮಸೀದಿ ಕಟ್ಟಡ ತೆರವು ಮಾಡ್ತೇವಾ : ಮಳಲಿ ಮುಸ್ಲಿಮರ ಪ್ರಶ್ನೆ ?

ಮಂಗಳೂರಿನ ಗುರುಪುರ ಮಳಲಿ ವ್ಯಾಪ್ತಿಯ ಮಣೇಲ್ ಗ್ರಾಮವು ರಾತೋರಾತ್ರಿ ಬಾರೀ ಸುದ್ದಿಗೆ ಗ್ರಾಸವಾಗಿದೆ. ಸುದ್ದಿಗೆ ಗ್ರಾಸವಾದ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ತೆರಳಿದಾಗ ಮಾಧ್ಯಮಗಳ ಧೋರಣೆ ಬಗ್ಗೆ ಇಲ್ಲಿನ ಜನಕ್ಕೆ ತೀವ್ರವಾದ ನಿರಾಶೆ ಇರುವುದು ಮೊದಲ ಮಾತಿನಲ್ಲೆ ಕಂಡಿತು. ಹೇಗೋ ವಾಟ್ಸಪ್ , ಫೇಸ್ ಬುಕ್ ನಲ್ಲಿ ಬಂದಿರುವುದನ್ನು ನೀವು ಸುದ್ದಿ ಮಾಡಿದ್ದೀರಿ, ಯಾರೂ ಇಲ್ಲಿಗೆ ಬಂದು ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿ ಸುದ್ದಿ ಮಾಡಿಲ್ಲ, ಇನ್ನೂ ನಾವು ಹೇಳುವಂತಹದು
How Can We Help You?