Home Posts tagged #puttur (Page 12)

ಜನರು ಮಾರಕ ಕಾಯಿಲೆಗೆ ಬಲಿಯಾಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ:ಬಿ.ಎಂ. ಭಟ್

ಮಳೆಗಾಲದಲ್ಲಿ ಕೊಳಚೆ ಪ್ರದೇಶದ ಸ್ವಚ್ಚತೆ, ವೈರಸ್ ಉತ್ಪತ್ತಿ ಆಗುವ ಪ್ರದೇಶಗಳ ಗುರುತಿಸಿ ಕ್ರಿಮಿನಾಶಕ ಸಿಂಪಡಿಸುವುದು ಸೇರಿದಂತೆ ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಯಾವುದೇ ರೋಗ ಹರಡದಂತೆ ರಕ್ಷಣೆ ಒದಗಿಸಬೇಕಾದ್ದು ಸರಕಾರದ, ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ. ಆದರೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಜನ ಡೆಂಗ್ಯೂ ಮೊದಲಾದ ಮಾರಕ

ಪುತ್ತೂರಿನಿಂದ ಕಾಟುಕುಕ್ಕೆಗೆ ಬಸ್ ಸೇವೆ – ಸಾರಿಗೆ ಇಲಾಖೆ ಕಮಿಷನರ್ ಜೊತೆ ಅಶೋಕ್ ರೈ ಮಾತುಕತೆ

ಪುತ್ತೂರು: ಪುತ್ತೂರಿನಿಂದ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಪ್ರಾರಂಭ ಮಾಡುವಲ್ಲಿ ಇಲಾಖೆಯ ಅನುಮತಿಯ ಕುರಿತು ಸಾರಿಗೆ ಇಲಾಖೆಯ‌ಕಮಿಷನರ್ ಯೋಗಿಶ್ ರವರ ಜೊತೆ ಶಾಸಕ ಅಶೋಕ್ ರೈ ಮಾತುಕತೆ ನಡೆಸಿದ್ದಾರೆ.ಕಾಟುಕುಕ್ಕೆಗೆ ಅಂತರಾಜ್ಯ ಬಸ್ ಸೇವೆಗೆ ಪರವಾನಿಗೆ ಅಗತ್ಯವಾಗಿದೆ. ಈ ಹಿಂದೆ ಕಾಟುಕುಕ್ಕೆಗೆ ಇದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಿಂದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿಗೆ ಅನೇಕ ವಿದ್ಯಾರ್ಥಿಗಳು

ಗ್ರಾಪಂ ಕಚೇರಿಯಲ್ಲಿ ನಡೆಯುತ್ತಿದ್ದ 9/11 ನ್ನು ಮುಡಾಕ್ಕೆ ಮಾಡಿಸಿದ್ದೇ ಬಿಜೆಪಿ ಸರಕಾರ

ಪುತ್ತೂರು: ಮನೆ ಕಟ್ಟುವಾಗ ಅಗತ್ಯವಾಗಿ ಬೇಕಾದ 9/11 ಪತ್ರ ಗ್ರಾಪಂ ಕಚೇರುಯಲ್ಲೇ ನೀಡುವಂತೆ ಹಿಂದಿನ ಸಿದ್ದರಾಮಯ್ಯ ಸರಕಾರ ಆದೇಶ ಮಾಡಿತ್ತು ಆದರೆ ಹಿಂದಿನ ಬೊಮ್ಮಾಯಿ ನೇತೃತ್ಬದ ಬಿಜೆಪಿ ಸರಕಾರ ಅದನ್ನು ಮುಡಾಗೆ ಶಿಫ್ಟ್ ಮಾಡಿ ಜನರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಸರಕಾರ ಎಂದಿಗೂ ಜನರಿಗೆ ತೊಂದರೆ ಕೊಡುವುದೇ ಇಲ್ಲ. ಬಿಜೆಪಿ ಸರಕಾರ

ಪುತ್ತೂರು: ನೂತನ ಆಧಾರ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಪುತ್ತೂರು: ನೂತನ ಆಧಾರ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ನೂತನ ಆಧಾರ್ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪುತ್ತೂರು ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ಮಾಡಿಸಲು ಬೆಳಿಗ್ಗೆ 5 ಗಂಟೆಗೆ ಎದ್ದು ಅಂಚೆ ಕಚೇರಿ ಮುಂದೆ ಇನ್ನು ಕ್ಯೂ ನಿಲ್ಲುವ ಅಗತ್ಯವಿಲ್ಲ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ನೂತನ ಕೇಂದ್ರದಲ್ಲಿ 18 ವರ್ಷ

ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಕಾರ್ಯಕ್ರಮ

ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿ 2024 2025 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ಉದ್ಘಾಟನಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರು ಮಾತನಾಡಿ ಇಂದಿನ ಎಳೆಯರು ನಾಡಿನ ನಾಳಿನ ನಾಯಕರು. ಆ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅವರಿಗೆ ಪ್ರಜಾಪ್ರಭುತ್ವದ ನೈಜ

ಪುತ್ತೂರಿನ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ,ಕೆ ಸೀತಾರಾಮ ರೈ ಸವಣೂರು ಮಾಹಿತಿ

ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು ಇವರಿಂದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಮಾಸ್ ಲಿಮಿಟೆಡ್ ನ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು ಹೇಳಿದರು. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಶಾಸಕ ಅಶೋಕ್ ಕುಮಾರ್ ರೈ ಅವರು ಅಡಿಕೆ […]

ಉಪ್ಪಿನಂಗಡಿ: ಸಮುದಾಯ ಆರೋಗ್ಯ ಕೇಂದ್ರ,ಆರೋಗ್ಯ ರಕ್ಷಾ ಸಮಿತಿ ಸಭೆ

ಪುತ್ತೂರು: ಸಮುದಾಯ ಆರೋಗ್ಯ ಕೇಂದ್ರಗಳು ಜನ ಸ್ನೇಹಿಯಾಗುವ ಮೂಲಕ ಜನರಿಗೆ ಹತ್ತಿರವಾಗಬೇಕು, ಚಿಕಿತ್ಸೆಗೆ ಬರುವ ಪ್ರತೀಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಸಿಗಬೇಕು, ಯಾವುದೇ ಲೋಪ ದೋಷಗಳು ಬಾರದಂತೆ ಎಚ್ಚರವಹಿಸಬೇಕು  ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಆರೋಗ್ಯ ಕೇಂದ್ರದಲ್ಲಿನ ಸಿಬಂದಿಗಳಿಗೆ ರಕ್ಷಾ ಸಮಿತಿಗೆಮಹತ್ತರವಾದ ಜವಾಬ್ದಾರಿ ಇದೆ. ಕೇಂದ್ರಕ್ಕೆ ಬರುವ

ಬನ್ನೂರು: ಧರೆಕುಸಿತಕ್ಕೊಳಗಾದ ಪ್ರದೇಶಕ್ಕೆ ಶಾಸಕರ ಭೇಟಿ: ಗರಿಷ್ಠ ಪರಿಹಾರ ನೀಡುವಂತೆ ಸೂಚನೆ

ಪುತ್ತೂರು;ಧರೆ ಕುಸಿದು ಮನೆಗೆ ಹಾನಿಯದ ಬನ್ನೂರು ಜೈನರ ಗುರಿಗೆ ಶಾಸಕರಾದ ಅಶೋಕ್ ರ‍್ಯಯವರು ಸನಿವಾರ ಭೇಟಿ ನೀಡಿ ಕುಟುಂಬದ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮನೆ ಮಾಲಿಕ ಅಬ್ದುಲ್ ಮಜೀದ್‌ರವರು ನಡೆದ ಘಟನೆಯ ಬಗ್ಗೆ ಶಾಸಕರಲ್ಲಿ ವಿವರಿಸಿದರು. ಮನೆಯ ಗೋಡೆಗೆ ಧರೆ ಜರಿದು ಬಿದ್ದು ಮಕ್ಕಳು ಮಣ್ಣಿನಡಿಯಲ್ಲಿ ಬಿದ್ದರೂ ಪವಾಡ ಸದೃಶಪಾರಾಗಿದ್ದು ಮನೆ ಗೋಡೆ ಮತ್ತು ಮಾಡು ಸಂಪೂರ್ಣ ಜಖಂಗೊಂಡಿದೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಶಾಸಕರಲ್ಲಿ

ವಿಟ್ಲ: ಎಲ್.ಎನ್.ಕೂಡೂರು ಇನ್ನಿಲ್ಲ

ವಿಟ್ಲ : ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ವಿಟ್ಲಕಸಬಾ ಗ್ರಾಮದ ಕೂಡೂರು ನಿವಾಸಿ ಎಲ್.ಎನ್.ಕೂಡೂರು(67) ಅವರು ಜೂ.30ರಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರು ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ದೇಗುಲದ ಬ್ರಹ್ಮಕಲಶ ಸಂಭ್ರಮದ ರೂವಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು.

ಬನ್ನೂರು : ಧರೆ ಕುಸಿತ ಮನೆಗೆ ಹಾನಿ

ಪುತ್ತೂರಿನ ಬನ್ನೂರು ಜೈನರ ಗುರಿಯಲ್ಲಿ ಭಾರೀ ಮಳೆಗೆ ಧರೆ ಕುಸಿತಗೊಂಡು ಮನೆ ಹಾನಿಗೊಳಗಾಗಿದ್ದು ,ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಶಾಸಕರು ಮನೆಯ ಮಾಲಿಕ ಮಜೀದ್ ರವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಶಾಸಕರು ಬೆಂಗಳೂರಿನಲ್ಲಿದ್ದು ಘಟನಾ ಸ್ಥಳಕೆ ಶಾಸಕರ ಕಚೇರಿ ಸಿಬಂದಿಗಳು ಭೇಟಿ ನೀಡಿದ್ದು ಕುಟುಂಬಕ್ಕೆ ಕರೆಮಾಡಿದ ಶಾಸಕರು ಸಾಂತ್ವನ ಹೇಳಿದ್ದು ಸರಕಾರದಿಂದ ತಕ್ಷಣ ಪರಿಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.