ಪೆರ್ನಾಜೆ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನಲ್ಲಿ ಜ.2 ರಂದು “ಪೆರ್ನಾಜೆ ಪ್ರತಿಭಾ ಲಾಲಿತ್ಯ 2023 24 ರ ಪೆರ್ನಾಜೆ ಶ್ರೀ ದಿ. ಸೀತಾರಾಮ್ ಭಟ್ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪರಮಪೂಜ್ಯ ಸಾದ್ವಿ ಶ್ರೀ ಶ್ರೀ ಮಾತಾ ನಂದಮಯೀ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಈ ಸಂಸ್ಥೆ ಉತ್ತರೋತ್ತರ
ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇದರ ವತಿಯಿಂದ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿಯ ವೈಗಾ ಎಂ ಪ್ರಥಮ ಸ್ಥಾನವನ್ನು ಪಡೆದುರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ದರ್ಬೆ ಸುದರ್ಶನ್ ಎಂಟರ್ಪ್ರೈಸಸ್ ನ ಮಾಲಕರಾದ ಮನೋಜ್ ಟಿ ವಿ ಹಾಗೂ ಸಂಧ್ಯಾ ಎಂ ಇವರ ಪುತ್ರಿ.
ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿ, ಶ್ರೀರಾಮನ ಪ್ರತಿಷ್ಠಾಪನೆ ನಡೆಯಲಿರುವ ಸಂದರ್ಭದಲ್ಲಿ ಹಿಂದುಗಳು ಒಗ್ಗಟ್ಟಾಗಿ ಭಕ್ತಿಭಾವದಿಂದ ನಡೆದುಕೊಳ್ಳುವ ಕಾರ್ಯವಾಗುತ್ತಿದೆ. ಇದನ್ನು ನೋಡಿ ಹತಾಶೆಯ ಭಾವನೆಯಿಂದ ರಾಜ್ಯ ಸರ್ಕಾರದ ಪ್ರಮುಖರು ಹಿಂದು ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಇದನ್ನು ವಿಶ್ವ ಹಿಂದು ಪರಿಷತ್ ಹಾಗೂ ಇತರ ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ
ಪುತ್ತೂರು: ದ.ಕ. ಜಿಲ್ಲಾ ವಾಲಿಬಾಲ್ ಸಂಸ್ಥೆ ಮತ್ತು ಪುತ್ತೂರು ತಾಲೂಕು ವಾಲಿಬಾಲ್ ಸಂಸ್ಥೆ ಹಾಗೂ ಸುದಾನ ವಸತಿಯುತ ಶಾಲೆ ಆಶ್ರಯದಲ್ಲಿ 14,17,19 ವಯೋಮಾನದ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಬಾಲಕ ಬಾಲಕಿಯರ ವಾಲಿ ಬಾಲ್ ಚಾಂಪಿಯನ್ ಶಿಪ್ 2023 ಜ.6ರಂದು ಬೆಳಗ್ಗೆ 9ಗಂಟೆಗೆ ಸುದಾನ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ದ. ಕ. ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಬಿ.ಎಸ್. ಸತೀಶ್ ಕುಮಾರ್ ಹೇಳಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಸವಣೂರು ವಿದ್ಯಾಸಂಸ್ಥೆಯ ಸಂಚಾಲಕ
ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ, ಮೇಸ್ತ್ರಿ ಕಂ ಗುತ್ತಿಗೆದಾರ ವಿಜಯ್ ಕುಮಾರ್ (38 ವ.) ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಪುತ್ತೂರಿನಲ್ಲಿ ನಡೆದ ಮರಾಟಿ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜಯ್ ಕುಮಾರ್ ಅವರಿಗೆ ವಿವಾಹ ನಡೆಸಲು ಮನೆಯವರು ಸಿದ್ಧತೆ ನಡೆಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ
ಪುತ್ತೂರು : ಪೆರ್ನಾಜೆ ಬಳಿ ಕೃಷಿತೋಟಕ್ಕೆ ಒಂಟಿಸಲಗ ದಾಳಿ ಮಾಡಿದ್ದು, ಅಪಾರ ನಷ್ಟ ಸಂಭಸಿದೆ ತೋಟದಲ್ಲಿದ್ದ ಅಡಿಕೆ,ಬಾಳೆ,ತೆಂಗು ಗಿಡಗಳು ನಾಶಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದ್ದು ಜನತೆ ಅದರಲ್ಲೂ ಕೃಷಿಕರು ಆನೆ ದಾಳಿಯಿಂದ ಕಂಗಲಾಗಿದ್ದಾರೆ. ಪುತ್ತೂರಿನ ಪೆರ್ನಾಜೆ ಎಂಬಲ್ಲಿ ಬುಧವಾರ ತಡರಾತ್ರಿ ಕಾಡಾನೆ ಯೋಟಕ್ಕೆ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ಗಿಡ ಮರಗಳನ್ನು ನಾಶ ಮಾಡಿದೆ.
ಪುತ್ತೂರು: ಡಾಂಬರ್ ನಲ್ಲಿ ಸಿಲುಕಿದ ನಾಗರಹಾವೊಂದನ್ನು ಪುತ್ತೂರಿನ ಉರಗಪ್ರೇಮಿ ತೇಜಸ್ ಬನ್ನೂರು ರಕ್ಷಿಸಿ ಹಾವಿಗೆ ಜೀವದಾನ ಮಾಡಿದ್ದಾರೆ.ಡಾಂಬರ್ ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾವನ್ನು ಎರಡು ದಿನಗಳ ಕಠಿಣ ಪರಿಶ್ರಮದೊಂದಿಗೆ ತೇಜಸ್ ರಕ್ಷಿಸಿದ್ದು, ತೇಜಸ್ ಕಾರ್ಯಕ್ಕೆ ಸಾಮಾಜಿಕ ತಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತೇಜಸ್ ತಾನು ಹಾವನ್ನು ರಕ್ಷಿಸುವ ಕಾರ್ಯಾಚರಣೆಯ ವಿಡಿಯೋವನ್ನು ತಮ್ಮ ಗೆಳೆಯರೊಂದಿಗೂ ಹಂಚಿಕೊಂಡಿದ್ದಾರೆ. ಉರಿ ಬಿಸಿಲಿನಲ್ಲಿ
ಪುತ್ತೂರು: ಶ್ರೀ ರಾಮಜನ್ಮಭೂಮಿ ಆಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಿತು. ಪುತ್ತೂರಿನ 45 ಉಪವಸತಿ ಕೇಂದ್ರದ ಪ್ರಮುಖರಿಗೆ ಪವಿತ್ರ ಅಕ್ಷತೆಯನ್ನು ಗುರುಪುರ ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮಿಜೀಯವರು ವಿತರಿಸಿದರು.ಪುತ್ತೂರು ನಗರದಿಂದ 45 ಉಪವಸತಿ ಕೇಂದ್ರಗಳ ಪ್ರಮುಖರಿಗೆ ರಾಜಶೇಖರಾನಂದ ಸ್ವಾಮಿಜಿಯವರು ಅಕ್ಷತೆ
ಜೋಸ್ ಆಲುಕಾಸ್… ಚಿನ್ನಾಭರಣ ಸಂಸ್ಥೆಗಳ ಪೈಕಿ ಹೆಸರುವಾಸಿಯಾಗಿರುವ ಪ್ರತಿಷ್ಟಿತ ಅಂತರಾಷ್ಟ್ರೀಯ ಚಿನ್ನಾಭರಣ ಮಳಿಗೆ.. ಪುತ್ತೂರಿನ ಕೆಎಸ್ ಆರ್ ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸ್ತಾ ಇರೋ ಈ ಸಂಸ್ಥೆ ಈಗಾಗಲೇ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿದ್ದು ಇದೀಗ ಸಂಸ್ಥೆಗೆ 5ವರ್ಷಗಳ ಸಂಭ್ರಮಾಚರಣೆ. ಹಾಗಾಗಿ ಮಳಿಗೆಯಲ್ಲಿ ಡಿ.2ರಿಂದ ಸುವರ್ಣ ವರ್ಷ @5 ವಾರ್ಷಿಕ ಆಚರಣೆಗಳು ಪ್ರಾರಂಭವಾಗಲಿದೆ.. ಈ ಸಂಭ್ರಮಾಚರಣೆಯ ಪ್ರಯುಕ್ತ ರೂ. 50000
ಪುತ್ತೂರು: ಹೃದಯಾಘಾತದಿಂದ ನವವಿವಾಹಿತೆ ಸಾವನ್ನಪ್ಪಿದ ಘಟನೆ ಪಡುವನ್ನೂರು ಗ್ರಾಮದ ಪದಡ್ಕದಲ್ಲಿ ನಡೆದಿದೆ. ಪುಷ್ಪಾ (22) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಅವರಿಗೆ ಮುಂಜಾನೆ ವೇಳೆಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆ ತಲುಪುವ ಮೊದಲೇ ಪುಷ್ಪಾ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪುಷ್ಪಾ ಅವರು ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ.




























